ಎಪ್ರಿಲ್ 13 ರಿಂದ ಕಟೀಲು ಜಾತ್ರೆ

ಕಟೀಲು: ಇತಿಹಾಸ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವರ್ಷಾವಧಿ ಉತ್ಸವ ಎಪ್ರಿಲ್  13 ರಿಂದ ನಡೆಯಲಿದೆ. ಎಪ್ರಿಲ್ 12 ರಂದು ರಾತ್ರಿ ಅಂಕುರಾರೋಹನ, 13 ರಂದು ಮಧ್ಯಾಹ್ನ ದ್ವಜಾರೋಹಣ, 14 ರಂದು ಉತ್ಸವ ಬಲಿ, 15 ರಂದು ಉತ್ಸವ ಬಲಿ ಮೂಡುಸವಾರಿ, 16 ರಂದು ಉತ್ಸವ ಬಲಿ, 17 ರಂದು ಉತ್ಸವ ಬಲಿ ಬೆಳ್ಳಿ ರಥೋತ್ಸವ, 18 ರಂದು ಉತ್ಸವ ಬಲಿ ಪಡು ಸವಾರಿ, 19 ರಂದು ಹಗಲು ರಥೋತ್ಸವ, ರಾತ್ರಿ ಉತ್ಸವ ಬಲಿ, ಶಯನ ಪೂಜೆ, 20 ರಂದು ಬೆಳಿಗ್ಗೆ ಕವಾಟೋದ್ಘಾಟನೆ, ರಾತ್ರಿ ಅವಭ್ರತೋತ್ಸವ (ಆರಟ) ನಡೆಯಲಿದೆ. ಪ್ರತಿ ದಿನ ಸಂಜೆ 5.30 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು ಭಕ್ತರು www.kateeldevi.in  ಮೂಲಕ ಆನ್ ಲೈನ್ ಸೇವಾ ಬುಕ್ಕಿಂಗ್ ವ್ಯವಸ್ಥೆ ಬಳಸ ಬಹುದಾಗಿದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.

Comments

comments

Leave a Reply

Read previous post:
ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ಶಯನೋತ್ಸವ

Photos by Prakash M Suvarna ಮುಲ್ಕಿ : ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರೆಯ ಅಂಗವಾಗಿ ರಾತ್ರಿ ಬುಧವಾರ ನಡೆದ ಶಯನೋತ್ಸವ

Close