ಅರುಣ್ ಸೋಹಾನ್ ಸ್ಮಾರಕ ಮುಕ್ತ ವಾಲಿಬಾಲ್ ಕ್ರೀಡಾಕೂಟ

ಕಿನ್ನಿಗೋಳಿ ಚರ್ಚ್ ಪ್ರೆಂಡ್ಸ್ ಆಯೋಜಿಸಿರುವ ಎರಡನೇ ವರ್ಷದ ಅರುಣ್ ಮತ್ತು ಸೋಹಾನ್ ಸ್ಮಾರಕ ಹೊನಲು ಬೆಳಕಿನ ಮುಕ್ತ ವಾಲಿಬಾಲ್ ಕ್ರೀಡಾಕೂಟ ಕಿನ್ನಿಗೋಳಿ ಲಿಟ್ಲ್ ಪ್ಲವರ್ ಹೈಸ್ಕೂಲ್ ಕ್ರೀಡಾಂಗಣದಲ್ಲಿ ನಡೆಯಿತು.
ಕಿನ್ನಿಗೋಳಿ ಸಿಂಡಿಕೇಟ್ ಬ್ಯಾಂಕ್ ಶಾಖಾ ಪ್ರಬಂಧಕ ಹಾಗೂ ಹೆಸರಾಂತ ಕ್ರಿಕೆಟಿಗ ಮಂಜುನಾಥ ಮಲ್ಯ ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ಸಂಧರ್ಭ ಕರಾಟೆ ತರಬೇತುದಾರ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸದಸ್ಯ ಈಶ್ವರ್ ಕಟೀಲು ಅವರನ್ನು ಕಿನ್ನಿಗೋಳಿ ಚರ್ಚ್ ಪ್ರೆಂಡ್ಸ್ ಗೆಳೆಯರು ಸನ್ಮಾನಿಸಿದರು.
ಕಿನ್ನಿಗೋಳಿ ಲಿಟ್ಲ್ ಪ್ಲವರ್ ಪಿ.ಯು. ಕಾಲೇಜಿನ ಪ್ರಾಚಾರ್ಯೆ ಸಿಸ್ಟರ್ ಭಗಿನಿ ದೇವಿನಾ ಬಿ.ಎಸ್., ಕಿನ್ನಿಗೋಳಿ ಗ್ರಾಮ ಪಂಚಾಯತ್ ಅಧ್ಯಕ್ಷ ದೇವಪ್ರಸಾದ್ ಪುನರೂರು ಹಾಗೂ ಈಶ್ವರ್ ಕಟೀಲು ಬೆಲೂನು ಹಾರಿಸುವ ಮೂಲಕ ಕ್ರೀಡಾಂಗಣದ ಉದ್ಘಾಟನೆ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮಂಜುನಾಥ ಮಲ್ಯ ಬಾಲನ್ನು ತಟ್ಟಿ ಪಂದ್ಯಕ್ಕೆ ಚಾಲನೆಯನ್ನು ಕೊಟ್ಟರು.
ಡಿ.ವೈ.ಎಫ್. ಮುಖಂಡ ಸುನಿಲ್ ಕುಮಾರ್ ಬಜಾಲ್, ವಾಲಿಬಾಲ್ ತರಬೇತುದಾರ ಅಂಪೈರ್ ನಾಗೇಶ್, ದಿ| ಅರುಣ್ ತಂದೆ ಜೆ.ಕೆ.ಪೆರ್ನಾಂಡಿಸ್, ದಿ| ಸೋಹಾನ್ ಸಹೋದರ ನಿಶಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಿಯಾ ರೇಗೊ ಸ್ವಾಗತಿಸಿದರು. ಶಾನ್ ರೆಬೆಲ್ಲೊ ಧನ್ಯವಾದವನ್ನಿತ್ತರು. ಐವಾನ್ ದಾಂತಿಸ್ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
121 ನೇ ಅಂಬೇಡ್ಕರ್ ಜಯಂತಿ

ಕಿನ್ನಿಗೋಳಿ:  ಮೊರಾರ್ಜಿ ದೇಸಾಯಿ ಶಾಲೆ ಕಮ್ಮಾಜೆಯಲ್ಲಿ ಅಂಬೇಡ್ಕರ್ ರವರ 121ನೇ ಜಯಂತಿಯನ್ನು ಆಚರಿಸಲಾಯಿತು. ಚಂದ್ರಶೇಖರ. ಬಿ. ಶಾಲಾ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ "ಅಂಬೇಡ್ಕರ್ ರವರ ಬಾಲ್ಯಜೀವನ, ಸಾಧನೆ, ವ್ಯಕ್ತಿತ್ವಗಳ ಕುರಿತು...

Close