ಮುಲ್ಕಿ ನಗರ ಪಂಚಾಯತ್ ಮಾಸಿಕ ಸಭೆ – ಮಾತಿನ ಚಕಮಕಿ

Bhagyavan Sanil
ಮುಲ್ಕಿ: ಕುಡಿಯುವ ನೀರಿನ ಸಮಸ್ಯೆ,ಅಕ್ರಮ ವಲಸಿಗರ ಕಾಟ,ಅನಧೀಕೃತ ಮನೆಗಳಿಂದ ನ.ಪಂ.ಗೆ ನಷ್ಟ, ಕುಡಿಯುವ ನೀರಿನ ಪೋಲು, ಲ್ಯಾಂಡ್ ಬ್ರೋಕರ್ ಹಾವಳಿ, ಅಕ್ರಮ ರಸ್ತೆ ತಡೆ ಮುಂತಾದ ಸಮಸ್ಯೆಗಳಿಂದ ಮುಲ್ಕಿ ನಗರ ಪಂಚಾಯತ್ ಮಾಸಿಕ ಸಭೆಯಲ್ಲಿ ಸ್ವಪಕ್ಷೀಯ ಸದಸ್ಯರೇ ಮಾತಿನ ಚಕಮಕಿ ನಡೆಸಿದ ಘಟನೆ ನಡೆಯಿತು.
ಸರಿಯಾಗಿ ಬಾರದ ತುಂಬೆ ಡ್ಯಾಂ ನೀರು, ಕೊಳವೆ ಬಾವಿಯಲ್ಲಿ ನೀರಿಲ್ಲ ಮತ್ತು ತೆರೆದ ಬಾವಿಗಳಲ್ಲಿ ನೀರಿನ ಪ್ರಮಾಣ ಇಳಿತ, ಇತ್ಯಾದಿ ಕಾರಣಗಳಿಂದ ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು ಸಾರ್ವಜನಿಕರು ನೀರನ್ನು ಪೋಲು ಮಾಡದಂತೆ ನಗರ ಪಂಚಾಯತ್ ಅಧ್ಯಕ್ಷ ಶಶಿಕಾಂತ ಶೆಟ್ಟಿ ಮನವಿ ಮಾಡಿದ್ದಾರೆ.
ಶುಕ್ರವಾರ ನಗರ ಪಂಚಾಯತ್ ಸಭಾಂಗಣದಲ್ಲಿ ನಡೆದ ಮಾಸಿಕ ಸಭೆಯಲ್ಲಿ ಈ ಬಗ್ಗೆ ವ್ಯಾಪಕ ಚರ್ಚೆ ನಡೆಯಿತು. ಮುಲ್ಕಿಗೆ ತುಂಬೆಯಿಂದ ನೀರು ಸರಬರಾಜು ಆಗುತ್ತಿದ್ದು ಅಲ್ಲಿನ ಸಮಸ್ಯೆಯಿಂದ ನೀರು ಸರಬರಾಜು ಆಗುತ್ತಿಲ್ಲ ಅಲ್ಲದೆ ಟ್ಯಾಂಕರ ಮೂಲಕ ನೀರು ಸರಬರಾಜಿಗೆ ಜಿಲ್ಲಾಧಿಕಾರಿಗಳು ಅನುಮತಿ ನೀಡಿಲ್ಲ ಎಂದು ಮುಖ್ಯಾಧಿಕಾರಿ ಹರಿಶ್ಚಂದ್ರ ಪಿ.ಸಾಲ್ಯಾನ್ ತಿಳಿಸಿದರು. ಈ ಬಗ್ಗೆ ಸೋಮವಾರ ಎ.2ರ ವರೆಗೆ ಕಾದು ತುಂಬೆ ನೀರಿನ ಸಮಸ್ಯೆ ಉಲ್ಭಣಿಸಿದಲ್ಲಿ ಮುಲ್ಕಿ ನಗರ ಪಂಚಾಯತ್ ಸದಸ್ಯರ ನಿಯೋಗ ಜಿಲ್ಲಾಧಿಕಾರಿಗಳ ಬಳಿಗೆ ತೆರಳಿ ಅವರನ್ನು ಪರಿಸ್ಥಿತಿ ಅವಲೋಕನಕ್ಕೆ ಕರೆಯುವುದೆಂದು ಸಭೆ ನಿರ್ಧರಿಸಿತು.
ಅನಧಿಕೃತ ಮನೆಗಳಿಗೆ ದಂಡ: ಕೆ.ಎಂ.ಆರ್.ಪಿ ಸರ್ವೇ ಅನ್ವಯ ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯಲ್ಲಿ 160ಕ್ಕೂ ಅಧಿಕ ಅನಧೀಕೃತ ಮನೆಗಳಿದ್ದು ಕೇವಲ ಬಿಜಾಪುರ ಕಾಲನಿಯಲ್ಲಿ 90ಮನೆಗಳನ್ನು ಗುರುತಿಸಲಾಗಿದೆ ಎಂದು ಅಧ್ಯಕ್ಷ ಶಶಿಕಾಂತ ಶೆಟ್ಟಿ ತಿಳಿಸಿದರು.ಆಸ್ತಿ ತೆರಿಗೆ ಸೇರಿ ಶೇ6%ರಷ್ಟು ದಂಡ ವಸೂಲಿಗೆ ನಗರ ಪಂ ನಿರ್ಧರಿಸಿತು.
