“ತೆಲಿಕೆದ ಬೊಳ್ಳಿ” ಹಾಸ್ಯ ಸಿನಿಮಾ

Narendra Kerekadu

ಮುಲ್ಕಿ; ಕಳೆದ ಇಪ್ಪತ್ತೈದು ವರ್ಷದಿಂದ ತುಳುರಂಗ ಭೂಮಿಯು ಚಾಪರ‍್ಕ ತಂಡವನ್ನು ಶ್ರೀಮಂತಗೊಳಿಸಿದ್ದರಿಂದ ಕಲಾಭಿಮಾನಿಗಳ ನಿರೀಕ್ಷೆಯಂತೆ ೪೬ ತುಳು ನಾಟಕವನ್ನು ರಂಗಭೂಮಿಗೆ ನೀಡಿದ್ದೇನೆ, ಅದೇ ಪರಿಕಲ್ಪನೆಯಲ್ಲಿ ತುಳು ಚಿತ್ರವನ್ನು ದೇವದಾಸ್ ಕಾಫಿಕಾಡ್ ನೀಡುತ್ತಾರೆ ಎಂಬ ಆಕಾಂಕ್ಷೆಗೆ ಎಂದಿಗೂ ನಿರಾಸೆ ಮೂಡಿಸದೆ ತುಳು ಪ್ರೇಮಿಗಳಿಗಾಗಿ “ತೆಲಿಕೆದ ಬೊಳ್ಳಿ” ತುಳು ಸಿನಿಮಾ ನಿರ್ಮಾಣ ಆಗುತ್ತಿದೆ ಎಂದು ದೇವದಾಸ್ ಕಾಪಿಕಾಡ್ ಹೇಳಿದರು.

