ರಾಷ್ಟ್ರ ಮತ್ತು ರಾಜ್ಯ ಮಟ್ಟದ ಪದಕ ವಿಜೇತರಿಗೆ ಸನ್ಮಾನ

Bhagyavan Sanil

ಮುಲ್ಕಿಯ  ಕಾರ್ನಾಡು ಸಿ.ಎಸ್.ಐ ಆಂಗ್ಲ ಮಾದ್ಯಮ ಶಾಲೆಯ ವಿದ್ಯಾರ್ಥಿಗಳಾದ ಶ್ರಾವ್ಯ ಮತ್ತು ಶ್ರಾವ್ಯಾ.ಪಿ ಕರಾಟೆಯಲ್ಲಿ ಚಿನ್ನದ ಪದಕ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಪಡೆದು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಗೌರವಿಸಲ್ಪಟ್ಟ ವಿದ್ಯಾರ್ಥಿಗಳನ್ನು ಶಾಲೆಯ ಶಿಕ್ಷಕ ರಕ್ಷಕರ ಸಭೆಯಲ್ಲಿ ಅಭಿನಂದಿಸಿ ವಿದ್ಯಾರ್ಥಿಗಳ ಹೆತ್ತವರ ಸಹಿತ ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಮುಲ್ಕಿ  ವಿಜಯಾ ಪಿಯು ಕಾಲೇಜು ಪ್ರಾಚಾರ್ಯೆ ಪ್ರೊ.ಪಮೀದಾ ಬೇಗಂ,ಶಾಲೆಯ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ರೆ.ಸಂತೋಷ್ ಕುಮಾರ್, ಸ್ಮಾರ್ಟ್ ಕ್ಲಾಸ್ ಸಂಯೋಜಕರಾದ ದಿನೇಶ್ ಉಪಸ್ಥಿತರಿದ್ದರು.
ಶಾಲೆಯ ಮುಖ್ಯೋಪಾದ್ಯಾಯರಾದ ರವಿರಾಜ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೀಣಾ ಸ್ವಾಗತಿಸಿದರು. ಝೀಟಾ ಮೆಂಡೋನ್ಸಾ ಕಾರ್ಯಕ್ರಮ ನಿರೂಪಿಸಿದರು.ನಿಶಾ ದೇವಾಡಿಗಾ ವಂದಿಸಿದರು.

Comments

comments

Leave a Reply

Read previous post:
ಮುಲ್ಕಿ ಅಡುಗೆ ಅನಿಲ ಅಸಮರ್ಪಕ ವಿತರಣೆ

Prakash M Suvarna ಮುಲ್ಕಿ ಅಡುಗೆ ಅನಿಲ ವಿತರಣಾ ಕೇಂದ್ರವು ಮುಂದಿನ ತಿಂಗಳ ಒಳಗೆ ವಿತರಣೆಯನ್ನು ಸಮರ್ಪಕ ಗೊಳಿಸದಿದ್ದಲ್ಲಿ ವಿತರಣಾ ಕೇಂದ್ರದ ವಿರುದ್ದ ಕ್ರಮ ಕೈಗೊಂಡು ಇನ್ನೊಂದು...

Close