ರಾಮಣ್ಣ ಶೆಟ್ಟಿ ಶಾಲೆ – ಕಲಾ ಶಿಬಿರದ ಸಮಾರೋಪ

ಕಿನ್ನಿಗೋಳಿ : ಮಕ್ಕಳಿಗೆ ಸ್ವಾವಲಂಬನೆಯ ಬದುಕನ್ನು ಕಟ್ಟಲು, ಶಿಕ್ಷಣದ ಜೊತೆ ಜೊತೆಗೆ ಜೀವನದ ಮೌಲ್ಯದ ನಿರ್ದಿಷ್ಟ ಗುರಿಯ ಸಾಧನೆಯ ಬಗ್ಗೆ ಪಠ್ಯೇತರ ಚಟುವಟಿಕೆಯನ್ನು ನಡೆಸುವ ಮೂಲಕ ಶಿಕ್ಷಣ ಸಂಸ್ಥೆಗಳು ಜಾಗೃತಿ ಮೂಡಿಸಬೇಕು ಇದು ಭವಿಷ್ಯದಲ್ಲಿ ಉತ್ತಮ ಸಮಾಜವನ್ನು ಕಟ್ಟಲು ನೆರವಾಗುತ್ತದೆ ಎಂದು ಕಿನ್ನಿಗೋಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ದೇವಪ್ರಸಾದ ಪುನರೂರು ಹೇಳಿದರು.

ಕಿನ್ನಿಗೋಳಿ ಬಳಿಯ ತೋಕೂರು ತಪೋವನದ ನಿಟ್ಟೆ ವಿದ್ಯಾ ಸಂಸ್ಥೆಯ ರಾಮಣ್ಣ ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಂಗಳವಾರ ಮುಕ್ತಾಯಗೊಂಡ ಸೃಜನಾತ್ಮಕ ಕಲಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕಳೆದ ಮಾರ್ಚ್ 28ರಂದು ಪ್ರಾರಂಭಗೊಂಡ ಈ ಶಿಬಿರವನ್ನು ಎಲ್ಲೂರು ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯಿನಿ ಶರಾವತಿ ರವಿರಾಜ್ ಉದ್ಘಾಟಿಸಿದ್ದರು.
ಕಿನ್ನಿಗೋಳಿಯ ಬಿ.ಸಿ.ರಾವ್. ಶಿವಪುರರವರಿಂದ ಹರಿಕಥೆ, ಸವಿತಾ ನಾಗರಾಜ್‌ರವರಿಂದ ಹಾಡುಗಾರಿಕೆ, ಸುಮಂಗಲಾರವರಿಂದ ನೃತ್ಯ ತರಬೇತಿ, ಮಂಗಳೂರಿನ ಸುಮ ಗೌಡ ಮತ್ತು ಸುಮತಿ ಶೆಣೈರವರಿಂದ ಕ್ರಾಫ್ಟ್ ತರಬೇತಿ, ಲಕ್ಷ್ಮಣ್ ಪಡುಬಿದ್ರಿರವರಿಂದ ಕಲಾತರಬೇತಿ, ದಾಮೋದರ ನಿಟ್ಟೆರವರಿಂದ ಕೈಚೀಲ ತಯಾರಿ, ಜಯ ಶೆಟ್ಟಿ ಕುಬೆವೂರುರವರಿಂದ ಯೋಗ, ಮಧ್ವರಾಜ್ ಸುವರ್ಣ ಪಡುಬಿದ್ರಿಯವರಿಂದ ಸ್ವ ಉದ್ಯೋಗ ತರಬೇತಿ, ವಿವೇಕ ಸಂಪದದಿಂದ ನಾಯಕತ್ವ ತರಬೇತಿ, ಸಂಪನ್ಮೂಲ ವ್ಯಕ್ತಿಗಳಾಗಿ ರಿತೇಶ್ ಭಾಗವಹಿಸಿದ್ದರು.
ಸಮಾರೋಪ ಸಮಾರಂಭದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಪ್ರತಿಭಾವಂತ ವಿದ್ಯಾರ್ಥಿಗಳನ್ನು ವಿಶೇಷವಾಗಿ ಗೌರವಿಸಲಾಯಿತು.
ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ರಾಜಾ ಪತ್ರಾವೋ ಅಧ್ಯಕ್ಷತೆಯನ್ನು ವಹಿಸಿ ರಜೆಯ ಸಮಯದಲ್ಲಿ ವಿದ್ಯಾರ್ಥಿಗಳು ತಮ್ಮ ಮನೆಯ ಸುತ್ತಮುತ್ತದ ಪರಿಸರವನ್ನು ಅಭಿವೃದ್ದಿ ಪಡಿಸುವ ಮೂಲಕ ಕಾರ್ಯೋನ್ಮುಕರಾಗಬೇಕು ಎಂದರು.
ಶಾಲಾ ಮುಖ್ಯೋಪಾಧ್ಯಾಯಿನಿ ಗೀತಾ ವೆಂಕಟರಮಣ, ಶಿಕ್ಷಕಿಯರಾದ ಸುಧಾ ಹೆಗ್ಡೆ, ಸುಜಾತ ಉಪಾಧ್ಯಾಯ, ಪುಷ್ಪಲತಾ ಭಾಸ್ಕರ ಏಳಿಂಜೆ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಶಿಬಾನಿ ಕಿನ್ನಿಗೋಳಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು, ವಿಜಿತಾ ವಂದಿಸಿದರು.

Comments

comments

Leave a Reply

Read previous post:
ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಮ್ಮಾಜೆ ಪ್ರವೇಶ ಪರೀಕ್ಷೆ

ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಮ್ಮಾಜೆ ಯಲ್ಲಿ 2012-13 ನೇ ಸಾಲಿಗೆ8, 9ನೇ ತರಗತಿ ಯಲ್ಲಿ ಖಾಲಿ ಇರುವ ಸೀಟುಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ವಿದ್ಯಾರ್ಥಿ ಗಳು...

Close