ಕಿನ್ನಿಗೋಳಿಯಲ್ಲಿ ವಿಶ್ವಕರ್ಮ ಉಚಿತ ಸಾಮೂಹಿಕ ಉಪನಯನ

ಕಿನ್ನಿಗೋಳಿ :ಕಿನ್ನಿಗೋಳಿ ರಾಜರತ್ನಪುರದ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ ಮತ್ತು ಶ್ರೀ ಕಾಳಿಕಾಂಬ ಮಹಿಳಾ ವೃಂದದ ಜಂಟಿ ಆಶ್ರಯದಲ್ಲಿ ಉಚಿತ ಸಾಮೂಹಿಕ ಉಪನಯನ ಸರಾಫ್ ಅಣ್ಣಯ್ಯಾಚಾರ್ಯ ಸಭಾಭವನದಲ್ಲಿ ನಡೆಯಿತು.
ಆನೆಗುಂದಿ ಸಂಸ್ಥಾನದ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾ ಸ್ವಾಮೀಜಿ ಆಶೀರ್ವಚನ ನೀಡಿದರು. ಮಂಗಳೂರು ಶ್ರೀ ಗುರುಮಠದ ಪುರೋಹಿತ್ ಕೆ. ದಾಮೋದರ ಆಚಾರ್ಯರ ಪ್ರಧಾನ ಅರ್ಚಕತ್ವದಲ್ಲಿ ಸುಮಾರು 13 ವಟುಗಳಿಗೆ ಉಪನಯನ ಸಂಸ್ಕಾರ ನಡೆಯಿತು. ಉಚಿತ ಸಾಮೂಹಿಕ ವಿವಾಹದ ಪ್ರಾಯೋಜಕತ್ವವನ್ನು ವಹಿಸಿದ ಅನುಗ್ರಹ ಜ್ಯುವೆಲ್ಲರ್ಸ್ ನ ಮಾಲಕರಾದ ಪ್ರಥ್ವಿರಾಜ್ ದಂಪತಿಯನ್ನು ವಿಶ್ವಬ್ರಾಹ್ಮಣ ಸಮಾಜ ಬಾಂಧವರ ಪರವಾಗಿ ಸ್ವಾಮೀಜಿಯವರು ಸನ್ಮಾನಿಸಿದರು.

Comments

comments

Leave a Reply

Read previous post:
ಪದ್ಮನೂರು ಶಾಲೆ ವಾರ್ಷಿಕೋತ್ಸವ

ಸರ್ವತೋಮುಖ ಬೆಳವಣಿಗೆಗೆ ಉತ್ತಮ ಶಿಕ್ಷಣ ಕಾರಣ ಎಂದು ಮುಲ್ಕಿ ಮುಡಬಿದಿರೆ ಶಾಸಕ ಅಭಯಚಂದ್ರ ಜೈನ್ ಹೇಳಿದರು. ಅವರು ಪದ್ಮನೂರು ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ...

Close