ಮುಲ್ಕಿ ರಾಮಕೃಷ್ಣ ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆ

ಪತಂಜಲಿ ಯೋಗ ಸಮಿತಿ, ಮಂಗಳೂರು, ಮುಲ್ಕಿ ರಾಮಕೃಷ್ಣ ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆಯ ಎನ್.ಎಸ್.ಎಸ್. ಹಾಗೂ ರೋವರ್ಸ್ ಘಟಕ ಇವರ ಜಂಟೀ ಆಶ್ರಯದಲ್ಲಿ ಆಸಕ್ತ ವಿದ್ಯಾರ್ಥಿಗಳಿಗೆ ಯೋಗ ಮತ್ತು ಧ್ಯಾನ, 10 ದಿನಗಳ ಶಿಬಿರವು ತಪೋವನ ತೋಕೂರು ಇಲ್ಲಿ ಉದ್ಘಾಟಾನೆಗೊಂಡಿತು. ಶ್ರೀ ನಿಕೇತ್, ರಾಷ್ಟ್ರೀಯ ಸಂಘಟನಾ ಸಮಿತಿ, ಬೇಂಗಳೂರು ಅವರು ನಶಿಸುತ್ತಿರುವ ಸಂಸ್ಕೃತಿ, ಭೃಷ್ಠ ರಾಜಕಾರಣ, ಸಮಾಜದ್ರೋಹಿ ಮನೋಭಾವ, ರಾಷ್ಟ್ರ ದ್ರೋಹಗಳಂತಹ ಘೋರ ಅಪರಾಧಗಳಿಂದ ತತ್ತರಿಸುತ್ತಿರುವ ಈ ಸಂಕೀರ್ಣ ಸಮಯದಲ್ಲಿ ನಾವು ಯಾವ ರೀತಿಯಲ್ಲಿ ರಾಷ್ಟ್ರದ ಅಭಿವೃದ್ಧಿಯಲ್ಲಿ ಪಾಲ್ಗೊಂಡು ಸ್ವಸ್ಥ ಸಮಾಜದ ಪರಿಕಲ್ಪನೆಯನ್ನು ಸಾಕಾರಗೊಳಿಸಬೇಕು ಹಾಗೂ ಯುವಕರು ರಾಷ್ಟ್ರ ಚಿಂತನೆಯಲ್ಲಿ ತೊಡಗಿಸಿಕೊಂಡು ರಾಷ್ಟ್ರ ಪ್ರಜ್ಞೆಯನ್ನು ಬೆಳೆಸಿ, ಕೈಜೋಡಿಸುವಂತೆ ಯುವ ಸಮುದಾಯಕ್ಕೆ ಕರೆ ನೀಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಶ್ರೀ ಅಶ್ವತ್ಥಾಮ ಹೆಗ್ಡೆ ಯವರು ಅದ್ಭುತ ಯುವ ಸಂಪತ್ತನ್ನು ಹೊಂದಿರುವ ಭಾರತವು ಮುಂಬರುವ ದಿನಗಳಲ್ಲಿ ಪ್ರಪಂಚದ ಬಲಿಷ್ಟ ರಾಷ್ಟ್ರವಾಗಿ ಹೊರಹೊಮ್ಮುವುದು ಎಂದರು. ಆತ್ಮಾಶಕ್ತಿಯ ವ್ಯಾಪ್ತಿ 10 ಕಿ.ಮೀ ದೂರದವರೆಗೂ ಇರುತ್ತದೆ ಎಂದು ಮುಖ್ಯ ಅತಿಥಿಯಾದ ಡಾ| ಜಗದೀಶ್‌ರವರು ಉದಾಹರಣೆ ಸಹಿತ ವಿವರಿಸಿದರು. ಯೋಗ ಹಾಗೂ ಧ್ಯಾನದಿಂದ ಬಂದ ರೋಗ ಹೋಗುತ್ತದೆ. ಬರುವ ರೋಗ ಬರುವುದಿಲ್ಲ. ಎಲ್ಲಾ ಶಿಬಿರಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ ಇತರರಿಗೆ ಮಾದರಿಯಾಗಿ ಎಂದು ಶುಭ ಹಾರೈಸಿದರು.