ನಗರ.ಪಂ. ವ್ಯಾಪ್ತಿಯ ಬಿಜಾಪುರ ಕಾಲನಿ, ಆಶ್ರಯ ಕಾಲನಿ, ಕೆ.ಎಸ್.ರಾವ್ ನಗರದಲ್ಲಿ ಅನಧೀಕೃತ ಮನೆಗಳು ಹೆಚ್ಚಿದ್ದು ಕುಡಿಯುವ ನೀರನ್ನು ಅನಧೀಕೃತವಾಗಿ ಬಳಸಲಾಗುತ್ತದೆ.
2.5 ಸೆಂಟ್ಸ್ ನಿವೇಶನದಲ್ಲಿ ಅನಧೀಕೃತವಾಗಿ ಎರಡೆರಡು ಆರ್‌ಸಿಸಿ ಮಹಡಿ ಮನೆ ನಿರ್ಮಿಸಿ 5 ಕುಟುಂಬಗಳಿಗೆ ಬಾಡಿಗೆ ನೀಡಲಾಗುತ್ತದೆ. ಮೂಲಭೂತ ವ್ಯವಸ್ಥೆ ಇಲ್ಲದ ಈ ಮನೆಗಳ ವಾಸಿಗಳು ಕಕ್ಕಸಿಗಾಗಿ ರಸ್ತೆ ಬದಿ ಅಥವಾ ಬಯಲಿಗೆ ಹೋಗುತ್ತಾರೆ ಮನೆ ತ್ಯಾಜ್ಯ ರಸ್ತೆಗೆ ಎಸೆಯುತ್ತಾರೆ ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಸದಸ್ಯ ಬಿ.ಎಂ.ಆಸೀಪ್ ಆಗ್ರಹಿಸಿದರು.
ಲ್ಯಾಂಡ್ ಬ್ರೋಕರ್ ಹಾವಳಿ: ಹಕ್ಕು ಪತ್ರಗಳನ್ನು ತೋರಿಸಿ ಯಾರದೋ ನಿವೇಶನಗಳನ್ನು ಇನ್ನಾರಿಗೋ ಮಾರಾಟ ಮಾಡಲಾಗುತ್ತದೆ. ನಿವೇಶನ ಒಬ್ಬರಿಗೆ ಮಾರಿದರೆ ಹಕ್ಕು ಪತ್ರಗಳ ಕಲರ್ ಜೆರಾಕ್ಸ್ ಮಾಡಿ ಅದರ ಪ್ರತಿಗಳನ್ನು ಇನ್ನು ಹಲವು ಅನಕ್ಷರಸ್ಥರಿಗೆ ಮಾರಾಟ ಮಾಡುವ ಕಾಳ ದಂಧೆಯ ವಿರುದ್ದ ಸಮಗ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಅಧ್ಯಕ್ಷ ಶಶಿಕಾಂತ ಶೆಟ್ಟಿ,ಬಿ.ಎಂ.ಆಸೀಫ್ ಆಗ್ರಹಿಸಿದರು.
ಮಾತಿನ ಚಕಮಕಿ: ಬಿಜಾಪುರ ಕಾಲನಿಯಲ್ಲಿ ರಸ್ತೆಯಲ್ಲಿ ಶೆಡ್ ನಿರ್ಮಿಸಿ ಪಕ್ಕದ ಮನೆಗೆ ವಾಹನಗಳು ಹೋಗದಂತೆ ತಡೆದಿರುವ ಬಗ್ಗೆ ಸದಸ್ಯೆ ವಿಮಲಾ ಪೂಜಾರಿ ಆಕ್ಷೇಪ ವ್ಯಕ್ತ ಪಡಿಸಿದರು. ಈ ಬಗ್ಗೆ ಸದಸ್ಯರಾದ ಆಶೋಕ,ಗೋಳ್ಳಾಲಪ್ಪ ವಿರೋಧಿಸಿ ಮಾತಿನ ಚಕಮಕಿ ನಡೆಸಿದರು. ಅಧ್ಯಕ್ಷ ಶಶಿಕಾಂತ ಶೆಟ್ಟಿ ಮಧ್ಯ ಪ್ರವೇಶಿಸಿ ನಗರ ಪಂಚಾಯತ್ ವತಿಯಿಂದ ಪರಿಶೀಲನೆ ನಡೆಸಿ ಕ್ರಮ ಕೈಗೋಳ್ಳುವ ಭರವಸೆ ನೀಡಿದರು.
