ಶಿಮಂತೂರು ಶ್ರೀ ಶಾರದಾ ಪ್ರೌಢ ಶಾಲೆಯಲ್ಲಿ ಬೇಸಿಗೆ ತರಬೇತಿ ಶಿಬಿರ

ರೋಟರಾಕ್ಟ್ ಕ್ಲಬ್ ಕಿನ್ನಿಗೋಳಿ ಹಾಗೂ ಜೆ.ಸಿ.ಐ ಮುಡ್ಕೂರು ಭಾರ್ಗವ ಇದರ ಜಂಟಿ ಆಶ್ರಯದಲ್ಲಿ ಶಿಮಂತೂರು ಶ್ರೀ ಶಾರದಾ ಪ್ರೌಢ ಶಾಲೆಯಲ್ಲಿ ಬೇಸಿಗೆ ತರಬೇತಿ ಶಿಬಿರದ ಅಂಗವಾಗಿ ಪರಿಣಾಮಕಾರಿ ಭಾಷಣ ತರಬೇತಿ ಶಿಬಿರವನ್ನು ಆಯೋಜಿಸಲಾಯಿತು. ಜೆ.ಸಿ. ನಿಕಟ ಪೂರ್ವ ಅಧ್ಯಕ್ಷ ಸುಧಾಕರ ಪೊಸ್ರಾಲ್ ಸ್ವಾಗತಿಸಿದರು, ರೋಟರಾಕ್ಟ್ ಅಧ್ಯಕ್ಷ ಗಣೇಶ್ ಕಾಮತ್ ಪ್ರಸ್ತಾವಿಕ ಮಾತುಗಳನ್ನು ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕಾಗಿ ವಿನಂತಿಸಿದರು. ಜೆ.ಸಿ.ಐಯ ಎಚ್.ಜಿ.ಎಫ್. ಪ್ರಭಾಕರ ಶೆಟ್ಟಿ ಪರಿಣಾಮಕಾರಿ ಭಾಷಣದ ಬಗ್ಗೆ ತರಬೇತಿಯನ್ನು ನೀಡಿದರು. ಈ ಸಂದರ್ಭದಲ್ಲಿ ನಡೆದ ಚರ್ಚಾ ಸ್ಪರ್ಧೆಗಳಲ್ಲಿ ಉತ್ತಮ ಶಿಬಿರಾರ್ತಿಗಳಾಗಿ ಚೇತನ್, ಸಂಪ್ರೀತ, ಆಯ್ಕೆಯಾದರು. . ಹಾಗೂ ರವಿಚಂದ್ರ, ದುರ್ಗಾಪ್ರಸಾದ್, ರಕ್ಷಿತಾ, ಸುಪ್ರೀತಾ, ವಾಣಿ, ತರಬೇತುದಾರರ ಮೆಚ್ಚುಗೆಗೆ ಪಾತ್ರರಾಗಿ ವಿಶೇಷ ಬಹುಮಾನಗಳನ್ನು ಪಡೆದರು. ಜೆ.ಸಿ.ಐ ಮತ್ತು ಎಚ್.ಜಿ.ಎಫ್. ಪ್ರಭಾಕರ ಶೆಟ್ಟಿ ಅವರನ್ನು ರೋಟರಾಕ್ಟ್ ಕಿನ್ನಿಗೋಳಿ ಮತ್ತು ಜೆ.ಸಿ.ಐ ಮುಂಡ್ಕೂರು ಭಾರ್ಗವ ವತಿಯಿಂದ ಅಭಿನಂದಿಸಲಾಯಿತು. ರೋಟರಾಕ್ಟ್ ಸಭಾಪತಿ ಕೆ.ಬಿ. ಸುರೇಶ್ ಉಪಸ್ಥಿತರಿದ್ದರು, ಶಾಲಾ ಶಿಕ್ಷಕ ಉಮೇಶ್ ಎನ್ ವಂದಿಸಿದರು.

Comments

comments

Leave a Reply

Read previous post:
ರೋಟರಿ ಸಾಕ್ಷಾರತಾ ಮಾಸಚರಣೆ

ಕಿನ್ನಿಗೋಳಿ ರೋಟರಿ ಕ್ಲಬ್ ಆಶ್ರಯದಲ್ಲಿ ರೋಟರಿ ಸಾಕ್ಷಾರತಾ ಮಾಸಚರಣೆ ಕಿನ್ನಿಗೋಳಿ ಸಹಕಾರ ಸೌಧ ಸಭಾಂಗಣದಲ್ಲಿ ನಡೆಯಿತು. ಮುಂಡ್ಕೂರು -ಕಡಂದಲೆ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಸತ್ಯಶಂಕರ ಶೆಟ್ಟಿ...

Close