ಮುಲ್ಕಿ ಠಾಣೆಯ ಎಎಸ್‌ಐ ರಾಘವ ನಿವೃತ್ತಿ – ಬೀಳ್ಕೊಡುಗೆ

Bhagyavan Sanil

ಮುಲ್ಕಿ ಠಾಣೆಯ ಎಎಸ್‌ಐ ರಾಘವರವರ ನಿವೃತ್ತಿಯ ಬೀಳ್ಕೊಡುಗೆ ಸಮಾರಂಭವು ಮುಲ್ಕಿಯ ಹೋಟೆಲ್ ಆಧಿಧನ್‌ನಲ್ಲಿ ಶನಿವಾರ ನಡೆಯಿತು.ಮುಲ್ಕಿ ಠಾಣೆಯ ಇನ್ಸ್‌ಪೆಕ್ಟರ್ ಬಶೀರ್ ಅಹಮ್ಮದ್ ಮತ್ತು ಪಿಎಸ್‌ಐ ಸುನೀಲ್ ಪಾಟೀಲ್‌ರವರು ಸನ್ಮಾನಿಸಿ ಠಾಣೆಯ ಸಿಬ್ಬಂದಿಗಳ ಪರವಾಗಿ ಚಿನ್ನದ ಉಂಗುರ ನೀಡಿದರು.

ಎಎಸ್‌ಐ ಚಂದ್ರಹಾಸ ಪೂಜಾರಿ,ಎಎಸ್‌ಐ ವಾಮನ್, ಸಿಬ್ಬಂದಿ ಹರಿಶೇಖರ್,ಮುಲ್ಕಿ ನಗರ ಪಂಚಾಯತ್ ಅಧ್ಯಕ್ಷ ಶಶಿಕಾಂತ ಶೆಟ್ಟಿ, ಕೆಮ್ರಾಲ್ ಪಂಚಾಯತ್‌ನ ರಿಚರ್ಡ್ ಡಿಸೋಜಾ, ಮೈಯದ್ದಿ, ಗುರುರಾಜ್ ಪೂಜಾರಿ ರಾಘವರವರನ್ನು ಅಭಿನಂದಿಸಿದರು. ರಾಘವರವರ ಪತ್ನಿ ಕಮಲಾಕ್ಷಿ ಉಪಸ್ಥಿತರಿದ್ದರು.
ಶೇಕಪ್ಪ ಸ್ವಾಗತಿಸಿದರು.ನರೇಂದ್ರ ಕೆರೆಕಾಡು ನಿರೂಪಿಸಿದರು. ಸುರೇಂದ್ರ ವಂದಿಸಿದರು.

Comments

comments

Leave a Reply

Read previous post:
ಮುಲ್ಕಿ ನಗರ ಪಂಚಾಯತ್ ಮಾಸಿಕ ಸಭೆ – ಮಾತಿನ ಚಕಮಕಿ

Bhagyavan Sanil ಮುಲ್ಕಿ: ಕುಡಿಯುವ ನೀರಿನ ಸಮಸ್ಯೆ,ಅಕ್ರಮ ವಲಸಿಗರ ಕಾಟ,ಅನಧೀಕೃತ ಮನೆಗಳಿಂದ ನ.ಪಂ.ಗೆ ನಷ್ಟ, ಕುಡಿಯುವ ನೀರಿನ ಪೋಲು, ಲ್ಯಾಂಡ್ ಬ್ರೋಕರ್ ಹಾವಳಿ, ಅಕ್ರಮ ರಸ್ತೆ ತಡೆ ಮುಂತಾದ...

Close