ಶಿಮಂತೂರು ಶಾಲೆ-ವೃತ್ತಿಜೀವನ – ಮಾರ್ಗದರ್ಶನ ಶಿಬಿರ

ರೋಟರಾಕ್ಟ್  ಕ್ಲಬ್ ಕಿನ್ನಿಗೋಳಿ ಹಾಗೂ ಜೆ.ಸಿ.ಐ ಮುಡ್ಕೂರು ಭಾರ್ಗವ ಇದರ ಜಂಟಿ ಆಶ್ರಯದಲ್ಲಿ ಶಿಮಂತೂರು ಶ್ರೀ ಶಾರದಾ ಪ್ರೌಢ ಶಾಲೆಯಲ್ಲಿ ಬೇಸಿಗೆ ತರಬೇತಿ ಶಿಬಿರದ ಅಂಗವಾಗಿ ಪರಿಣಾಮಕಾರಿ ವೃತ್ತಿ ಜೀವನ ಮಾರ್ಗದರ್ಶನ ಶಿಬಿರವನ್ನು ಆಯೋಜಿಸಲಾಯಿತು. ರೋಟರಾಕ್ಟ್  ಅಧ್ಯಕ್ಷ ಗಣೇಶ್ ಕಾಮತ್ ಹಾಗೂ ಶಿಕ್ಷಕ ಉಮೇಶ್ ಎನ್. ಪ್ರಸ್ತಾವಿಕ ಮಾತುಗಳಲ್ಲಿ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕಾಗಿ ವಿನಂತಿಸಿದರು. ಕಟೀಲು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಬಾಲಕೃಷ್ಣ ಶೆಟ್ಟಿ ವೃತ್ತಿ ಜೀವನ ಮಾರ್ಗ ದರ್ಶನ ಶಿಬಿರವನ್ನು ನಡೆಸಿ ಕೊಟ್ಟರು. ಈ ಸಂದರ್ಭದಲ್ಲಿ ನಡೆದ ಪ್ರಶ್ನೋತ್ತರ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳಾದ ಹೈದರಾಲಿ, ಭವಾನಿ, ಚರಣೇಶ್ ಬಹುಮಾನಗಳನ್ನು ಪಡೆದರು. ಬಾಲಕೃಷ್ಣ ಶೆಟ್ಟಿ ಅವರನ್ನು ರೋಟರಾಕ್ಟ್   ಕ್ಲಬ್ ಕಿನ್ನಿಗೋಳಿ ಮತ್ತು ಜೆ.ಸಿ.ಐ ಮುಂಡ್ಕೂರು ಭಾರ್ಗವ ವತಿಯಿಂದ ಅಭಿನಂದಿಸಲಾಯಿತು. ಜೆ.ಸಿ. ನಿಕಟ ಪೂರ್ವ ಅಧ್ಯಕ್ಷ ಸುಧಾಕರ ಪೊಸ್ರಾಲ್ ಸ್ವಾಗತಿಸಿದರು, ಜೆ.ಸಿ.ಐ ಉಪಾಧ್ಯಕ್ಷ ಹರೀಶ್ ವಂದಿಸಿದರು.

Comments

comments

Leave a Reply

Read previous post:
ಶಿಮಂತೂರು ಶ್ರೀ ಶಾರದಾ ಪ್ರೌಢ ಶಾಲೆಯಲ್ಲಿ ಬೇಸಿಗೆ ತರಬೇತಿ ಶಿಬಿರ

ರೋಟರಾಕ್ಟ್ ಕ್ಲಬ್ ಕಿನ್ನಿಗೋಳಿ ಹಾಗೂ ಜೆ.ಸಿ.ಐ ಮುಡ್ಕೂರು ಭಾರ್ಗವ ಇದರ ಜಂಟಿ ಆಶ್ರಯದಲ್ಲಿ ಶಿಮಂತೂರು ಶ್ರೀ ಶಾರದಾ ಪ್ರೌಢ ಶಾಲೆಯಲ್ಲಿ ಬೇಸಿಗೆ ತರಬೇತಿ ಶಿಬಿರದ ಅಂಗವಾಗಿ ಪರಿಣಾಮಕಾರಿ ಭಾಷಣ...

Close