ಸ್ತನ ರೋಗ ಮಾಹಿತಿ ಶಿಬಿರ

Lionel Pinto

ಕಿನ್ನಿಗೋಳಿ ಇನ್ನರ್ ವೀಲ್ ಕ್ಲಬ್  ಹಾಗೂ ಉಜ್ವಲ ಸ್ತ್ರೀ ಸಂಘಟನೆಯ ಜಂಟೀ ಆಶ್ರಯದಲ್ಲಿ ಸ್ತನ ರೋಗದ ಮಾಹಿತಿ ಶಿಬಿರ ಕಿನ್ನಿಗೋಳಿ ಚರ್ಚ್ ನ ಸಭಾಂಗಣದಲ್ಲಿ ಜರಗಿತು. ಕಿನ್ನಿಗೋಳಿ ಚರ್ಚ್ ಧರ್ಮಗುರು ಫಾ| ಆಲ್ಪ್ರೆಡ್ ಜೆ. ಪಿಂಟೊ ಅಧ್ಯಕ್ಷತೆವಹಿಸಿದ್ದು, ಸ್ತ್ರೀ ರೋಗ ತಜ್ಞ ಡಾ| ವೆಂಕಟೇಶ್ ಸಂಜೀವ ಪ್ರಧಾನ ಉಪನ್ಯಾಸವನ್ನಿತ್ತರು. ಸಹಾಯಕ ಧರ್ಮಗುರು ಫಾ| ಮೈಕಲ್ ಮಸ್ಕರೇನ್ಹಸ್, ಫಾ| ವಿಕ್ಟರ್ ಪಿಂಟೊ, ಸಿಸ್ಟರ್ ಲೊಲಿಟಾ ಬಿ.ಎಸ್., ಹಾಗೂ ಚರ್ಚ್ ಉಪಾಧ್ಯಕ್ಷ ಲೈನಲ್ ಪಿಂಟೊ ಉಪಸ್ಥಿತರಿದ್ದರು. ಉಜ್ವಲ ಸ್ತ್ರೀ ಸಂಘಟನೆಯ ಅಧ್ಯಕ್ಷೆ ಗ್ರೇಸಿ ರೊಡ್ರಿಗಸ್ ಸ್ವಾಗತಿಸಿ, ಇನ್ನರ್ ವೀಲ್  ಅಧ್ಯಕ್ಷೆ ಜಾನೆಟ್ ರೊಸಾರಿಯೊ ವಂದಿಸಿ, ಅನಿತಾ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಕಿನ್ನಿಗೋಳಿ – ಪವಿತ್ರ ಗರಿಗಳ ಹಬ್ಬ

Lionel Pinto ಪವಿತ್ರ ಗರಿಗಳ ಹಬ್ಬವನ್ನು  ಕಿನ್ನಿಗೋಳಿಯ ಕ್ರೈಸ್ತ ಬಾಂಧವರು ಕಿನ್ನಿಗೋಳಿ ಕೊಸೆಸಾಂವ್ ಅಮ್ಮನವರ ಚರ್ಚ್‌ನಲ್ಲಿ ಆಚರಿಸಿದರು. ಆಶೀರ್ವದಿಸಿದ ತೆಂಗಿನ ಮರದ ಎಲೆಯ ಗರಿಗಳನ್ನು ಹಿಡಿದು ಭಕ್ತ...

Close