ಮುಲ್ಕಿ ಬಳಿಯ ಪಾವಂಜೆ ಚೆಳೈರು ಖಂಡಿಗೆಯ ಪ್ರದೇಶದಲ್ಲಿ ಭಾನುವಾರ ತೆಲಿಕೆದ ಬೊಳ್ಳಿ ತುಳು ಸಿನಿಮಾದ ಚಿತ್ರೀಕರಣದ ಸಂದರ್ಭ ಮಾದ್ಯಮಕ್ಕೆ ಮಾಹಿತಿ ನೀಡುತ್ತಾ ಈ ಚಿತ್ರವು ವಿಭಿನ್ನವಾಗಿ ತ್ರಿಕೋನ ಪ್ರೇಮ ಕಥೆಯ ಸಾರಾಂಶ ಇದ್ದು ಹಾಸ್ಯಕ್ಕೆ ಮಹತ್ವವೂ ಇದೆ ಅಲ್ಲದೇ ಕೊನೆಯಲ್ಲಿ ಜನರಿಗೆ ನಗುವಿನ ನಕ್ಷತ್ರವಾಗಿ ಒಂದು ಸಂದೇಶವನ್ನು ನೀಡುವ ಪ್ರಯತ್ನವನ್ನು ಬಿಟ್ಟಿಲ್ಲ ಎಂದರು.
ಮೂರು ಗಂಟೆ ಚಾಪರ‍್ಕ ತಂಡದ ನಾಟಕವನ್ನು ನೋಡಿ ಸಂತಸಪಟ್ಟು ಪದೇ ಪದೇ ನೋಡುವುದರಿಂದ ಎಲ್ಲಾ ನಾಟಕಗಳು ನೂರು ಇನ್ನೂರು ಪ್ರದರ್ಶನ ಪಡೆದಿದೆ ಹಾಗೂ ಕೆಲವು ಜನಪ್ರಿಯ ನಾಟಕಗಳು ಐನೂರರ ಗಡಿ ದಾಟಿದೆ, ಅದೇ ರೀತಿಯಲ್ಲಿ ತೆಲಿಕೆದ ಬೊಳ್ಳಿಯು ಸಹ ಖಂಡಿತ ದ್ವಿಶತದಿನೋತ್ಸವನ್ನು ಆಚರಿಸುತ್ತದೆ ಎಂಬ ವಿಶ್ವಾಸ ಇದೆ ಕಾರಣ ಇಡೀ ಚಿತ್ರ ತಂಡವೇ ಉತ್ತಮ ಚಿತ್ರವಾಗಿ ಹಾಗೂ ವಿಶಿಷ್ಠ ಚಿತ್ರವಾಬೇಕು ಎಂದು ಚಿತ್ರೀಕರಣ ಆಗಲು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ಗಂಟೇತಾಂಡ್ ಜನಪ್ರಿಯ ತುಳು ನಾಟಕದ ಎಳೆಯನ್ನು ಇಟ್ಟುಕೊಂಡು ಪಾತ್ರವನ್ನು ಬದಲಾವಣೆ ಮಾಡಿ ಇದರ ಕಥೆ, ಸಂಭಾಷಣೆ, ಸಾಹಿತ್ಯ, ಚಿತ್ರಕಥೆಯನ್ನು ಬರೆದು ದೇವದಾಸ್ ಕಾಫಿಕಾಡ್ ಸಾರಥ್ಯ ವಹಿಸಿದ್ದು, ಪಾತ್ರವೊಂದರಲ್ಲಿಯೂ ನಟಿಸುತ್ತಿದ್ದಾರೆ. ನಿರ್ದೇಶನವನ್ನು ಪಂಚಮವೇದ ಕನ್ನಡದ ಖ್ಯಾತ ನಿರ್ದೇಶಕ ದಿ.ಪುಟ್ಟಣ ಕಣಗಾಲ್‌ರವರ ಶಿಷ್ಯರಾಗಿರುವ ಪಿ.ಎಚ್.ವಿಶ್ವನಾಥ್ ಮಾಡುತ್ತಿದ್ದಾರೆ.
ಸಂಗೀತವನ್ನು ಕನ್ನಡದ ಖ್ಯಾತ ಸಂಗೀತಗಾರ ಗುರುಕಿರಣ್ ನೀಡುತ್ತಿರುವುದು ಅವರ ತನ್ನ ತುಳು ಭಾಷೆಗೆ ನೀಡುತ್ತಿರುವ ಪ್ರಥಮ ಕಾಣಿಕೆ ಆಗಿದೆ. ಛಾಯಾಗ್ರಹಣವನ್ನು ಆರ್.ಮಂಜುನಾಥ್ ನಿರ್ವಹಿಸುತ್ತಿದ್ದಾರೆ. ವಿಶೇಷ ಸಾಹಸ ಸಂಯೋಜನೆಯನ್ನು ಅದ್ದೂರಿಯಾಗಿ ಕೌರವ ವೆಂಕಟೇಶ್ ಮಾಡುತ್ತಿರುವುದು ಚಿತ್ರದ ಪ್ಲಸ್ ಪಾಯಿಂಟ್.
