ಪೊಸ್ರಾಲ್ ನಲ್ಲಿ ಹೊನಲು ಬೆಳಕಿನ ಕ್ರಿಕೆಟ್

Photo by : Sharath Shetty

ಪೊಸ್ರಾಲ್ : ಪೊಸ್ರಾಲ್ ಶ್ರೀ ಮಹಾಲಿಂಗೇಶ್ವರ ಕ್ರಿಕೆಟರ‍್ಸ್ ನ ರಜತ ಮಹೋತ್ಸವ ಪ್ರಯುಕ್ತ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ ಶನಿವಾರ ಪೊಸ್ರಾಲು ಮಿತ್ತೊಟ್ಟು ಕ್ರೀಡಾಂಗಣ ದಲ್ಲಿ ನಡೆಯಿತು. 62 ತಂಡಗಳು ಪಾಲ್ಗೊಂಡಿದ್ದ ಕೂಟದಲ್ಲಿ ಮೂಡಬಿದಿರೆಯ ಜಿಗರ್ ಮೈಂಡ್ ಪ್ರಥಮ, ಸುಭಾಶ್ ನಗರ ಫ್ರೆಂಡ್ಸ್ ದ್ವಿತೀಯ, ರಾಮನಗರ ಫ್ರೆಂಡ್ಸ್ ತೃತೀಯ, ನ್ಯೂ ಸ್ಟಾರ್ ಕಾರ್ಕಳ ಚತುರ್ಥ ಸ್ಥಾನ ಪಡೆಯಿತು. ದಕ್ಷಿಣ ಕನ್ನಡ ಜಿ. ಪಂ ಸದಸ್ಯ ಈಶ್ವರ್ ಕಟೀಲುರ ಅಧ್ಯಕ್ಷತೆಯಲ್ಲಿ ಹಿರಿಯ ನ್ಯಾಯವಾದಿ ಕೆ.ಆರ್. ಪಂಡಿತ್, ಸಚ್ಚರ ಪರಾರಿ ರಮೇಶ್ ಶೆಟ್ಟಿ, ಸಾಯಿನಾಥ್ ಶೆಟ್ಟಿ, ದಿವಾಕರ ಚೌಟ, ಸತ್ಯನಾರಾಯಣ ಭಟ್, ವಾಸುದೇವ ಭಟ್, ಶರತ್ ಶೆಟ್ಟಿ ಪ್ರಶಸ್ತಿ ವಿತರಿಸಿದರು.

ಉದ್ಘಾಟನೆ: ಬಿ.ಜೆ.ಪಿ ನಾಯಕ ಸುನಿಲ್ ಕುಮಾರ್ ರ ಅಧ್ಯಕ್ಷತೆಯಲ್ಲಿ ಪೊಸ್ರಾಲು ದೇವಳದ ಅರ್ಚಕ ರಂಗ ಭಟ್ ಪಂದ್ಯಾಟ ಉದ್ಘಾಟಿಸಿದರು. ಉಗ್ಗೆಮಾರು ಗುತ್ತು ನಾರಾಯಣ ಶೆಟ್ಟಿ, ಪ್ರಮೋದ್ ಶೆಟ್ಟಿ, ರೋಹಿತ್ ಕುಮಾರ್ ಕಟೀಲು, ಸುಚರಿತ ಶೆಟ್ಟಿ, ಸಂದೀಪ್ ಶೆಟ್ಟಿ, ಯವರ ಉಪಸ್ಥಿತಿಯಲ್ಲಿ ಬೋಳ ಅಕ್ಷತ ಪೂಜಾರಿಯವರನ್ನು ಸನ್ಮಾನಿಸಲಾಯಿತು.

Comments

comments

Leave a Reply

Read previous post:
ಮುಂಡ್ಕೂರಿನಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭೆ

Photo by : Sharath Shetty ಮುಂಡ್ಕೂರು:  ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಕಳ ತಾಲೂಕು, ಮುಂಡ್ಕೂರು, ಮುಲ್ಲಡ್ಕ, ಸಚ್ಚೇರಿ ಪೇಟೆಯ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಗಳ...

Close