ಮುಡು ಕೊಟ್ರಪಾಡಿ ಕುಟುಂಬಿಕರ ನಾಗಮಂಡಲೋತ್ಸವ

ಕಿನ್ನಿಗೋಳಿ : ಮುಡುಕೊಟ್ರಪಾಡಿ ಕುಟುಂಬಿಕರ ನಾಗಬ್ರಹ್ಮಸ್ಥಾನದಲ್ಲಿ ಚತುಃಷ್ಟವಿತ್ರ, ನಾಗಬ್ರಹ್ಮಮಂಡಲ ಸೇವೆ ಎಪ್ರಿಲ್  19 ರಂದು ನಡೆಯಲಿದೆ. ಶಿಬರೂರು ಬ್ರಹ್ಮಶ್ರೀ ಹಯಗ್ರೀವ ತಂತ್ರಿಗಳ ಮಾರ್ಗದರ್ಶನದಲ್ಲಿ ಪಂಜ ಭಾಸ್ಕರ ಭಟ್, ಪೊಸ್ರಾಲ್ ಪುರುಷೋತಮ ಭಟ್ರ ನೇತೃತ್ವದಲ್ಲಿ ನಾಗಪಾತ್ರಿ ಸಗ್ರಿ ಗೋಪಾಲ ಕೃಷ್ಣ ಸಾಮಗರು, ಮದ್ದೂರು ಕೃಷ್ಣಪ್ರಸಾದ್ ವೈದ್ಯರ ಬಳಗದ ಸಹಬಾಗೀತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ. ಎಪ್ರಿಲ್ 16 ರಂದು ಬೆಳಿಗ್ಗೆ 9 ರಿಂದ ಆದ್ಯಗಣಯಾಗ, ನವಗ್ರಹ ಹೋಮ, ಮಹಾಪೂಜೆ, ಬೆಳಿಗ್ಗೆ 10 ರಿಂದ ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಮಹಾಪೂಜೆ, ಸಂಜೆ 5 ರಿಂದ ಪುಣ್ಯಾಹ, ಸಪ್ತ ಶುದ್ದಿ, ಪ್ರಾಸಾದ ಶುದ್ಧಿ, ರಾಕ್ಷೆಘ್ನ ಹೋಮ, ವಾಸ್ತು ಪೂಜೆ, ವಾಸ್ತು ಬಲಿ, ವಾಸ್ತು ಹೋಮ, ದಿಗ್ಬಲಿ ನಡೆಯಲಿದೆ.  17 ರಂದು ಏಕಾದಶಿ, 18 ರಂದು ಬೆಳಿಗ್ಗೆ ಪವಮಾನ ಹೋಮ, ತಿಲಹೋಮ, ಕೂಷ್ಮಾಂಡ ಹೋಮ, ವಿಷ್ಣುಮುರ್ತಿ ದೇವರಿಗೆ ಕಲಶಾಭಿಶೇಕ, ಮಹಾಪೂಜೆ, ಮೃತ್ಯುಂಜಯ ಪೂಜೆ, ಆಶ್ಲೇಷಾ ಬಲಿ, ಸಂಜೆ ಪರಿವಾರ ಶಕ್ತಿಗಳಿಗೆ ಸಾನಿಧ್ಯ ಕಲಶಾಭಿಶೇಕ, ಶ್ರೀ ದೂಮಾವತಿ ಪರಿವಾರ ದೈವಗಳಿಗೆ ಕಲಶಾಭಿಶೇಕ, ಪ್ರಸನ್ನ ಪೂಜೆ, ವಿಷ್ಣುಮೂರ್ತಿ ದೇವರಿಗೆ ರಂಗಪೂಜೆ, ಶ್ರೀ ನಾಗಬ್ರಹ್ಮ ಮಂಡಲ ಮಂಟಪದಲ್ಲಿ ವಾಸ್ತುವಿಧಿ, 19 ರಂದು ಬೆಳಿಗ್ಗೆ 8 ರಿಂದ ನಾಗದೇವರಿಗೆ ಮತ್ತು ಬ್ರಹ್ಮಲಿಂಗೇಶ್ವರ ದೇವರಿಗೆ ದ್ರವ್ಯಕಲಶಾಭಿಶೇಕ, ಆಶ್ಲೇಷ ಬಲಿ, ಪ್ರಸನ್ನ ಪೂಜೆ, ಪಲ್ಲಪೂಜೆ, ವಟುಬ್ರಾಹ್ಮಣ ಸುವಾಸಿನಿ ಸಮಾರಾಧನೆ, ಸಾರ್ವಜನಿಕ ಅನ್ನ ಸಂತರ್ಪಣೆ, ಸಂಜೆ 8 ರಿಂದ ಧಾರ್ಮಿಕ ಸಭೆ, ಸತ್ಯನಾಪುರತ ಸಿರಿ ನೃತ್ಯ ರೂಪಕ, ರಾತ್ರಿ 10 ರಿಂದ ಹಾಲಿಟ್ಟು ಸೇವೆ, ನಾಗಬ್ರಹ್ಮ ಮಂಡಲ ಸೇವೆ, ಪ್ರಸಾದ ವಿತರಣೆ, 20 ರಂದು ಸಂಪ್ರೋಕ್ಷಣೆ ಮಂತ್ರಾಕ್ಷತೆ ನಡೆಯಲಿದೆ. 21 ರಿಂದ 23 ರ ವರೆಗೆ ಮುಡುಕೊಟ್ರಪಾಡಿ ಶ್ರೀ ಲಕ್ಷ್ಮೀಜನಾರ್ದನ ದೇವರ ಮತ್ತು ಶ್ರೀ ಬ್ರಹ್ಮಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ವಾರ್ಷಿಕ ಮಹೋತ್ಸವ ನಡೆಯಲಿದೆ ಎಂದು ಮುಡುಕೊಟ್ರಪಾಡಿ ಕುಟುಂಬಿಕರ ಪ್ರಕಟಣೆ ತಿಳಿಸಿದೆ.

Comments

comments

Leave a Reply

Read previous post:
ಎಪ್ರಿಲ್ 13 ರಿಂದ ಕಟೀಲು ಜಾತ್ರೆ

ಕಟೀಲು: ಇತಿಹಾಸ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವರ್ಷಾವಧಿ ಉತ್ಸವ ಎಪ್ರಿಲ್  13 ರಿಂದ ನಡೆಯಲಿದೆ. ಎಪ್ರಿಲ್ 12 ರಂದು ರಾತ್ರಿ ಅಂಕುರಾರೋಹನ, 13 ರಂದು ಮಧ್ಯಾಹ್ನ...

Close