ಚಿತ್ರದ ನಾಯಕನಾಗಿ ದೇವದಾಸ್ ಕಾಪಿಕಾಡ್‌ರವರ ಪುತ್ರ ಅರ್ಜುನ್ ಪ್ರಥಮವಾಗಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶ ಪಡೆಯುತ್ತಿದ್ದು, ತುಳುರಂಗಭೂಮಿಯನ್ನು ಹತ್ತಿರದಿಂದ ಕಂಡು ಹಿಂದೆ ಅನೇಕ ಕನ್ನಡದಲ್ಲಿ ಅವಕಾಶ ನೀಡಲು ಹಲವಾರು ನಿರ್ಮಾಪಕರು ತಯಾರಾಗಿದ್ದರು ಸಹ ತನ್ನ ಆರರ್ಗೇಟಂ ತುಳುವಿನಿಂದಲೇ ಆಗಬೇಕು ಎಂದು ಹೇಳಿಕೊಳ್ಳುವ ಅರ್ಜುನ್ ಎಂಬಿಎ ಪದವಿ ಪಡೆಯುತ್ತಿರುವ ವಿದ್ಯಾರ್ಥಿ. ಒಬ್ಬ ಹಿರೋಗೆ ಬೇಕಾದ ಕಟ್ಟು ಮಸ್ತು ದೇಹ, ಸುಂದರ ಮುಖ, ಧ್ವನಿ, ಎತ್ತರ ಎಲ್ಲವನ್ನು ಹೊಂದಿದ್ದು ನಟನೆಯನ್ನು ತಂದೆಯ ನೆರಳಿನಲ್ಲಿ ಕ್ಯಾಮರಾದ ಮುಂದೆ ಕಂಡಿತ ಮಾಡುವೆ ಎನ್ನುವ ವಿಶ್ವಾಸ ಹೊಂದಿದ್ದಾನೆ.
ಕನ್ನಡ ಚಿತ್ರಂಗದಲ್ಲಿ ಗುನುಗಿದ ಹಾಡು “ಬೆಳ್ಳಿ ರಥದಲ್ಲಿ ಸೂರ್ಯ ತಂದ ಕಿರಣ…… ಎಂದು ಹಾಡಿನಿಂದ ಒಂದು ಕಾಲದಲ್ಲಿ ಅಂಬರೀಷ್ ಮತ್ತು ರಾಮಾಯಣದ ದೀಪಿಕಾ ಅಭಿನಯಿಸಿದ “ಇಂದ್ರಜಿತು” ಎನ್ನುವ ಕನ್ನಡ ಹಿಟ್ ಸಿನಿಮಾ. ಅದರ ನಿರ್ಮಾಪಕ ಮಂಗಳೂರು ಸೆಂಟ್ರಲ್ ಟಾಕೀಸಿನ ಮಾಲೀಕ ಸುಧೀರ್ ಕಾಮತ್ ಅಂದೇ ಅವರು ನಿಶ್ಚಯಿಸಿದ್ದರು ತುಳುವಿನಲ್ಲಿಯೂ ಇದೇ ರೀತಿ ಹಿಟ್ ಸಿನಿಮಾ ನೀಡಬೇಕು ಎಂದು ಸುಮಾರು ಹತ್ತು ವರ್ಷ ಕಾದು ಈಗ ತೆಲಿಕೆದ ಬೊಳ್ಳಿ ಚಲನ ಚಿತ್ರ ಆಗುತ್ತಿದೆ. ದೇವದಾಸ್ ಕಾಪಿಕಾಡ್‌ರವರದ್ದೇ ನಾಟಕವನ್ನು ಸಿನಿಮಾ ಮಾಡಬೇಕು ಎಂಬ ಸುಧೀರ್ಘದ ಕನಸು ಇಂದು ಸಾಕಾರಗೊಳ್ಳುತ್ತಿದೆ ಎನ್ನುತ್ತಾರೆ.
ತುಳು ಚಿತ್ರರಂಗಕ್ಕೆ ಹೊಸ ಪರಿಚಯವಾಗಿ ಮುಂಬಯಿಯ ಖ್ಯಾತ ಮಾಡೆಲ್ ಆಶ್ರಿತಾ ಶೆಟ್ಟಿ ಹಾಗೂ ಹಲವಾರು ನೃತ್ಯ ಪ್ರಶಸ್ತಿಯನ್ನು ಪಡೆದಿರುವ ವೈಶಾಲಿ ಶೆಟ್ಟಿ ಇಬ್ಬರು ನಾಯಕಿಯರು ತೆಲಿಕೆದ ಬೊಳ್ಳಿಯಲ್ಲಿ ಮೂಡಿಬರುತ್ತಿದ್ದಾರೆ. ಚಾಪರ‍್ಕ ತಂಡದ ಯಶಸ್ಸಿಗೆ ತೆರೆಮರೆಯಲ್ಲಿ ವ್ಯವಸ್ಥಾಪಕಿ ಆಗಿ ಇರುವ ಶರ್ಮಿಳಾ ಕಾಪಿಕಾಡ್ ಇದರ ಸಹ ನಿರ್ಮಾಪಕಿ ಅಗಿದ್ದು ಹಾಗೂ ಪಾತ್ರವೊಂದರಲ್ಲಿಯೂ ನಟಿಸುತ್ತಿದ್ದಾರೆ.
