ಶಿಮಂತೂರು – ಬೇಸಿಗೆ ತರಬೇತಿ ಶಿಬಿರ

ರೋಟರಾಕ್ಟ್ ಕ್ಲಬ್ ಕಿನ್ನಿಗೋಳಿ ಹಾಗೂ ಜೆ.ಸಿ. ಮುಡ್ಕೂರು ಭಾರ್ಗವ ಇದರ ಜಂಟಿ ಆಶ್ರಯದಲ್ಲಿ ಶಿಮಂತೂರು ಶ್ರೀ ಶಾರದಾ ಪ್ರೌಢ ಶಾಲೆಯಲ್ಲಿ ಬೇಸಿಗೆ ತರಬೇತಿ ಶಿಬಿರದ ಅಂಗವಾಗಿ ನಾಟಕ ರಂಗ ತರಬೇತಿ ಶಿಬಿರವನ್ನು ಆಯೋಜಿಸಲಾಯಿತು. ಶಿಬಿರವನ್ನು ಜೆ.ಸಿ ಯ ವಲಯ ಕ್ರೀಡಾ ನಿರ್ದೇಶಕ ಧನಂಜಯ ಕೋಟ್ಯಾನ್ ಉದ್ಘಾಟಿಸಿದರು. ರೋಟರಾಕ್ಟ್ ಅಧ್ಯಕ್ಷ ಗಣೇಶ್ ಕಾಮತ್ ಪ್ರಸ್ತಾವಿಕ ಮಾತುಗಳನ್ನು ಶಿಬಿರದ ಉಪಯೋಗಗಳನ್ನು ವಿವರಿಸಿದರು. ಶಾಲಾ ಶಿಕ್ಷಕ ಉಮೇಶ್ ಎನ್, ತರಬೇತುದಾರ ನಾಟಕ ರಂಗಭೂಮಿ ಕಲಾವಿದ ಸುಧಾಕರ ಸಾಲಿಯಾನ್ ಉಪಸ್ಥಿತರಿದ್ದರು. ಜೆ.ಸಿ.ಯ ಅಧ್ಯಕ್ಷ ಸುರೇಂದ್ರ ಭಟ್ ಸ್ವಾಗತಿಸಿದರು, ಜೆ.ಸಿ.ಯ ನಿಕಟ ಪೂರ್ವ ಅಧ್ಯಕ್ಷ ಸುಧಾಕರ್ ಪೊಸ್ರಾಲ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಶಾಲಾ ಮಕ್ಕಳಿಗೆ ನಾಟಕದ ಬಗ್ಗೆ ತರಬೇತಿ ಹಾಗೂ ಚರ್ಚೆಯನ್ನು ನಡೆಸಲಾಯಿತು.

Comments

comments

Leave a Reply

Read previous post:
ನ್ಯೂರೋಥೆರಪಿ – ಪ್ರತಿರೋಧ ಶಕ್ತಿ ತಯಾರು

ಶರೀರದ ವಿಭಿನ್ನ ಅಂಗಗಳು ರೋಗದ ಶಕ್ತಿಯನ್ನು ತಯಾರು ಮಾಡಬಲ್ಲ ನ್ಯೂರೋಥೆರಪಿ ಚಿಕಿತ್ಸೆಯಾಗಿದೆ, ಎಂದು ಕೆರೆಕಾಡು ಆರೋಗ್ಯ ಸೇವಾ ಪ್ರತಿಷ್ಠಾನದ ನಿರ್ದೇಶಕ ಕಿರಣ್ ಕುಮಾರ್ ಹೇಳಿದರು. ಅವರು ಪಂಜ...

Close