ಮುಲ್ಕಿ ಶ್ರೀ ವೆಂಕಟರಮಣ- ಶ್ರೀ ನರಸಿಂಹ ಮಂತ್ರ – ಆಶೀರ್ವಚನ

Photo By Bhagyavan Sanil

ಸಾತ್ವಿಕ ಆಹಾರ ಧನಾತ್ಮಕ ಚಿಂತನೆ,ಪ್ರಾಮಾಣಿಕ ಭಕ್ತಿಯು ಜೀವನದಲ್ಲಿ ಸಕಲೈಶ್ವರ್ಯದೊಂದಿಗೆ ಆರೋಗ್ಯ ಭಾಗ್ಯವನ್ನು ನೀಡಬಲ್ಲದು ಎಂದು ಶ್ರೀ ಸಂಸ್ಥಾನ ಗೌಡಪಾದಾಚಾರ್ಯ ಕೈವಲ್ಯ ಮಠಾದೀಶ ಶ್ರೀಮತ್ ಶಿವಾನಂದ ಸರಸ್ವತೀ ಸ್ವಾಮಿ ಮಹಾರಾಜ್ ಹೇಳಿದರು.
ಮಂಗಳವಾರ ಮುಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಅಕ್ಷರಲಕ್ಷ ಶ್ರೀ ನರಸಿಂಹ ಮಂತ್ರ ಯಜ್ಞ ಮತ್ತು ಸಪ್ತೋತ್ಸವದ ಪ್ರಯುಕ್ತ ದೇವಸ್ಥಾನಕ್ಕೆ ಭೇಟಿನೀಡಿ ಲಘು ಪೂರ್ಣಾಹುತಿಯಲ್ಲಿ ಬಾಗವಹಿಸಿ,ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಶ್ರೀದೇವರಲ್ಲಿ ಪ್ರೀತಿ ವಿಶ್ವಾಸದ ಜೊತೆಗೆ ಸ್ವಾರ್ಥರಹಿತ ಭಕ್ತಿ ಜೀವನಲ್ಲಿ ಉನ್ನತಿಗಳಿಸಲು ಸಹಕರಿಸುವುದು ಎಂದರು.
ವೇ.ಮೂ.ಪದ್ಮನಾಭ ಭಟ್ ಸ್ವಾಗತಿಸಿದರು.ಮೊಕ್ತೇಸರರಾದ ಯು.ವೇದವ್ಯಾಸ ಶೆಣೈ ಸ್ವಾಮೀಜಿಯವರನ್ನು ದೇವಳದ ವತಿಯಿಂದ ಗೌರವಿಸಿದರು. ದೇವಳದ ದರ್ಶನ ಪಾತ್ರಿ ಶ್ರೀ ವಸಂತ ನಾಯಕ್ ಫಲಿಮಾರ್ಕರ್, ದೇವಳದ ಮೊಕ್ತೇಸರರು,ಶ್ರೀ ವ್ಯಾಸ ಮಹರ್ಷಿ ವಿದ್ಯಾ ಪೀಠದ ಆಡಳಿತ ಮಂಡಳಿ ಸದಸ್ಯರು ಆರ್ಚಕ ವರ್ಗ ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು

Comments

comments

Leave a Reply

Read previous post:
ಸಮಾಜ ಸೇವಕಿ ಭಗಿನಿ ಅನಿತಾ ಫ್ರಾಂಕ್ ಸನ್ಮಾನ

ರೋಟರಾಕ್ಟ್ ಕ್ಲಬ್ ಕಿನ್ನಿಗೋಳಿ ಹಾಗೂ ಜೆ. ಸಿ. ಮುಂಡ್ಕೂರು ಭಾರ್ಗವ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಯುಗಪುರುಷ ಸಭಾಭವನದಲ್ಲಿ ಸಂಜೀವಿನಿ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಭಗಿನಿ ಅನಿತಾ ಫ್ರಾಂಕ್ ಇವರನ್ನು...

Close