ಸಮಾಜ – ಪೂಜೆ ಸೇವೆಯಿಂದ ಸಾಧ್ಯ

“ಸಮಾಜ ಎಂಬುವುದು ಒಂದು ಮಂದಿರ. ಅದರ ಪೂಜೆ ಸೇವೆಯ ಮುಂಖಾಂತರ ಮಾಡಿದಾಗ ಸಾರ್ಥಕ್ಯದ ಭಾವನೆ ಉಂಟಾಗುತ್ತದೆ”. ಲಯನ್ಸ್ ಕ್ಲಬ್ ಮಾಡುತ್ತಿರುವ ಕೆಲಸ ಸೇವೆಯ ಮುಖೇನ ಸಮಾಜದ ಪೂಜೆ ಎಂದು ಲಯನ್ಸ್ ಜಿಲ್ಲೆ 324D5 ಇದರ ರಾಜ್ಯಪಾಲ ಪಿ. ಕಿಶೋರ್ ರಾವ್ ಹೇಳಿದರು. ಲಯನ್ಸ್ ಕ್ಲಬ್ ಹಳೆಯಂಗಡಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಹೋಟೇಲ್ ಸೂರಜ್ ಇಂಟರ್ ನ್ಯಾಶನಲ್ ನಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಲಯನ್ಸ್ ಜಿಲ್ಲಾ ರಾಜ್ಯಪಾಲರು ಪ್ರಚಾರವಿಲ್ಲದೆ ಸೇವೆಯನ್ನು ಅವಿರತವಾಗಿ ಮಾಡುವುದು ಲಯನ್ಸ್ ನ ಮುಖ್ಯಗುಣ ಎಂದು ಹೇಳಿದರು. ಸದ್ದಿಲ್ಲದೆ ಸಮಾಜ ಮುಖಿಯಾಗಿ ಕೆಲಸ ಮಾಡುತ್ತಿರುವ ಲಯನ್ಸ್ ಕ್ಲಬ್ ಹಳೆಯಂಗಡಿಯ ಬಗ್ಗೆ ಮೆಚ್ಚುಗೆಯ ನುಡಿಗಳನ್ನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಯುವ ಪ್ರಶಸ್ತಿ ವಿಜೇತ ವಿದ್ಯಾ ವಿನಾಯಕ ಯುವಕ ಸಂಘದ ಅಧ್ಯಕ್ಷ ಸುಧಾಕರ ಅಮೀನ್ ಹಾಗೂ ಯುವ ಪ್ರತಿಭೆ ಕುಮಾರಿ ದಿವ್ಯಾಶ್ರೀ ರಮೇಶ್ ಪಾವಂಜೆ ಅವರನ್ನು ಸನ್ಮಾನಿಸಲಾಯಿತು. ಜಗದೀಶ್ ಪೂಜಾರಿ ಪಡುಪಣಂಬೂರು ಅವರ ವೈದ್ಯಕೀಯ ವೆಚ್ಚಕ್ಕಾಗಿ ಧನ ಸಹಾಯವನ್ನು ಲಯನ್ಸ್ ಕ್ಲಬ್ ಹಳೆಯಂಗಡಿ ಯಿಂದ ನೀಡಲಾಯಿತು. ಪ್ರಾಂತೀಯ ಅಧ್ಯಕ್ಷರಾದ ಪುರುಷೋತ್ತಮ ಶೆಟ್ಟಿ, ವಲಯಾಧ್ಯಕ್ಷರಾದ ಚಂದ್ರಶೇಖರ ನಾನಿಲ್, ಉಪ ರಾಜ್ಯಪಾಲ ಕೆ.ಸಿ. ಪ್ರಭು, ಮುಲ್ಕಿ ಲಯನ್ಸ್ ಅಧ್ಯಕ್ಷರಾದ ಹರೀಶ್ ಪುತ್ರನ್, ಸುರತ್ಕಲ್ ಲಯನ್ಸ್ ಕ್ಲಬ್ ಅಧ್ಯಕ್ಷ ಅಜಯ ಭಾಟಿಯ, ಕಾಟಿಪಳ್ಳ ಲಯನ್ಸ್ ಕ್ಲಬ್ ಅಧ್ಯಕ್ಷ ಮಾಧವ ಶೆಟ್ಟಿ, ಕಿನ್ನಿಗೋಳಿ ಲಯನ್ಸ್ ಕ್ಲಬ್ ಅಧ್ಯಕ್ಷ ಮೆಲ್ವಿನ್ ಡಿ”ಸೋಜ, ಮುಚ್ಚೂರು ನೀರುಡೆ ಅಧ್ಯಕ್ಷ ವಿದ್ಯಾದರ ಹೆಗ್ಡೆ ಉಪಸ್ಥಿತರಿದ್ದರು. ಹಳೆಯಂಗಡಿಯ ಲಯನ್ಸ್ ಕ್ಲಬ್ ಅಧ್ಯಕ್ಷ ಯಾದವ ದೇವಾಡಿಗ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು, ಪಿ.ಶಂಕರ್ ಧನ್ಯವಾದವನ್ನಿತ್ತರು.

Comments

comments

Leave a Reply

Read previous post:
ಶಿಮಂತೂರು ಶಾಲೆ-ವೃತ್ತಿಜೀವನ – ಮಾರ್ಗದರ್ಶನ ಶಿಬಿರ

ರೋಟರಾಕ್ಟ್  ಕ್ಲಬ್ ಕಿನ್ನಿಗೋಳಿ ಹಾಗೂ ಜೆ.ಸಿ.ಐ ಮುಡ್ಕೂರು ಭಾರ್ಗವ ಇದರ ಜಂಟಿ ಆಶ್ರಯದಲ್ಲಿ ಶಿಮಂತೂರು ಶ್ರೀ ಶಾರದಾ ಪ್ರೌಢ ಶಾಲೆಯಲ್ಲಿ ಬೇಸಿಗೆ ತರಬೇತಿ ಶಿಬಿರದ ಅಂಗವಾಗಿ ಪರಿಣಾಮಕಾರಿ...

Close