34 ವರ್ಷಗಳ ನಿರಂತರ ಸೇವೆ – ಉಪೇಂದ್ರ ಆಚಾರ್ಯರಿಗೆ ಸನ್ಮಾನ

Photos by : Bhagyavan Sanil

ಮುಲ್ಕಿ : ಉತ್ತಮ ನಾಯಕತ್ವದ ಶಿಕ್ಷಣ ನೀಡಿದ ವಿಜಯಾ ಕಾಲೇಜು ನಲಂದಾ ಹಾಗೂ ತಕ್ಷಶಿಲಾ ವಿಶ್ವವಿದ್ಯಾನಿಲಯಕ್ಕೆ ಸಮಾನವಾಗಿದೆ ಎಂದು ಹಿರಿಯ ಬಿಜೆಪಿ ಮುಖಂಡ ರಾಮಚಂದ್ರ ಬೈಕಂಪಾಡಿ ಹೇಳಿದರು. ಅವರು ವಿಜಯಾ ಕಾಲೇಜಿನ ಸ್ಟಾಪ್ ಕ್ಲಬ್ ವಾರ್ಷಿಕ ಸಂತೋಷ ಕೂಟದಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳು, 34 ವರ್ಷಗಳ ನಿರಂತರ ಸೇವೆ ನೀಡಿ ನಿವೃತ್ತರಾದ ಉಪೇಂದ್ರ ಆಚಾರ್ಯರವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಕಾಲೇಜಿನಲ್ಲಿ ನಡೆದ ರಾಷ್ಟ್ರ ಮಟ್ಟದ ರಸಾಯನಶಾಸ್ತ್ರದ ವಿಚಾರ ಸಂಕಿರಣದಲ್ಲಿ ಮಂಡಿಸಿದ ಪ್ರಭಂದಗಳ ಸಂಪುಟವನ್ನು ಬಿಡುಗಡೆಗೊಳಿಸಿ ಮಾತನಾಡಿದರು.  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಕಾಡಮಿ ಆಫ್ ಜನರಲ್ ಎಜ್ಯುಕೇಶನ್ ಆಡಳಿತಾಧಿಕಾರಿ ಡಾ.ಎಚ್.ಶಾಂತಾರಾಂ ಮಾತನಾಡಿ, ಸಿಬ್ಬಂದಿಗಳು ಸಂಘಟಿತರಾಗುವಲ್ಲಿ ಮತ್ತು ಒಂದೇ ಕುಟುಂಬದ ಸದಸ್ಯರಂಗೆ ಬಾಳುವಲ್ಲಿ ವಾರ್ಷಿಕ ಸಂತೋಷ ಕೂಟಗಳು ಸಹಕಾರಿಯಾಗಿವೆ ಎಂದ ಅವರು ಧೃಢ ಮನಸ್ಸು ಮತ್ತು ಧನಾತ್ಮಕ ಚಿಂತನೆ ಯಾವತ್ತೂ ಮುಪ್ಪು ತರದು ಎಂದರು. ಅತಿಥಿಗಳಾಗಿ ವಿಜಯಲಕ್ಷ್ಮಿ ಶಾಂತಾರಾಂ, ಕಾಲೇಜು ಅಡಳಿತ ಮಂಡಳಿಯ ಅಧ್ಯಕ್ಷ ಡಾ.ಎಂ.ಎ.ಆರ್.ಕುಡ್ವಾ, ಸದಸ್ಯರಾದ ವಿ.ವಿಶ್ವನಾಥ ಕಾಮತ್, ಪ್ರೊನಾಗೇಶ್ ಶೆಣೈ, ಧರ್ಮದರ್ಶಿ ಹರಿಕೃಷ್ಣ ಪುನರೂರು, ವಿಶ್ವಸ್ಥ ಮಂಡಳಿ ಸದಸ್ಯರಾದ ಡಾ.ಕೆ.ಪಿ.ಮಧ್ಯಸ್ಥ, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ಪ್ರೊ.ಪಮೀದಾ ಬೇಗಂ, ಪದವಿ ಕಾಲೇಜು ಪ್ರಾಂಶುಪಾಲರಾದ ಪ್ರೊ.ಕೆ.ಆರ್.ಶಂಕರ್ ವೇದಿಕೆಯಲ್ಲಿದ್ದರು. ಉತ್ತಮ ಅಂಕ ವಿಜೇತರಾದ ಕೃತಿಕಾ (ಬಿಸಿಎ ಪ್ರಥಮ ಸ್ಥಾನ), ಅಶ್ವಿನಿಭಟ್(ಬಿಎಸ್ಸಿ ದ್ವತೀಯ ಸ್ಥಾನ), ಅಂಜಲಿ(ಬಿಸಿಎ ತೃತೀಯ ಸ್ಥಾನ)  ಅಮಿತಾ ಮಾಬೆನ್ (ಬಿ.ಎ ಒಂಬತ್ತನೇ ಸ್ಥಾನ) ಇವರನ್ನು ಸನ್ಮಾನಿಸಲಾಯಿತು. ಪ್ರೊ.ಕೆ.ಆರ್.ಶಂಕರ್ ಸ್ವಾಗತಿಸಿ, ಪ್ರೊ.ಹಯವದನ ಉಪಾಧ್ಯ ಕಾರ್ಯಕ್ರಮ ನಿರೂಪಿಸಿದರು. ಪ್ರೊ.ಪಮೀದಾ ಬೇಗಂ ವಂದಿಸಿದರು.

Comments

comments

Leave a Reply

Read previous post:
ಪುನರೂರು ಗುಡ್ಡಕ್ಕೆ ಬೆಂಕಿ

Photos by : Bhagyavan Sanil ಮುಲ್ಕಿ: ಪುನರೂರು ಇಲ್ಲಿನ ಸಮೀಪದ ಕೆನರಾ ಲೈಟಿಂಗ್ ಕಂಪೆನಿಯ ಬಳಿ ಗುಡ್ಡಕ್ಕೆ ಬೆಂಕಿ ಹಿಡಿದ ಪರಿಣಾಮ ಮೂಡಬಿದ್ರೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು...

Close