ಮುಲ್ಕಿ ಅಡುಗೆ ಅನಿಲ ಅಸಮರ್ಪಕ ವಿತರಣೆ

Prakash M Suvarna

ಮುಲ್ಕಿ ಅಡುಗೆ ಅನಿಲ ವಿತರಣಾ ಕೇಂದ್ರವು ಮುಂದಿನ ತಿಂಗಳ ಒಳಗೆ ವಿತರಣೆಯನ್ನು ಸಮರ್ಪಕ ಗೊಳಿಸದಿದ್ದಲ್ಲಿ ವಿತರಣಾ ಕೇಂದ್ರದ ವಿರುದ್ದ ಕ್ರಮ ಕೈಗೊಂಡು ಇನ್ನೊಂದು ಏಜನ್ಸಿ ಪ್ರಾರಂಭಕ್ಕೆ ಆಸ್ಪದ ನೀಡುವ ಮೂಲಕ ಸಾರ್ವಜನಿಕರ ಸಮಸ್ಯೆ ಪರಿಹರಿಸಲಾಗುವುದು ಎಂದು ಜಿಲ್ಲಾ ಪಂಚಾಯತ್ ಸದಸ್ಯ ಈಶ್ವರ ಕಟೀಲು ಹೇಳಿದರು

ಮುಲ್ಕಿ  ಕೇಂದ್ರದಿಂದ ಅಡುಗೆ ಅನಿಲ ಅಸಮರ್ಪಕ ವಿತರಣೆಯಿಂದ ನೊಂದ ಸಾರ್ವಜನಿಕರ ಆಹವಾಲುಗಳ ಪರಿಶೀಲನೆಗಾಗಿ ಜಿಲ್ಲಾ ಪಂ.ಸದಸ್ಯ ಈಶ್ವರ ಕಟೀಲು ಮುಲ್ಕಿ  ಪ್ರಿಯಾಂಕಾ ಗ್ಯಾಸ್ ಎಜನ್ಸಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮುಲ್ಕಿ ಯ ವ್ಯಾಪ್ತಿಯಲ್ಲಿ ಅಡುಗೆ ಅನಿಲದ ಸಮಸ್ಯೆ ಬಿಗಡಾಯಿಸಿದ್ದು ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಎಂದರು.

40ದಿನಗಳ ವರೆಗೆ ಅನಿಲ ವಿತರಣೆಯಲ್ಲಿ ವಿಳಂಬ, ವಿತರಣೆಯ 4.5 ಕಿಮೀ ವ್ಯಾಪ್ತಿಯೊಳಗೂ 15ರಿಂದ 20ರೂ ವಸೂಲಿ, ಬ್ಲಾಕ್‌ನಲ್ಲಿ ಸಿಲಿಂಡರ್ ಮಾರಾಟ ಮುಂತಾದ ದೂರುಗಳ ವಿಚಾರಣೆ ನಡೆಸಿದರು. ಮುಲ್ಕಿ  ಪರಿಸರದ ಮೂಡಬಿದ್ರೆ ಮತ್ತು ಪಡುಬಿದ್ರಿ ಹಾಗೂ ಸುರತ್ಕಲ್‌ನಲ್ಲಿ ವ್ಯವಸ್ಥಿತ ವಿತರಣೆ ಕಂಡುಬರುತ್ತಿದ್ದು ಮುಲ್ಕಿ ಯ ಸಮಸ್ಯೆಗಳ ಬಗ್ಗೆ ನಾಗರೀಕರು ಈಶ್ವರ್‌ರವರ ಗಮನ ಸೆಳೆದರು.

ಈ ಸಂದರ್ಭ ಬಿಜೆಪಿ ಕೇತ್ರಾಧ್ಯಕ್ಷೆ ಕಸ್ತೂರಿ ಪಂಜ, ಮುಲ್ಕಿ ನಗರ ಪಂಚಾಯತ್ ಸದಸ್ಯರಾದ ಸತೀಶ್ ಅಂಚನ್,ಕ್ಷೇತ್ರ ಸಮಿತಿ ಸದಸ್ಯೆ ಶಶಿಕಲಾ,ಬಿಜೆಪಿ ಮುಲ್ಕಿ  ನಗರಾಧ್ಯಕ್ಷ ಉಮೇಶ ಮಾನಂಪಾಡಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಿಯಾಂಕಾ ಗ್ಯಾಸ್ ಮಾಲಕ ರಂಗನಾಥ್ ರವರನ್ನು ಸಮಸ್ಯೆಯ ಬಗ್ಗೆ ಮಾತನಾಡಿಸಿದಾಗ: ಗ್ಯಾಸ್ ಸ್ಟಾಕ್ ಸರಿಯಾಗಿ ಬರದ ಕಾರಣ ವಿಳಂಬವಾದದ್ದು ನಿಜ ಮುಂದಿನ 10 ದಿನಗಳಲ್ಲಿ ಎಲ್ಲವೂ ಮಾಮೂಲಿನಂತಾಗುತ್ತದೆ. ಮುಲ್ಕಿ ಯಲ್ಲಿ 8500 ಕನೆಕ್ಷನ್‌ಗಳಿದ್ದು 4000 ಸಿಲಂಡರ್ ಪೂರೈಕೆ ಕುಂಟಿತವಾಗಿರುವುದು ಸಮಸ್ಯೆಗೆ ಮೂಲ ಕಾರಣವಾಗಿದೆ. ಕಂಪೆನಿ ಸರಿಯಾಗಿ ಪೂರೈಸಿದರೆ ನಾವು ವಿತರಣಾ ವ್ಯವಸ್ಥೆಯನ್ನು ಹೆಚ್ಚಿಸಬಹುದು ಎಂದರು.ಕೇಂದ್ರದ 4.5 ಕಿಮೀ ವ್ಯಾಪ್ತಿಯಲ್ಲಿ ವಿತರಣೆ ಉಚಿತವಾಗಿದ್ದು ಹೆಚ್ಚಿನ ಮೊತ್ತ ನೀಡಬೇಕಾಗಿಲ್ಲ ಎಂದರು.

Comments

comments

Leave a Reply

Read previous post:
Dr. M.R.S.M.English Medium High School – Maths Genius

Dr. M Ramanna Shetty Memorial English Medium High School  has produced a Maths Genius. Suhan G.Paradkar of Class IV is...

Close