ಮುಂಡ್ಕೂರಿನಲ್ಲಿ ಉಚಿತ ಸಾಮೂಹಿಕ ವಿವಾಹ

Photos by Sharath Shetty

ಮುಂಡ್ಕೂರು: ಮುಂಡ್ಕೂರು ಮುಲ್ಲಡ್ಕದ ಗುರುಪ್ರಸಾದ್ ಚಾರಿಟೇಬಲ್ ಟ್ರಸ್ಟ್‌ನ ನೇತೃತ್ವದಲ್ಲಿ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರೀ ದೇವಳದ ಸಹಕಾರದಿಂದ ಏಳನೇ ವರ್ಷದ ಉಚಿತ ಸಾಮೂಹಿಕ ವಿವಾಹ ರವಿವಾರ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ನಡೆಯಿತು. ಟ್ರಸ್ಟ್‌ನ ವಿಶ್ವಸ್ಥ ಮುಲ್ಲಡ್ಕ ಗುರುಪ್ರಸಾದ್ ರಾಘು ಟಿ. ಶೆಟ್ಟಿ ಹಾಗೂ ನಳಿನಿ ರಾಘು ಶೆಟ್ಟಿ, ರೋಹಿತ್ ರಾಘು ಶೆಟ್ಟಿ, ರಂಜನ್ ರಾಘು ಶೆಟ್ಟಿಯವರ ನೇತೃತ್ವದಲ್ಲಿ ದೇವಳದ ಪ್ರದಾನ ಅರ್ಚಕ ಜಯರಾಮ ಆಚಾರ್ಯರ ಆಶೀರ್ವಚನದಲ್ಲಿ ೧೮ ಜೋಡಿಗಳಿಗೆ ಕಂಕಣ ಭಾಗಯ ಕಲ್ಪಿಸಲಾಯಿತು. ಸಾಯಿನಾಥ ಶೆಟ್ಟಿಯವರು ಸಂಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಘವೇಂದ್ರ ಆಚಾರ್ಯ, ಅನಂತಕೃಷ್ಣ ಆಚಾರ್ಯ ರಾಮದಾಸ ಆಚಾರ್ಯ, ಮಧ್ವಪತಿ ಆಚಾರ್ಯ ಪೌರೋಹಿತ್ಯ ನೆರವೇರಿಸಿದರು. ಮುಂಬೈನ ಉದ್ಯಮಿ ವಿರಾರ್ ಶಂಕರ ಶೆಟ್ಟಿ ಮುಖ್ಯ ಅತಿಥಿಯಾಗಿದ್ದರು. ಸುಧಾಕರ ಶೆಟ್ಟಿ, ಸುಜಾತ ಸುಧಾಕರ ಶೆಟ್ಟಿ ಬಳಕುಂಜೆ ಗುತ್ತು ಗೋಪಾಲ ಶೆಟ್ಟಿ, ಎಂ.ಜಿ. ಕರ್ಕೆರಾ, ರವಿ ಶೆಟ್ಟಿ ಸುಲಕ್ಷಣ ಆರ್. ಶೆಟ್ಟಿ, ವಿನಯ್ ಕುಮಾರ್ ಶೆಟ್ಟಿ, ಸುರೇಂದ್ರ ಶೆಟ್ಟಿ, ಎಂ.ಡಿ. ಸಪಳಿಗ, ಬಾಸ್ಕರ ಶೆಟ್ಟಿ, ರಘುವೀರ್ ಶೆಣೈ, ಅಶೋಕ್ ಶೆಟ್ಟಿ, ವಿಶ್ವನಾಥ ಶೆಟ್ಟಿ, ತಾಲೂಕು ಕಛೇರಿಯ ಮಾಧವ ನಾಯಕ್, ಸೋಮಶೇಖರ ಶೆಟ್ಟಿ, ಇನ್ನ ಶೇಖರ ಶೆಟ್ಟಿ, ಗಣೇಶ್ ರಾವ್, ಗುರುದತ್ ಪೂಂಜಾ, ಶಕಿಲ ವಿನಯಕುಮಾರ್, ಸುನಂದ, ಮಂಜುಳಾ ಅಶೋಕ್ ಶೆಟ್ಟಿ ಪೂರ್ಣಿಮಾ ಸಾಯಿನಾಥ್ ಶೆಟ್ಟಿ ಮತ್ತಿತರಿದ್ದರು.

ಹಸೆಮಣೆಯೇರಿದವರು
ಗುಲಾಬಿ -ಪೂವಪ್ಪ, ಶೋಭಾ -ನರೇಶ್, ಶಾಂತಾ-ಸುರೇಶ್, ಸುಗುಣ-ಸುಂದರ, ರೇಖಾ- ನಾಗರಾಜ, ಪ್ರತಿಮಾ-ಅನಿಲ್, ಉಷಾ-ಸುಕುಮಾರ್, ಸುಚಿತ್ರ-ಬೋಜ, ಸುಮಾ-ಗಣೇಶ್, ಸುಮಿತ್ರ-ಉಮೇಶ್, ಸುನಿತಾ- ಹರೀಶ್, ಸವಿತಾ- ಲೋಕೇಶ್, ಕವಿತಾ- ರಾಘವೇಂದ್ರ, ಸುಮತಿ-ವಸಂತ, ಸರೋಜಿನಿ-ಬಾಬು, ರಾಜೇಶ್-ಗೋಪಿ, ಗೀತಾ-ಓಬಯ್ಯ

Comments

comments

Leave a Reply

Read previous post:
ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ

ಕಟೀಲು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ರೋಟರಿ ಅಧ್ಯಕ್ಷ ಜಯರಾಮ ಪೂಂಜಾ ಚಾಲನೆ ನೀಧಿದರು. ವೈದ್ಯಾಧಿಕಾರಿ ಡಾ| ಚಂದ್ರಪ್ರಭಾ, ಕೆ. ಬಾಲಕೃಷ್ಣ ಶೆಟ್ಟಿ,...

Close