ಶ್ರೀ ವ್ಯಾಸಮಹರ್ಷಿ ಕೈವಲ್ಯ ಮಠಾದೀಶರ ಭೇಟಿ

Bhagyavan Sanil

ಮುಲ್ಕಿ: ವಿದ್ಯಾದಾನವು ದಾನಗಳಲ್ಲೇ ಅತೀ ಶ್ರೇಷ್ಠ ಮತ್ತು ಭಗವಂತನಿಗೆ ಪ್ರೀಯವೂ ಆಗಿದೆ ಎಂದು ಶ್ರೀ ಸಂಸ್ಥಾನ ಗೌಡಪಾದಾಚಾರ್ಯ ಕೈವಲ್ಯ ಮಠಾದೀಶ ಶ್ರೀಮತ್ ಶಿವಾನಂದ ಸರಸ್ವತೀ ಸ್ವಾಮಿ ಮಹಾರಾಜ್ ಹೇಳಿದರು.
ಮಂಗಳವಾರ ಶ್ರೀ ವ್ಯಾಸಮಹರ್ಷಿ ಸಂಸ್ಕೃತ ವೇದ ಪಾಠಶಾಲೆ ಲಕ್ಷ್ಮೀನಾರಾಯಣಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳನ್ನು ಆಶೀರ್ವಚಿಸಿದರು.
ಶೃದ್ಧಾ ಭಕ್ತಿ ಪೂರ್ವಕವಾಗಿ ಏಕಾಗ್ರತೆಯಿಂದ ಕಲಿತು ಬಳಿಕ ಇನ್ನೊಬ್ಬರಿಗೆ ಕಲಿಸುವ ಮೂಲಕ ನಾವು ಕಲಿತ ವಿದ್ಯೆ ವೃದ್ಧಿಸುವುದರೊಂದೆಗೆ ದೇವರ ಸಂಪೂರ್ಣ ಆಶೀವಾದ ಲಭಿಸುತ್ತದೆ ಎಂದರು
ಈ ಸಂದರ್ಭದೇವಳದ ದರ್ಶನ ಪಾತ್ರಿ ಶ್ರೀ ವಸಂತ ನಾಯಕ್ ಫಲಿಮಾರ್ಕರ್, ವೇದಪಾಠ ಶಾಲೆಯ ದಾನಿಗಳಾದ ವಿಶ್ವನಾಥ.ಎನ್.ಶೆಣೈ ದಂಪತಿಗಳು,ಸಂಚಾಲಕರಾದ ಧುವ ಕಾಮತ್,ವಿ.ಶಿವರಾಮ ಕಾಮತ್,ಎಂ.ನರಸಿಂಹ ನಾಯಕ್,ಯು.ವೇದವ್ಯಾಸ ಶೆಣೈ ಮತ್ತು ಆಡಳಿತ ಮಂಡಳಿ ಸದಸ್ಯರು ಹಾಗೂ ವೇದಪಾಠ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Comments

comments

Leave a Reply

Read previous post:
ಮುಲ್ಕಿ ಶ್ರೀ ವೆಂಕಟರಮಣ- ಶ್ರೀ ನರಸಿಂಹ ಮಂತ್ರ – ಆಶೀರ್ವಚನ

Photo By Bhagyavan Sanil ಸಾತ್ವಿಕ ಆಹಾರ ಧನಾತ್ಮಕ ಚಿಂತನೆ,ಪ್ರಾಮಾಣಿಕ ಭಕ್ತಿಯು ಜೀವನದಲ್ಲಿ ಸಕಲೈಶ್ವರ್ಯದೊಂದಿಗೆ ಆರೋಗ್ಯ ಭಾಗ್ಯವನ್ನು ನೀಡಬಲ್ಲದು ಎಂದು ಶ್ರೀ ಸಂಸ್ಥಾನ ಗೌಡಪಾದಾಚಾರ್ಯ ಕೈವಲ್ಯ ಮಠಾದೀಶ...

Close