ಕಿನ್ನಿಗೋಳಿಯಲ್ಲಿ ಹೊಲಿಗೆ ಯಂತ್ರ ವಿತರಣೆ

ಕಿನ್ನಿಗೋಳಿ : ಮಂಗಳೂರಿನ ದ.ಕ.ಜಿ.ಪಂ ನ ಕೈಮಗ್ಗ ಮತ್ತು ಜವಳಿ ಇಲಾಖೆ ಹಾಗೂ ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆಯ ಸಹಾಯೋಗದೊಂದಿಗೆ ಮುಲನಿವಾಸಿ ಕೊರಗ ಜನಾಂಗದ ವಿಶೇಷ ಅಭಿವೃದ್ಧಿ ಕಾರ್ಯಕ್ರಮದ ಅನುದಾನದಲ್ಲಿ ಸ್ವಯಂ ಉದ್ಯೋಗಕ್ಕಾಗಿ ತರಬೇತಿ ಪಡೆದ ಫಲಾನುಭವಿಗಳಿಗೆ ಉಚಿತ ಸಿದ್ಧಉಡುಪು ತಯಾರಿಕಾ ಯಂತ್ರಗಳ ವಿತರಣೆ ಗುರುವಾರ ನೇಕಾರ ಸಭಾಗ್ರಹದಲ್ಲಿ ನಡೆಯಿತು. ಶಾಸಕ ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಉದ್ಘಾಟಿಸಿದರು, ಜಿ.ಪಂ. ಸದಸ್ಯೆ ಆಶಾ ಆರ್. ಸುವರ್ಣ, ತಾ.ಪಂ ಸದಸ್ಯ ರಾಜು ಕುಂದರ್, ಪಂಚಾಯತ್ ಅಧ್ಯಕ್ಷ ದೇವಪ್ರಸಾದ್ ಪುನರೂರು, ಚಂದ್ರಹಾಸ ಶೆಟ್ಟಿಗಾರ್, ಮಾದವ ಶೆಟ್ಟಿಗಾರ್ ಉಪಸ್ಥಿತರಿದ್ದರು. ಕಿನ್ನಿಗೋಳಿಯ 15 , ಬಜೆಪೆಯ 15 , ಫಲಾನುಭವಿಗಳಿಗೆ ಹೊಲಿಗೆ ಯಂತ್ರ ನೀಡಲಾಯಿತು. ಯೋಜನೆಯ ಸಮಾನ್ವಯ ಅಧಿಕಾರಿ ಶಿವಾರಾಮಯ್ಯ ಪ್ರಸ್ತಾವಿಸಿ ಕೈಮಗ್ಗ ಮತ್ತು ಜವಳಿ ಇಲಾಖೆಯ ನಿರ್ದೇಶಕ ಯೋಗೀಶ್ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಮುಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ವಾರ್ಷಿಕ ರಥೋತ್ಸವ

Photos By Bhagyavan Sanil ಮುಲ್ಕಿ ಇತಿಹಾಸ ಪ್ರಸಿದ್ದ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ರಥೋತ್ಸವದ ದೃಶ್ಯ

Close