ಮುಲ್ಕಿ: ಅಕ್ಷರ ಲಕ್ಷ ನರಸಿಂಹ ಮಂತ್ರ ಯಜ್ಞ

 Photos by Bhagyavan Sanil

ಮುಲ್ಕಿ: ಕಷ್ಟ ಕಾರ್ಪಣ್ಯಗಳ ನಿವೃತ್ತಿಗೆ ಶ್ರೀ ನರಸಿಂದ ದೇವರ ಉಪಸನೆ ಶ್ರೇಯಸ್ಕರ ಎಂದು ಶ್ರೀಕ್ಷೇತ್ರ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಅವರು ಸೋಮವಾರ ಮುಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಡೆಯುತ್ತಿರುವ ಅಕ್ಷರಲಕ್ಷ ನರಸಿಂಹ ಮಂತ್ರ ಯಜ್ಞ ಮತ್ತು ವಿಶೇಷ ಸಪ್ತೋತ್ಸವಕ್ಕೆ ಆಗಮಿಸಿ ಆಶೀರ್ವಚನ ನೀಡಿದರು.
ಶೃದ್ಧಾ ಭಕ್ತಿಗೆ ಶೀಘ್ರ ಒಲಿಯುವ ಶ್ರೀ ನರಸಿಂಹ ದೇವರು ಭಕ್ತಾಧಿಗಳಿಗೆ ಸನ್ಮಂಗಲವನ್ನು ಉಂಟುಮಾಡಲಿ ಎಂದು ಹರಸಿದರು. ಬಳಿಕ ಸ್ವಾಮೀಜಿಯವರು ಶ್ರೀ ವ್ಯಾಸ ಮಹರ್ಷಿ ವೇದ ಪಾಠ ಶಾಲೆಗೆ ಭೇಟಿ ನೀಡಿ ಅಲ್ಲಿ ಗ್ರಂಥಾಲಯ ಧ್ಯಾನ ಕೇಂದ್ರ ಮತ್ತು ಪಾಠ ಶಾಲೆಯನ್ನು ವೀಕ್ಷಿಸಿದರು.
ವೇ.ಮೂ. ಪದ್ಮನಾಭ ಭಟ್ ಸ್ವಾಗತಿಸಿದರು. ದೇವಳದ ದರ್ಶನ ಪಾತ್ರಿ ಶ್ರೀ ವಸಂತನಾಯಕ್ ಫಲಿಮಾರ್ಕರ್, ಅರ್ಚಕವೃಂದ, ಆಡಳಿತ ಮೊಕ್ತೇಸರು ಹಾಗೂ ಭಜಕವೃಂದದವರು ಉಪಸ್ಥಿತರಿದ್ದರು.

Comments

comments

Leave a Reply

Read previous post:
ಏಳಿಂಜೆ ಗುಂಡಿಲದಲ್ಲಿ ನಾಗದೇವರ ಪುನರ್ ಪ್ರತಿಷ್ಠೆ

Sharath Kinnigoli ಕಿನ್ನಿಗೋಳಿ : ಏಳಿಂಜೆ ಗುಂಡಿಲ ಶ್ರೀ ನಾಗದೇವರ ಸನ್ನಿಧಿಯಲ್ಲಿ ಪುನರ್ ಪ್ರತಿಷ್ಠೆ, ಆಶ್ಲೇಷ ಬಲಿ ರವಿವಾರ ನಡೆಯಿತು.

Close