ಆಟೋ ಟಿಪ್ಪರ್: ಎಪ್ರಿಲ್ 1ರಿಂದ ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯಲ್ಲ ಕಸ ಸಂಗ್ರಹಕ್ಕಾಗಿ ಅಟೋ ಟಿಪ್ಪರ್ ಪ್ರಾರಂಭವಾಗಲಿದೆ. ಕಸ ಹೊರಗೆ ಬಿಸಾಡುವವರಿಗೆ ದಂಡ ವಿಧಿಸಲಾಗುತ್ತದೆ ಎಂದು ಅಧ್ಯಕ್ಷ ಶಶಿಕಾಂತ ಶೆಟ್ಟಿ ಹೇಳಿದರು.
ನಗರ ಪಂಚಾಯತ್ ಪಂಪುಗಳ ರಿಪೇರಿ ಕಳಪೆಯಾಗಿದ್ದು ಪುನಃ ರಿಪೇರಿಗೆ ಒಳಪಡುತ್ತಿರುವುದರಿಂದ ಶೀಘ್ರ ಗುತ್ತಿಗೆ ದಾರರನ್ನು ಬದಲಿಸುವಂತೆ ಸದಸ್ಯ ಪುತ್ತುಬಾವ ಆಗ್ರಹಿಸಿದರು. ಪರಿಶೀಲಿಸುವುದಾಗಿ ಮುಖ್ಯಾಧಿಕಾರಿ ತಿಳಿಸಿದರು.
ಹೊರ ರಾಜ್ಯದ ವಲಸಿಗರು ಬಿಜಾಪುರ ಕಾಲನಿಯಲ್ಲಿ ಟೆಂಟ್ ಹಾಕಿ ವಾಸಿಸುತ್ತಿದ್ದಾರೆ.ಇತ್ತೀಚೆಗೆ ಕಳ್ಳತನದ ಹಾವಳಿ ಹೆಚ್ಚಿದೆ ಈ ಬಗ್ಗೆ ನಗರ ಪಂಚಾಯತ್ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯೆ ವಿಮಲಾ ಪೂಜಾರಿ ಆಗ್ರಹಿಸಿದರು.
ನಾಗರೀಕ ಸನದು ಎ.1 ಜಾರಿಗೆ ಬರಲಿದೆ ಎಂದು ಮುಖ್ಯಾಧಿಕಾರಿ ತಿಳಿಸಿದರು. ಸದಸ್ಯರಾದ ಸುನೀಲ್ ಆಳ್ವಾ, ವಂದನಾ ಕಾಮತ್, ಪುರುಷೋತ್ತಮ ರಾವ್, ಲಕ್ಷ್ಮಣ ಪೂಜಾರಿ, ಗೋಲ್ಳಾಲಪ್ಪ, ಅಶೋಕ, ಪುತ್ತು ಬಾವ ಚರ್ಚೆಯಲ್ಲಿ ಪಾಲ್ಗೋಂಡರು.
ಅಧ್ಯಕ್ಷ ಶಶಿಕಾಂತ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದು,ಸ್ಥಾಯೀ ಸಮಿತಿ ಅಧ್ಯಕ್ಷೆ ವಿಮಲಾ ಪೂಜಾರಿ ವೇದಿಕೆಯಲ್ಲಿದ್ದರು. ಮುಖ್ಯಾಧಿಕಾರಿ ಹರಿಶ್ಚಂದ್ರ.ಪಿ.ಸಾಲ್ಯಾನ್ ಸ್ವಾಗತಿಸಿ ವಂದಿಸಿದರು.

Comments

comments

Leave a Reply

Read previous post:
ಶಿಮಂತೂರು ಬೇಸಗೆ ಶಿಬಿರ ಸಮಾರೋಪ

ಮುಂಡ್ಕೂರಿನ ಭಾರ್ಗವ ಜೇಸಿಐ ಹಾಗೂ ಕಿನ್ನಿಗೋಳಿ ರೋಟರಾಕ್ಟ್ ಸಂಸ್ಥೆಗಳ ಜಂಟೀ ಆಶ್ರಯದಲ್ಲಿ ಶಿಮಂತೂರು ಶ್ರೀ ಶಾರದಾ ಪ್ರೌಢ ಶಾಲೆಯಲ್ಲಿ ನಡೆದ ಬೇಸಗೆ ಶಿಬಿರದ ಸಮಾರೋಪ ಶುಕ್ರವಾರ ನಡೆಯಿತು. ಯುಗಪುರುಷದ...

Close