ಯುವ ಪೀಳಿಗೆಗೆ ಸಂಸ್ಕೃತಿ ಕಲಿಸಿ ಉತ್ತಮ ಪ್ರಜೆ ಮಾಡಬೇಕು

Photos by:  Bhagyavan Sanil

ಮುಲ್ಕಿ: “ಪ್ರಜ್ಞಾವಂತ ನಾಗರೀಕರ ನಿರ್ಮಾಣಕ್ಕೆ ಯುವಕ ಸಂಘಗಳು ಸಮರೋಪಾದಿಯಲ್ಲಿ ಕಾರ್ಯತತ್ಪರರಾಗುವುದು ಇಂದಿನ ಪರಿಸ್ಥಿತಿಯಲ್ಲಿ ಅಗತ್ಯ ” ಎಂದು ವೇ.ಮೂ. ಶ್ರೀ ವಾದಿರಾಜ ಉಪಾದ್ಯಾಯ  ಅವರು ಮುಲ್ಕಿ ವಿಜಯಾ ಕಾಲೇಜು ಬಳಿಯ ಶ್ರೀ ನವದುರ್ಗಾ ಯುವಕ ವೃಂದದ ಉದ್ಘಾಟನಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ” ಹಿರಿಯರು ನಮ್ಮ ಸಂಸ್ಕೃತಿಯನ್ನು ಯುವ ಪೀಳಿಗೆಗೆ ಕಲಿಸಿ ಉತ್ತಮ ಪ್ರಜೆಗಳಾಗುವಂತೆ ಮಾಡಬೇಕು” ಎಂದರು. ಮುಖ್ಯ ಅತಿಥಿಯಾಗಿದ್ದ ಮುಲ್ಕಿನಗರ ಪಂಚಾಯತ್ ಅಧ್ಯಕ್ಷ ಶಶಿಕಾಂತ ಶೆಟ್ಟಿಯವರು ಮಾತನಾಡಿ, ಸರ್ಕಾರಿ ನಿವೇಶನ ಕಂಡುಬಂದಲ್ಲಿ ಯುಕ ವೃಂದಕ್ಕೆ ಶಾಶ್ವತ ಕಟ್ಟಡ ನಿರ್ಮಾಣಕ್ಕೆ ಪಂಚಾಯತ್ ವತಿಯಿಂದ ಸಹಕರಿಸುತ್ತೆನೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿಸೀಮೆಯ ಅರಸರಾದ ಶ್ರೀ ದುಗ್ಗಣ ಸಾವಂತರು ವಹಿಸಿದ್ದರು. ಮುಲ್ಕಿನಗರ ಪಂಚಾಯತ್ ಸದಸ್ಯ ಸತೀಶ್.ಎಸ್.ಅಂಚನ್,ಸಂಸ್ಥೆಯ ಗೌರವಾಧ್ಯಕ್ಷ ಮತ್ತು ಮುಲ್ಕಿ ಠಾಣೆಯ ಎ.ಎಸ್.ಐ ಚಂದ್ರಹಾಸ್ ಸಾಲ್ಯಾನ್, ಅಧ್ಯಕ್ಷ ಗಣೇಶ್ ಪ್ರಸಾದ್, ಕಾರ್ಯದರ್ಶಿ ಭಾಸ್ಕರ್, ಕೋಶಾಧಿಕಾರಿ ನಾಗೇಶ್.ಎಸ್.ಕೋಟ್ಯಾನ್ ವೇದಿಕೆಯಲ್ಲಿದ್ದರು. ಕುಮಾರಿ ಶ್ರೀವಿದ್ಯಾರವರ ಭರತನಾಟ್ಯ ಪ್ರದರ್ಶನದೊಂದಿಗೆ ಕಾರ್ಯಕ್ರಮದ ಉದ್ಘಾಟನೆ ನಡೆಯಿತು. ಸದಾನಂದ ಅಂಚನ್ ಪ್ರಸ್ತಾವನೆಯಲ್ಲಿ ಸಂಘದ ಧ್ಯೇಯ ಮತ್ತು ಉದ್ದೇಶಗಳಾದ ಬಡವಿದ್ಯಾರ್ಥಿಗಳಿಗೆ ಸಹಾಯ, ತುರ್ತು ಪರಿಸ್ಥಿತಿಯಲ್ಲಿ ರಕ್ತದಾನ, ಉದ್ಯೋಗ ಮಾಹಿತಿಮುಂತಾದ ಉದ್ದೇಶಗಳನ್ನು ತಿಳಿಸಿದರು. ಗಣೇಶ್ ಪ್ರಸಾದ್ ಸ್ವಾಗತಿಸಿ , ನವೀನ್ ಪುತ್ರನ್ ನಿರೂಪಿಸಿದರು,  ಸತೀಶ್ ಅಂಚನ್ ವಂದಿಸಿದರು.

Comments

comments

Leave a Reply

Read previous post:
ಮುಲ್ಕಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಥ ಸಂಚಲನ

Photos by:  Bhagyavan Sanil ಮುಲ್ಕಿ : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರು ಮುಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ಕೆ.ಎಸ್.ರಾವ್ ನಗರದ ವರೆಗೆ ಪಥ ಸಂಚಲನ...

Close