ಸಚ್ಚೇರಿ ಗಾಂದಡ್ಪು ಶ್ರೀ ಮಹಾದೇವಿ -ಬ್ರಹ್ಮಕಲಶ, ಧಾರ್ಮಿಕ ಸಭೆ

ಸಚ್ಚರಿಪೇಟೆಯ ಸಚ್ಚೇರಿ ಗಾಂದಡ್ಪು ಶ್ರೀ ಮಹಾದೇವಿ ಸನ್ನಿಡಿಯಲ್ಲಿ ಶ್ರೀ ಮಹಾದೇವಿಯ ಪುನರ್ ಪ್ರತಿಷ್ಠೆ, ಭ್ರಹ್ಮಕಲಶಾಭಿಶೇಕ, ಬುಧವಾರ ನಡೆಯಿತು. ಎಡಪದವು ಶ್ರೀ ರಾಧಾಕೃಷ್ಣ ತಂತ್ರಿಗಳ ಹಾಗೂ ಪೊಸ್ರಾಲು ಶ್ರೀ ರಾಘವೇಂದ್ರ ಭಟ್ ರ ನೇತೃತ್ವದಲ್ಲಿ ಕ್ಷೇತ್ರದ ದೇವಿ ಪಾತ್ರಿ ಧರ್ಮದರ್ಶಿ ಕೇಶವ ಆಂಚನ್ ರ ಉಪಸ್ಥಿತಿಯಲ್ಲಿ ಕಾರ್ಯಕ್ರಮಗಳು ನಡೆದವು. ಸಂಜೆ ಸಚ್ಚರಿ ಪರಾರಿ ರಮೇಶ್ ಶೆಟ್ರ ಅಧ್ಯಕ್ಷತೆಯಲ್ಲಿ ಪೊಸ್ರಾಲು ಶ್ರೀ ಮಹಾಲಿಂಗೇಶ್ವರ ದೇವಳದ ಅರ್ಚಕ ರಂಗ ಭಟ್ ರನ್ನು ಸನ್ಮಾನಿಸಲಾಗಿ ಕ್ಷೇತ್ರಕ್ಕೆ ಸಹಕರಿಸಿದವರನ್ನು ಗೌರವಿಸಲಾಯಿತು. ಅರ್ಚಕ ರಾಘವೇಂದ್ರ ಭಟ್, ಸಚ್ಚರಪರಾರಿಯ ಯಜಮಾನ ಜಗದೀಶ್ ಶೆಟ್ಟಿ, ಮುಂಬೈನ ಉದ್ಯಮಿ ರವೀಂದ್ರ.ಡಿ.ಪೂಂಜಾ, ಜೀರ್ಣೋದ್ದಾರ ಸಮಿತಿಯ ಸಚ್ಚರಪರಾರಿ ಪದ್ಮನಾಭ ಶೆಟ್ಟಿ, ಶೆಈಧರ ಸನಿಲ್. ಜಗನ್ನಾಥ ಶೆಟ್ಟಿ, ಕ್ಷೇತ್ರದ ಧರ್ಮದರ್ಶಿ ಕೇಶವ ಆಂಚನ್ ಉಪಸ್ಥಿತರಿದ್ದರು.

Comments

comments

Leave a Reply

Read previous post:
ಸಮಾಜ – ಪೂಜೆ ಸೇವೆಯಿಂದ ಸಾಧ್ಯ

"ಸಮಾಜ ಎಂಬುವುದು ಒಂದು ಮಂದಿರ. ಅದರ ಪೂಜೆ ಸೇವೆಯ ಮುಂಖಾಂತರ ಮಾಡಿದಾಗ ಸಾರ್ಥಕ್ಯದ ಭಾವನೆ ಉಂಟಾಗುತ್ತದೆ". ಲಯನ್ಸ್ ಕ್ಲಬ್ ಮಾಡುತ್ತಿರುವ ಕೆಲಸ ಸೇವೆಯ ಮುಖೇನ ಸಮಾಜದ ಪೂಜೆ...

Close