ಕೆಮ್ಮಡೆ ಕೋರ‍್ದಬ್ಬು ದೈವಸ್ಥಾನದಲ್ಲಿ ನೇಮೋತ್ಸವ, ಧಾರ್ಮಿಕ ಸಭೆ

ಮೂರುಕಾವೇರಿ ಕೆಮ್ಮಡೆ ಶ್ರೀ ಕೋರ‍್ದಬ್ಬು ದೈವಸ್ಥಾನಲ್ಲಿ ವಾರ್ಷಿಕ ನೇಮೋತ್ಸವ ಶನಿವಾರ ನಡೆಯಿತು. ಈ ಸಂದರ್ಭ ನಡೆದ ಧಾರ್ಮಿಕ ಸಭೆಯಲ್ಲಿ ಸ್ಥಳೀಯ ಅಂಗನವಾಡಿಯ ನಿವೃತ್ತ ಸಹಾಯಕಿ ಕಲ್ಯಾಣಿ ಯವರನ್ನು ಸನ್ಮಾನಿಸಲಾಯಿತು. ಕಿನ್ನಿಗೋಳಿ ಗ್ರಾ.ಪಂ.ಅಧ್ಯಕ್ಷ ದೇವಪ್ರಸಾದ ಪುನರೂರರ ಅಧ್ಯಕ್ಷತೆಯಲ್ಲಿ ಕಟೀಲಿನ ಹರಿನಾರಾಯಣ ಆಸ್ರಣ್ಣ ಆಶೀರ್ವಚನ ನೀಡಿದರು. ಯುಗಪುರುಷದ ಭುವನಾಭಿರಾಮ ಉಡುಪ, ಸಿಂಡಿಕೇಟ್ ಬ್ಯಾಂಕ್ ಪ್ರಬಂಧಕ ಮಂಜುನಾಥ್ ಮಲ್ಯ, ಆಡಳಿತ ಮಂಡಳಿಯ ಜಗದೀಶ್ ಶೆಟ್ಟಿ, ಗಿರಿಯಪ್ಪ, ಯಶವಂತ ಐಕಳ, ಕೆ.ಬಿ.ಸುರೇಶ್, ಲೊಕೇಶ್, ಮತ್ತಿತರರಿದ್ದರು. ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿಜಯ ಕಲಾವಿದರು ಕಿನ್ನಿಗೋಳಿ ಇವರಿಂದ “ಬದ್‌ಕೇ ಬದ್ಕಾಂಡ್” ನಾಟಕ ನಡೆಯಿತು.

Comments

comments

Leave a Reply

Read previous post:
ಉಚಿತ ಆರೋಗ್ಯ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ

ಆರೋಗ್ಯದ ಕುರಿತು ರೋಟರಿಯ ಕಾಳಜಿ ಅಭಿನಂದನಾರ್ಹವೆಂದು ದಾಮಸ್ ಕಟ್ಟೆ ಕಿರೆಂ ಚರ್ಚ್ ನ ಪ್ರಧಾನ ಧರ್ಮಗುರು ರೆ| ಫಾ| ಪೌಲ್ ಪಿಂಟೋ ಹೇಳಿದರು. ಅವರು ಮಂಗಳವಾರ ದಾಮಸ್...

Close