ಪಟ್ಟೆ ಕೋರ‍್ದಬ್ಬು ದೈವಸ್ಥಾನದಲ್ಲಿ ಬ್ರಹ್ಮ ಕಲಶ, ನೇಮೋತ್ಸವ, ಧಾರ್ಮಿಕ ಸಭೆ

Photo by : Sharath Shetty
ಕಿನ್ನಿಗೋಳಿ : ಪಟ್ಟೆ ಶ್ರೀ ಕೋರ‍್ದಬ್ಬು ತನ್ನಿಮಾನಿಗ ಜುಮಾದಿ ಬಂಟ ದೈವಸ್ಥಾನದಲ್ಲಿ ಬ್ರಹ್ಮ ಕುಂಬಾಭಿಷೇಕ ಹಾಗೂ ನೇಮೋತ್ಸವ ರವಿವಾರ ನಡೆಯಿತು. ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಕಟೀಲಿನ ಲಕ್ಷ್ಮೀನಾರಾಯಣ ಆಸ್ರಣ್ಣ ರ ಆಶೀರ್ವಚನದಲ್ಲಿ ಅಧ್ಯಾಪಕ ಕೆ.ಕೆ.ಪೇಜಾವರ ಧಾರ್ಮಿಕ ಉಪನ್ಯಾಸ ನೀಡಿದರು. ಏಳಿಂಜೆ ಯೋಗೀಶ್ ರಾವ್ ಅಧ್ಯಕ್ಷತೆ ವಹಿಸಿದ್ದು ಏಳಿಂಜೆ ಶ್ರೀಧರ ಭಟ್, ಕೇರ್ದಬೆಟ್ಟು ಗುತ್ತು ವಾಸು ಶೆಟ್ಟಿ, ಪಟ್ಟೆ ಮಾಗಂದಡಿ ವಿಜಯನಾಥ ಶೆಟ್ಟಿ, ಪಟ್ಟೆ ಕಿನ್ನಿಮುಂಡ ಲೋಕನಾಥ ಶೆಟ್ಟಿ, ಪಟ್ಟೆ ಬೆಜ್ಜಬೆಟ್ಟು ದಿನೇಶ್ ಶೆಟ್ಟಿ, ನಾರ್ಣಬೆನ್ನಿ ಚಪ್ಪರಪೂಜಾರಿ, ದೋಟ ಮನೆ ರಾಜೇಶ್ ಪೂಜಾರಿ, ಪಟ್ಟೆ ಭಂಡಾರ ಮನೆ ಉಜ್ಜು ಪೂಜಾರಿ, ಪಡ್ಡಲ್ಲ ಮನೆ ಸುಂದರ ಪೂಜಾರಿ, ಬೋಲನಾಥ ಶೆಟ್ಟಿ, ಮತ್ತಿತರರಿದ್ದರು. ಆಡಳಿತ ಮಂಡಳಿಯ ಅಧ್ಯಕ್ಷ ರಘುರಾಮ ಅಡ್ಯಾಂತಾಯ ಸ್ವಾಗತಿಸಿ, ರಘುರಾಮ ಅಮೀನ್ ವಂದಿಸಿದರು, ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ನೇಮೋತ್ಸವ ನಡೆಯಿತು.

Comments

comments

Leave a Reply

Read previous post:
ಪೊಸ್ರಾಲ್ ನಲ್ಲಿ ಹೊನಲು ಬೆಳಕಿನ ಕ್ರಿಕೆಟ್

Photo by : Sharath Shetty ಪೊಸ್ರಾಲ್ : ಪೊಸ್ರಾಲ್ ಶ್ರೀ ಮಹಾಲಿಂಗೇಶ್ವರ ಕ್ರಿಕೆಟರ‍್ಸ್ ನ ರಜತ ಮಹೋತ್ಸವ ಪ್ರಯುಕ್ತ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ ಶನಿವಾರ ಪೊಸ್ರಾಲು...

Close