ಬಡವರ್ಗದ ಸಮಸ್ಯೆಗೆ ಸ್ಪಂದಿಸುವ ಸೇವೆ ಅಗತ್ಯ

ಕಿನ್ನಿಗೋಳಿ ಪತ್ರಾವೋ ಎನ್‌ಕ್ಯೂಸ್‌ವಿನಲ್ಲಿ ಕಿನ್ನಿಗೋಳಿ ಲಯನ್ಸ್ ಸಂಸ್ಥೆಯ ಬೆಳ್ಳಿ ಹಬ್ಬದ ಸಮರೋಪ ಸಮಾರಂಭವು ಕಿನ್ನಿಗೋಳಿಯಲ್ಲಿ ನಡೆಯಿತು. ಲಯನ್ಸ್ ಕ್ಲಬ್‌ನ ಜಿಲ್ಲಾ ಗವರ್ನರ್ ಪಿ. ಕಿಶೋರ್ ರಾವ್ ರವರ ಅಧ್ಯಕ್ಷತೆ ವಹಿಸಿ , ವಿವಿಧ ಲಯನ್ಸ್ ಯೋಜನೆಗಳನ್ನು ವಿತರಿಸಿ ಮಾತನಾಡಿದರು”ಜನಪರ ಕಾಳಜಿಯ, ಮಾನವೀಯ ಕಳಕಳಿ ಸಮಾಜ, ಬಡವರ್ಗದ ಸಮಸ್ಯೆಗೆ ಸ್ಪಂದಿಸಲು ಸಮಾಜ ಸೇವೆ ಅಗತ್ಯವಿದೆ” ಎಂದು ಹೇಳಿದರು. ಇದೇ ಸಂದರ್ಭದಲ್ಲಿ ನಿಡ್ಡೋಡಿ ಚಂದ್ರಾವತಿಯವರಿಗೆ ಹೊಲಿಗೆ ಯಂತ್ರ, ಸನ್ನಿಯವರಿಗೆ ವಾಹನ ಚಾಲನೆ ಲೈಸನ್ಸ್, ಮಗುವಿನ ಹೃದಯ ಚಿಕಿತ್ಸೆಗೆ ಧನ ಸಹಾಯ, ಏಳಿಂಜೆ ಶಾಲೆಗೆ ಪುಸ್ತಕ, ಬಡ ಕುಟುಂಬಗಳಿಗೆ ಅಕ್ಕಿ ವಿತರಣೆ ವಿವಿಧ ಸವಲತ್ತು ನೀಡಲಾಯಿತು. ಮಾಜಿ ಗವರ್ನರ್ ಆಲ್ವಿನ್ ಪ್ಯಾಟ್ರಿಕ್ ಪತ್ರಾವೋ, ಪ್ರಾಂತ್ಯ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ, ಸಹ ಗವರ್ನರ್ ಕೆ.ಸಿ.ಪ್ರಭು, ಕುಡ್ಪಿ ಅರವಿಂದ ಶೆಣೈ, ವಲಯಾಧ್ಯಕ್ಷರಾದ ಶಿವಪ್ರಸಾದ್ ಹೆಗ್ಡೆ, ಚಂದ್ರಶೇಖರ್ ನಾನಿಲ್, ಯೋಗೀಶ್ ರಾವ್, ಮೋಹನ್ ದಾಸ್ ಶೆಟ್ಟಿ, ಶ್ರೀನಿವಾಸ್ ಭಟ್, ವಲೇರಿಯನ್ ಸಿಕ್ವೇರ, ಪ್ರಾನ್ಸಿಸ್ ಸೆರಾವೋ, ರೀಟಾ ಸೆರಾವೋ, ಸ್ಮಿತಾ ಡಿ’ಸೋಜಾ, ಇಗ್ನೇಷಿಯಸ್ ಮೆಂಡೋನ್ಸಾ ಮತ್ತಿತರರಿದ್ದರು. ಅಧ್ಯಕ್ಷ ಮೇಲ್ವಿನ್ ಡಿ’ಸೋಜಾ ಸ್ವಾಗತಿಸಿ ಜಗದೀಶ್ ಹೊಳ್ಳ ಪರಿಚಯಿಸಿದರು.

 

Comments

comments

Leave a Reply

Read previous post:
ವಿಶ್ವ ಮಹಿಳಾ ದಿನಾಚರಣೆ

ಕಿನ್ನಿಗೋಳಿ ವನಿತಾ ಸಮಾಜದ ವತಿಯಿಂದ ನಡೆದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕಿ ವಾಣಿ ಬಿ.ಆಚಾರ್‌ರನ್ನು ಸನ್ಮಾನಿಸಲಾಯಿತು. ವನಿತಾ ಸಮಾಜದ ಅಧ್ಯಕ್ಷೆ ಪ್ರಮೀಳಾ ಉಡುಪ, ಕಾರ್ಯದರ್ಶಿ ರಂಜನೀ...

Close