ಪದ್ಮನೂರು ಶಾಲೆ ವಾರ್ಷಿಕೋತ್ಸವ

ಸರ್ವತೋಮುಖ ಬೆಳವಣಿಗೆಗೆ ಉತ್ತಮ ಶಿಕ್ಷಣ ಕಾರಣ ಎಂದು ಮುಲ್ಕಿ ಮುಡಬಿದಿರೆ ಶಾಸಕ ಅಭಯಚಂದ್ರ ಜೈನ್ ಹೇಳಿದರು. ಅವರು ಪದ್ಮನೂರು ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಿನ್ನಿಗೋಳಿ ಗ್ರಾಮ ಪಂಚಾಯತ್ ಅಧ್ಯಕ್ಷ ದೇವಪ್ರಸಾದ್ ಪುನರೂರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಸದಸ್ಯೆ ಆಶಾ ಸುವರ್ಣ ಬಹುಮಾನ ವಿತರಿಸಿದರು. ತಾಲೂಕು ಪಂಚಾಯತ್ ಸದಸ್ಯ ರಾಜು ಕುಂದರ್, ಗ್ರಾಮ ಪಂಚಾಯತ್ ಸದಸ್ಯ ಆನಂದ ಗೌಡ, ಶಿಕ್ಷಣ ಇಲಾಖೆಯ ದಿನೇಶ್ ಕೆ., ಮುಂಡ್ಕೂರು ಕಾಲೇಜಿನ ನಿವೃತ್ತ ಪ್ರಾಚಾರ್ಯ ಉದಯಕುಮಾರ್ ಹಬ್ಬು ಪದ್ಮನೂರು ಬಯಲಾಟ ಸಮಿತಿಯ ಅಧ್ಯಕ್ಷ ದುರ್ಗಾಪ್ರಸಾದ್, ಗುತ್ತಿಗೆದಾರ ವಿಶ್ವನಾಥ ಶೆಟ್ಟಿ, ಶಾಲಾ ಸಮಿತಿಯ ಅಧ್ಯಕ್ಷ ರಾಜೇಂದ್ರ ಮತ್ತಿತರಿರರು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಗಿರಿಜಾ ಬಿ. ವಾರ್ಷಿಕ ವರದಿ ನೀಡಿದರು.

Comments

comments

Leave a Reply

Read previous post:
ಮುಂಡ್ಕೂರಿನಲ್ಲಿ ಉಚಿತ ಸಾಮೂಹಿಕ ವಿವಾಹ

Photos by Sharath Shetty ಮುಂಡ್ಕೂರು: ಮುಂಡ್ಕೂರು ಮುಲ್ಲಡ್ಕದ ಗುರುಪ್ರಸಾದ್ ಚಾರಿಟೇಬಲ್ ಟ್ರಸ್ಟ್‌ನ ನೇತೃತ್ವದಲ್ಲಿ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರೀ ದೇವಳದ ಸಹಕಾರದಿಂದ ಏಳನೇ ವರ್ಷದ ಉಚಿತ ಸಾಮೂಹಿಕ...

Close