ಇನ್ನೋರ್ವ ಮುಖ್ಯ ಅತಿಥಿ ರೋ| ಎನ್.ಪಿ. ಶೆಟ್ಟಿಯವರು ಮನುಷ್ಯನ ದೈಹಿಕ ಸಾಮರ್ಥ್ಯವನ್ನು ಅರಿತುಕೊಂಡು ಅದನ್ನು ಉದ್ದೀಪನಗೊಳಿಸಿ ಬೆಳೆಸಿದಲ್ಲಿ ಆರೋಗ್ಯಾವಂತರಾಗಬಹುದು ಮತ್ತು ಪ್ರಾಣೋ ಮಾತೃ: ಪ್ರಾಣೋ ಭಾತೃ: ಪ್ರಾಣೋ ಆಚಾರ್ಯ: ಪ್ರಾಣವೇ ಉಸಿರು ಅದನ್ನು ನಿಯಂತ್ರಿಸುವುದೇ ಯೋಗ ಎಂದರು. ಶ್ರೀ ವೈ.ಎನ್.ಸಾಲಿಯಾನ್ ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಪ್ರಾಚಾರ್ಯರು “ತಮ್ಮ ಜೀವನದಲ್ಲಿ ಸ್ವತ: ಯೋಗ-ಧ್ಯಾನಗಳನ್ನು ಅಳವಡಿಸಿಕೊಂಡು ಇಂದಿನ ಸಭೆಯಲಿ ಅತ್ಯುತ್ತಮ ವಿಚಾರಗಳನ್ನು ಮಂಡಿಸಿದ ಸಂಪನ್ಮೂಲ ವ್ಯಕ್ತಿಗಳನ್ನು ಅನುಸರಿಸಿ ಜೀವನದಲ್ಲಿ ಮುಂದೆ ಬನ್ನಿ” ಎಂದರು. ತರಬೇತಿ ಅಧಿಕಾರಿ ಶ್ರೋ ರಘುರಾಮ್ ರಾವ್, ರೋವರ್ ಲೀಡರ್ ಶ್ರೀ ಸುರೇಶ್ ಎಸ್. , ಶ್ರಿ ಜಯ ಶೆಟ್ಟಿ ಕುಬೆವೂರ್ ಇವರು ಉಪಸ್ಥಿತರಿದ್ದು ಸಂದರ್ಭೋಚಿತವಾಗಿ ಮಾತನಾಡಿದರು. ಚೇತನ್ ರವರ ಪ್ರಾರ್ಥನೆಯ ನಂತರ ಕಿರಿಯ ತರಬೇತಿ ಅಧಿಕಾರಿ ಶ್ರಿ ಸುರೇಶ್ ಎಸ್ ಸ್ವಾಗತಿಸಿದ ಕಾರ್ಯಕ್ರಮದಲ್ಲಿ ರಾಘವೇಂದ್ರ ರಾವ್ ಧನ್ಯವಾದವಿತ್ತರು. ಲಕ್ಷ್ಮೀಕಂತ್ ನಿರೂಪಿಸಿದರು. ಯೋಗ ಶಿಕ್ಷಕ ಶ್ರೀ ರಾಘವೇಂದ್ರ ರಾವ್ ಅವರು 10 ದಿನಗಳ ಶಿಬಿರವನ್ನು ನಡೆಸಿಕೊಡಲಿದ್ದಾರೆ.

Comments

comments

Leave a Reply

Read previous post:
ಬಡವರ್ಗದ ಸಮಸ್ಯೆಗೆ ಸ್ಪಂದಿಸುವ ಸೇವೆ ಅಗತ್ಯ

ಕಿನ್ನಿಗೋಳಿ ಪತ್ರಾವೋ ಎನ್‌ಕ್ಯೂಸ್‌ವಿನಲ್ಲಿ ಕಿನ್ನಿಗೋಳಿ ಲಯನ್ಸ್ ಸಂಸ್ಥೆಯ ಬೆಳ್ಳಿ ಹಬ್ಬದ ಸಮರೋಪ ಸಮಾರಂಭವು ಕಿನ್ನಿಗೋಳಿಯಲ್ಲಿ ನಡೆಯಿತು. ಲಯನ್ಸ್ ಕ್ಲಬ್‌ನ ಜಿಲ್ಲಾ ಗವರ್ನರ್ ಪಿ. ಕಿಶೋರ್ ರಾವ್ ರವರ...

Close