ಕಟೀಲಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು

Mithuna Kodethoor

ಕಟೀಲು : ಕಟೀಲು ಶ್ರೀ ಭ್ರಾಮರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ಉತ್ಸವದ ಪ್ರಯುಕ್ತ ದಿನಂಪ್ರತಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ತಾ.14ರಂದು ಶ್ರೀನಿವಾಸ ಆಚಾರ್ಯ ಬಳಗ ತೋಕೂರು, ಹಳೆಂಯಗಡಿ ಇವರಿಂದ ಭಜನೆ, ಸಂಜೆ ತಾಳಮದ್ದಲೆ ’ರಾವಣಾಂತರಂಗ’ ಯಕ್ಷ ಸಿಂಧೂರ, ಮಹಿಳಾ ಯಕ್ಷಗಾನ ಕೂಟ, ತಲಪಾಡಿ ಇವರಿಂದ. ತಾ. 15 ಶ್ರೀ ವಾಗ್ದೇವಿ ಭಜನಾ ಮಂಡಳಿ ಕಿನ್ನಿಗೋಳಿಯವರಿಂದ ಭಜನೆ ಸಂಜೆ, ಕು| ದೀಕ್ಷಾ. ಕೆ. ಕೊಟ್ಟಾರ ಇವರಿಂದ ಭರತನಾಟ್ಯ, ತಾ. 16ಕ್ಕೆ ಭಜನೆ ಸಂಗೀತ ಶಾಲೆ, ಕಿನ್ನಿಗೋಳಿ ಮಕ್ಕಳಿಂದ, ಸಂಜೆ ’ಭರತನಾಟ್ಯ’ ಶ್ರೀ ಗುರುದೇವ ಲಲಿತಾ ಕಲಾ ಅಕಾಡೆಮಿ, ಮಂಡ್ಯದವರಿಂದ. ತಾ. 17ಸಂಜೆ ಬೆಳ್ಳಿ ರಥೋತ್ಸವ ಬೆಳಿಗ್ಗೆ ಶ್ರೀ ಭ್ರಾಮರೀ ಮಹಿಳಾ ಭಜನಾ ಮಂಡಳಿಯವರಿಂದ ಭಜನೆ, ಸಂಜೆ ’ರಸಮಂಜರಿ’ ಕರಾವಳಿ ಮೆಲೋಡೀಸ್ ಮಂಗಳೂರು ಇವರಿಂದ ನಡೆಯಲಿದೆ. ತಾ.18ಕ್ಕೆ ಶ್ರೀ ದೇವಿ ಭಜನಾ ಮಂಡಳಿ ಕಟೀಲು ಇವರಿಂದ ಭಜನೆ, ಸಂಜೆ ’ನೃತ್ಯ ಕಾರ್ಯಕ್ರಮ’ ಡ್ಯಾನ್ಸಿಂಗ್ ಸ್ಟಾರ‍್ಸ್ ಅತ್ತಾವರದವರಿಂದ ಇದೆ. ತಾ. 19ರಂದು ಹಗಲು ರಥೋತ್ಸವ ಬೆಳಿಗ್ಗೆ ಭಜನೆ ಬಾಲಗೋಪಾಲ ತಂಡದಿಂದ, ಸಂಜೆ ’ಯಕ್ಷಗಾನ ಪ್ರದರ್ಶನ’ ಶ್ರೀ ದುರ್ಗಾ ಮಕ್ಕಳ ಮೇಳ ಕಟೀಲು ’ಶಿವಭಕ್ತ ವೀರಮಣಿ’ ಪ್ರದರ್ಶನಗೊಳ್ಳಲಿದೆ. ತಾ. 20ರಂದು ದಿನ ಆರಟ ಬೆಳಿಗ್ಗೆ ಭಕ್ತಿ ಗಾಯನ-ಗಜಲ್ ವೈಶಾಲಿ ಪಾಟೀಲ ಮತ್ತು ಬಳಗದವರಿಂದ ಸಂಜೆ 7.30ರಿಂದ ’ಲೇಸರ್ ಶೋ’ ವಿಜಯಾ ಬ್ಯಾಂಕಿನ  ಪ್ರಾಯೋಜಕತ್ವದಲ್ಲಿ ನಡೆಯಲಿದೆ. ರಾತ್ರಿ 8.00ರಿಂದ ’ಭೀಷ್ಮನ ಕಡೆತ ದಿನೊಕುಲು’ ನಾಟಕ ಸುಮನಸಾ ಸಾಂಸ್ಕೃತಿಕ ಸೇವಾ ಸಂಘಟನೆ ಕೊಡವೂರು ಇವರಿಂದ ಪ್ರದರ್ಶನಗೊಳ್ಳಲಿದೆ. ರಾತ್ರಿ 10.00ರಿಂದ ತತ್ವಪದ-ಜಾನಪದ ಮಾರಪ್ಪ ಮಾರಪ್ಪ ಚೆನ್ನದಾಸರ ಕೊಪ್ಪಳ ಇವರಿಂದ ಕನ್ನಡ ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ಜರಗಲಿದೆ.

 

Comments

comments

Leave a Reply

Read previous post:
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ – ದ್ವಜಾರೋಹಣ

ಕಟೀಲು: ಇತಿಹಾಸ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವರ್ಷಾವಧಿ ಉತ್ಸವದ  ದ್ವಜಾರೋಹಣ ಇಂದು ನಡೆಯಿತು

Close