ತುಳು ರಂಗಭೂಮಿಯ ಹಾಸ್ಯ ಜೋಡಿಗಳಾಗಿ ಮರೆದ ಕುಸಲ್ದರಸೆ ನವೀನ್ ಪಡಿಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು ಎಂಬ ತ್ರಿಮೂರ್ತಿಗಳು ಸಹ ನಟಿಸುತ್ತಿರುವುದು ತೆಲಿಕೆದ ಬೊಳ್ಳಿಯ ಹಾಸ್ಯಕ್ಕೆ ಮತ್ತಷ್ಟು ಕಳೆಕೊಟ್ಟಿದೆ, ಜೊತೆಗೆ ಸಾಯಿಕೃಷ್ಣ, ಸತೀಶ್ ಬಂದಲೆ, ತಿಮ್ಮಪ್ಪ ಕುಲಾಲ್, ದಿನೇಶ್ ಅತ್ತಾವರ ಅವರು ಸೇರಿಕೊಂಡಿದ್ದು, ಹಿರಿಯ ಕಲಾವಿದರಾದ ಡಿ.ಎಸ್.ಬೋಳಾರ್, ಲಕ್ಷ್ಮಣ ಕುಮಾರ್ ಮಲ್ಲೂರು, ರಮಾ ಬಿ.ಸಿರೋಡ್, ಸದಾಶಿವ ಅಮಿನ್, ಹಿರಿಯ ನಟರ ದಂಡೆ ಇದ್ದು, ಖಳನಾಯಕರಾಗಿ ಗೋಪಿನಾಥ್ ಭಟ್, ಸುರೇಶ್ ಕುಲಾಲ್, ಸಂದೀಪ್ ಶೆಟ್ಟಿ, ನರೇಂದ್ರ ಕೆರೆಕಾಡು, ಹರಿಶ್ ವಾಸು ಶೆಟ್ಟಿಯಂತಹ ರಂಗಭೂಮಿ ಕಲಾವಿದರಿಗೆ ಅವಕಾಶ ನೀಡಿದ್ದಾರೆ.
ಚಾಪರ‍್ಕ ತಂಡದ ಎಲ್ಲಾ ಕಲಾವಿದರಿಗೆ ಅವಕಾಶ ನೀಡಿರುವ ದೇವದಾಸ್ ಕಾಪಿಕಾಡ್ ಈ ಚಿತ್ರವು ತುಳು ಚಿತ್ರರಂಗದಲ್ಲಿ ತನ್ನದೇ ಆದ ಸ್ಥಾನಮಾನ ಹೊಂದಬೇಕು ಎಂಬ ಮಹತ್ವಕಾಂಕ್ಷೆ ಇಟ್ಟುಕೊಂಡಿದ್ದು ಅನೇಕ ಹೊಸ ಹೊಸ ದೃಶ್ಯಾವಳಿಯನ್ನು ಪೋಣಿಸಿದ್ದಾರೆ. ಯುವಜನರಿಗೂ ಚಿತ್ರವನ್ನು ಸೆಳೆಯುವ ಉದ್ದೇಶದಿಂದಲೇ ಬೈಕ್ ರ‍್ಯಾಲಿ, ಹೀಲಿಂಗ್ ದೃಶ್ಯ ಮೈನವಿರೇಳಿಸುವ ವಿಭಿನ್ನ ಸಾಹಸ ಅಳವಡಿಸಿದ್ದು, ಹಿರಿಯರಿಗೆ ಬೇಕಾದ ಸಾಂಸಾರಿಕ ಕಥಾನಕ, ಹಾಸ್ಯಕ್ಕಾಗಿಯೇ ಪಾತ್ರಗಳನ್ನು ಸೃಷ್ಟಿ ಮಾಡಿದ್ದು ಒಟ್ಟಾರೆ, ಸಂಪೂರ್ಣ ಮನರಂಜನೆಯ ಚಿತ್ರವಾಗುವುದರಲ್ಲಿ ಸಂಶಯವಿಲ್ಲ ಎನ್ನುತ್ತಾರೆ ನಿರ್ದೇಶಕ ವಿಶ್ವನಾಥ್.
ಚೇಳ್ಳಾರುವಿನಲ್ಲಿ ಬೈಕ್ ಹಿಲಿಂಗ್ ಮತ್ತು ಚೇಸಿಂಗ್ ದೃಶ್ಯ ಮತ್ತು ಪ್ರಕೃತಿಯ ನಡುವೆ ನಡೆಯುವ ಸುಂದರ ದೃಶ್ಯಾವಳಿಯನ್ನು ಖಂಡಿಗೆಯ ನದಿ ಪರಿಸರದಲ್ಲಿ ಚಿತ್ರೀಕರಿಸಲಾಯಿತು.

 

Comments

comments

Leave a Reply

Read previous post:
ಏಳಿಂಜೆ ಪಟ್ಟೆ ಕ್ರಾಸ್‌ನಲ್ಲಿ ಕ್ರಿಕೆಟ್ ಟೂರ್ನಿ

ಏಳಿಂಜೆ ಪಟ್ಟೆ ಕ್ರಾಸ್‌ನ ಶ್ರೀ ಮೂಕಾಂಬಿಕಾ ಕ್ರಿಕೆಟರ್ಸ್‌ನ ನೇತೃತ್ವದಲ್ಲಿ ನಿಗದಿತ ಓವರ್‌ಗಳ ಕ್ರಿಕೆಟ್ ಪಂದ್ಯಾಟ ಶ್ರೀ ಮೂಕಾಂಬಿಕಾ ಟ್ರೋಫಿ ೨೦೧೨ ರವಿವಾರ ಪಟ್ಟೆ ಕ್ರಾಸ್‌ನಲ್ಲಿ ನಡೆಯಿತು. ಉದ್ಯಮಿ...

Close