ಅಕ್ಷರ ಲಕ್ಷ ಶ್ರೀ ನರಸಿಂಹ ಮಂತ್ರ ಯಜ್ಞ ಮತ್ತು ಸಪ್ತೋತ್ಸವ

Photos by Bhagyavan Sanil

ಮುಲ್ಕಿ: ನರಸಿಂಹ ದೇವರ ಆರಾಧನೆಯಿಂದ ಸಕಲ ಸಂಕಷ್ಟಗಳು ಪರಿಹಾರವಾಗಿ ಜೀವ ಭಯ ನಾಶವಾಗುವುದು ಎಂದು ಕಾಣಿಯೂರು ಮಠಾದೀಶ ಶ್ರೀಮತ್ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಹೇಳಿದರು. ಬುಧವಾರ ಮುಲ್ಕಿ ವಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಡೆಯುತ್ತಿರುವ ಅಕ್ಷರ ಲಕ್ಷ ಶ್ರೀ ನರಸಿಂಹ ಮಂತ್ರ ಯಜ್ಞ ಮತ್ತು ಸಪ್ತೋತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಸಂಪತ್ತಿನ ವ್ಯಾಮೋಹವು ಅನಾರೋಗ್ಯ ಮತ್ತು ಜೀವಭಯಕ್ಕೆ ಕಾರಣವಾಗಿದ್ದು, ಹಿರಣ್ಯಕಶಿಪುವಿನ ಹಾಗೆ ಸ್ವಾರ್ಥಿಯಾಗದೆ ಪ್ರಹಲ್ಲಾದನ ತರಹದ ಸ್ವಾರ್ಥರಹಿತ ಭಕ್ತಿಯಿಂದ ದೇವನನ್ನು ಒಲಿಸಿಕೊಂಡು ಶಾಂತಿಯ ಜೀವನ ನಮ್ಮದಾಗಿಸಬಹುದು ಎಂದರು.

ವೇ.ಮೂ. ಪದ್ಮನಾಭ ಭಟ್ ಸ್ವಾಗತಿಸಿದರು.ದೇವಳದ ವತಿಯಿಂದ ಸ್ವಾಮೀಜಿಯವರನ್ನು ಗೌರವಿಸಲಾಯಿತು. ಅರ್ಚಕವರ್ಗ,ಆಡಳಿತ ಮಂಡಳಿ ಸದಸ್ಯರು ಮತ್ತು ಭಕ್ತಾಧಿಗಳು ಉಪಸ್ಥಿತರಿದ್ದರು.

Comments

comments

Leave a Reply

Read previous post:
ಮುಡು ಕೊಟ್ರಪಾಡಿ ಕುಟುಂಬಿಕರ ನಾಗಮಂಡಲೋತ್ಸವ

ಕಿನ್ನಿಗೋಳಿ : ಮುಡುಕೊಟ್ರಪಾಡಿ ಕುಟುಂಬಿಕರ ನಾಗಬ್ರಹ್ಮಸ್ಥಾನದಲ್ಲಿ ಚತುಃಷ್ಟವಿತ್ರ, ನಾಗಬ್ರಹ್ಮಮಂಡಲ ಸೇವೆ ಎಪ್ರಿಲ್  19 ರಂದು ನಡೆಯಲಿದೆ. ಶಿಬರೂರು ಬ್ರಹ್ಮಶ್ರೀ ಹಯಗ್ರೀವ ತಂತ್ರಿಗಳ ಮಾರ್ಗದರ್ಶನದಲ್ಲಿ ಪಂಜ ಭಾಸ್ಕರ ಭಟ್, ಪೊಸ್ರಾಲ್...

Close