ಉಚಿತ ಆರೋಗ್ಯ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ

ಆರೋಗ್ಯದ ಕುರಿತು ರೋಟರಿಯ ಕಾಳಜಿ ಅಭಿನಂದನಾರ್ಹವೆಂದು ದಾಮಸ್ ಕಟ್ಟೆ ಕಿರೆಂ ಚರ್ಚ್ ನ ಪ್ರಧಾನ ಧರ್ಮಗುರು ರೆ| ಫಾ| ಪೌಲ್ ಪಿಂಟೋ ಹೇಳಿದರು. ಅವರು ಮಂಗಳವಾರ ದಾಮಸ್ ಕಟ್ಟೆ ಕಿರೆಂ ಚರ್ಚ್ ಸಭಾಂಗಣದಲ್ಲಿ ಕಿನ್ನಿಗೋಳಿ ರೋಟರಿಯ ನೇತೃತ್ವದಲ್ಲಿ ಮೂಡಬಿದಿರೆಯ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ಸಹಕಾರದಿಂದ ನಾಟಿ ವೈದ್ಯ ದಿ| ಲಿಯೋ ಮಿನೇಜಸ್ ಸ್ಮರಣಾರ್ಥ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ರೋಟರಿಯ ನಿಕಟ ಪೂರ್ವಾಧ್ಯಕ್ಷ ಸತೀಶ್ಚಂದ್ರ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದು, ಆಳ್ವಾಸ್ ಆಯುರ್ವೇದ ಕಾಲೇಜಿನ ಪ್ರಾಚಾರ್ಯಾ ಡಾ| ವಿನಯಚಂದ್ರ ಶೆಟ್ಟಿ, ಯುಗಪುರುಷದ ಪ್ರಧಾನ ಸಂಪಾದಕರಾದ ಭುವನಾಭಿರಾಮ ಉಡುಪ, ಜೆಸ್ಸಿ ಮಿನೇಜಸ್, ರೋಟರಿಯ ಕಾರ್ಯದರ್ಶಿ ಯಶವಂತ ಐಕಳ ಉಪಸ್ಥಿತರಿದ್ದರು. ಜೆರಾಲ್ಡ್ ಮಿನೇಜಸ್ ವಂದಿಸಿ ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಶಿಮಂತೂರು – ಬೇಸಿಗೆ ತರಬೇತಿ ಶಿಬಿರ

ರೋಟರಾಕ್ಟ್ ಕ್ಲಬ್ ಕಿನ್ನಿಗೋಳಿ ಹಾಗೂ ಜೆ.ಸಿ. ಮುಡ್ಕೂರು ಭಾರ್ಗವ ಇದರ ಜಂಟಿ ಆಶ್ರಯದಲ್ಲಿ ಶಿಮಂತೂರು ಶ್ರೀ ಶಾರದಾ ಪ್ರೌಢ ಶಾಲೆಯಲ್ಲಿ ಬೇಸಿಗೆ ತರಬೇತಿ ಶಿಬಿರದ ಅಂಗವಾಗಿ ನಾಟಕ ರಂಗ...

Close