ತಾಳಿಪಾಡಿಯಲ್ಲಿ ನೇಮ, ಸನ್ಮಾನ

ತಾಳಿಪಾಡಿ ರಾಮ ನಿವಾಸದಲ್ಲಿ ಗುಳಿಗ ಪಂಜುರ್ಲಿ ದೈವಗಳ ನೇಮ ಶನಿವಾರ ನಡೆಯಿತು. ಇದೇ ಸಂದರ್ಭ ನಡೆದ ಧಾರ್ಮಿಕ ಸಭೆಯಲ್ಲಿ ಕಟೀಲಿನ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣರ ಆಶೀರ್ವಚನದಲ್ಲಿ ಸಾಧಕರ ಸನ್ಮಾನ ನಡೆಯಿತು. ಜಾರಿಗೆಕಟ್ಟೆ ಶ್ರೀ ಕೊರಗಜ್ಜ, ಕೊರಗರ ಪಂಜುರ್ಲಿ ಕ್ಷೇತ್ರದ ದಿವಾಕರ ಪೂಜಾರಿ, ಶಾಂತಾ ಪೂಜಾರಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದೈವ ನರ್ತಕ ಬೋಳ ಬಾಬು ನಲ್ಕೆ, ವಿಜಯಾ ಕಲಾವಿದರ ಅಧ್ಯಕ್ಷ ಶರತ್ ಶೆಟ್ಟಿ ಸಹಿತ ವಿವಿಧ ಸಾಧಕರನ್ನು ಗೌರವಿಸಲಾಯಿತು. ಕೊಲ್ನಾಡುವಿನ ಉದ್ಯಮಿಗಳಾದ ಎನ್.ಜೆ. ಶೆಟ್ಟಿ, ಶೇಖರ್ ಸಾಲಿಯಾನ್, ರಂಗನಾಥ ಶೆಟ್ಟಿ, ಪ್ರಶಾಂತ ಅಂಚನ್, ಯುಗಪುರುಷದ ಕೆ.ಭುವನಾಭಿರಾಮ ಉಡುಪ, ತಾಳಿಪಾಡಿ ಗುತ್ತು ರಾಮಕೃಷ್ಣ ಹೆಗ್ಡೆ, ಪತ್ರಕರ್ತ ಸರ್ವೋತ್ತಮ ಆಂಚನ್ ಮತ್ತಿತರರಿದ್ದರು. ರಾಮ ನಿವಾಸದ ಯಜಮಾನ ನಾರಾಯಣ ಅಂಚನ್ ಸ್ವಾಗತಿಸಿ, ಜಗದೀಶ್ ಪೂಜಾರಿ, ದಿವಾಕರ ಕರ್ಕೇರಾ, ವಿವೇಕಾನಂದ ಸನ್ಮಾನ ಪತ್ರ ವಾಚಿಸಿ, ಶರತ್ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ದಾಮಸ್ ಕಟ್ಟೆ ಕಿರೆಂ ಚರ್ಚ್- ಗರಿಹಬ್ಬ

Dony Kirem ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಪ್ರಭು ಯೇಸುವು ಜೆರುಸಲೇಮನ್ನು ಪ್ರವೇಶಿಸುವಾಗ ಅಲ್ಲಿನ ಭಕ್ತರು ಓಲಿವ್ ಮರದ ಎಲೆಯ ಗರಿಗಳೊಂದಿಗೆ ಜೈಕಾರ ಹಾಕುತ್ತಾ ಭಕ್ತಿಪೂರ್ವಕವಾಗಿ...

Close