ಮುಂಡ್ಕೂರಿನಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭೆ

Photo by : Sharath Shetty

ಮುಂಡ್ಕೂರು:  ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಕಳ ತಾಲೂಕು, ಮುಂಡ್ಕೂರು, ಮುಲ್ಲಡ್ಕ, ಸಚ್ಚೇರಿ ಪೇಟೆಯ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಗಳ ಆಶ್ರಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಶುಕ್ರವಾರ ನಡೆಯಿತು. ಯೋಜನೆಯ ಅಜೆಕಾರು ವಲಯ ಮೇಲ್ವಿಚಾರಕ ಮುರಳೀಧರ ಎರ್ಮಾಯಿ ಧಾರ್ಮಿಕ ಉಪನ್ಯಾಸ ನೀಡಿದರು. ಮುಲ್ಲಡ್ಕ ಸುರೇಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದು ಪುತ್ತಿಗೆ ವಲಯ ಮೆಲ್ವಿಚಾರಕ ಸಂತೋಷ್ ಕುಮಾರ್ ಜೈನ್, ಮುಂಡ್ಕೂರು ಗ್ರಾ.ಪಂ ಅಧ್ಯಕ್ಷೆ ರತ್ನ, ಸೇವಾನಿರತ ಕಿಶೋರ್, ಮತ್ತಿತರರಿದ್ದರು. ಮುಂಡ್ಕೂರು ಒಕ್ಕೂಟದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಸ್ವಾಗತಿಸಿ, ಸಚ್ಚರಿ ಪೇಟೆ ಒಕ್ಕೂಟದ ಅಧ್ಯಕ್ಷೆ ವನಜ ವಂದಿಸಿದರು. ಸಂತೋಷ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಮಕ್ಕಳ ಎಪ್ರಿಲ್ ರಜಾ ಮಜ ಸಜಾ?

ಇಂದಿನ ಬಾಲ್ಯದಿನ ಮಕ್ಕಳಿಗೆ ಗಗನ ಕುಸುಮವಾಗಿದೆ. ಬೇಸಿಗೆಯಲ್ಲಿ ಸೂರ್ಯನ ತಾಪಮಾನದೊಂದಿಗೆ ಪರೀಕ್ಷೆಯ ಬಿಸಿ ಮುಗಿದು ತಂಪಾದ ರಜೆಯ ಸವಿ ಉಣ್ಣೋಣವೆಂದರೆ ಬಾಲ್ಯದ ಚಿಗುರು ಹೊಸಕಿ ಹಾಕುವ ವಿವಿಧ ಜಾಹೀರಾತುಗಳು...

Close