ಆಧ್ಯಾತ್ಮಕತೆಯಲ್ಲಿ ಸೈದ್ದಾಂತಿಕ ನಿಲುವು ಅಗತ್ಯ

Photos by Narendra Kerekadu & Prakash M Suvarna

ಮುಲ್ಕಿ: ಧಾರ್ಮಿಕ ಭಾವನೆಯನ್ನು ಪ್ರಪಂಚದಲ್ಲಿ ವಿಭಿನ್ನವಾಗಿ ಶ್ರದ್ಧೆ ಭಕ್ತಿಯಲ್ಲಿ ಆಚರಿಸುವ ಪದ್ಧತಿಯನ್ನು ನಾವು ಕಂಡಿದ್ದು ಭಾರತೀಯತೆಯಲ್ಲಿ ಇರುವ ಆಚಾರ ವಿಚಾರಗಳಿಗೆ ವಿಶೇಷ ಅರ್ಥವಿದ್ದು ಆಧ್ಯಾತ್ಮಕತೆಯಲ್ಲಿ ಸೈದ್ಧಾಂತಿಕ ನಿಲುವನ್ನು ಕಾಣುವುದರಿಂದ ಭಕ್ತಿ ಭಾವನೆಗಳು ಹೆಚ್ಚಾಗಿದೆ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಹೇಳಿದರು.
ಮುಲ್ಕಿಯ ಚಂದ್ರಶೇಖರ ಸ್ವಾಮೀಜಿಯ ಆಶ್ರಮದಲ್ಲಿ ಸೋಮವಾರ ನಡೆದ ಮಹಾವಿಷ್ಣುಯಾಗದ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಅಧ್ಯಕ್ಷತೆಯನ್ನು ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ವಹಿಸಿದ್ದರು. ಜ್ಯೋತಿಷಿಗಳಾದ ಕಿಲ್ಪಾಡಿ ಗೋವಿಂದ ಭಟ್, ಶಾರದಮ್ಮ ದಂಪತಿಗಳನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಆಶ್ರಮದ ಚಂದ್ರಶೇಖರ ಸ್ವಾಮೀಜಿ, ಉಪಸಭಾಪತಿ ಯೋಗೀಶ್ ಭಟ್, ಪತ್ರಕರ್ತ ವಿಶ್ವೇಶ್ವರ ಭಟ್, ಕೆಪಿಸಿಸಿ ಅಧ್ಯಕ್ಷ ಡಾ.ಜಿ,ಪರಮೇಶ್ವರ್, ಚಲನ ಚಿತ್ರ ಅಕಾಡೆಮಿಯ ಅಧ್ಯಕ್ಷೆ ತಾರಾ, ಚಿತ್ರನಟ ರವಿಚಂದ್ರನ್, ರಾಕ್‌ಲೈನ್ ವೆಂಕಟೇಶ್, ಬಿ.ಸಿ.ಪಾಟಿಲ್, ಐಶ್ವರ್ಯ ರೈಯ ತಂದೆ ಕೃಷ್ಣರಾಜ್ ರೈ, ಸಂಗೀತಗಾರ ಕಲ್ಯಾಣ್, ಮಾಜಿ ಸಚಿವ ಅಮರನಾಥ ಶೆಟ್ಟಿ, ಶಾಸಕ ರಘುಪತಿ ಭಟ್, ರಜನಿ ಚಂದ್ರಶೇಖರ ಇನ್ನಿತರರು ಉಪಸ್ಥಿತರಿದ್ದರು.

Comments

comments

Leave a Reply

Read previous post:
ಕಿನ್ನಿಗೋಳಿಯಲ್ಲಿ ವಿಶ್ವಕರ್ಮ ಉಚಿತ ಸಾಮೂಹಿಕ ಉಪನಯನ

ಕಿನ್ನಿಗೋಳಿ :ಕಿನ್ನಿಗೋಳಿ ರಾಜರತ್ನಪುರದ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ ಮತ್ತು ಶ್ರೀ ಕಾಳಿಕಾಂಬ ಮಹಿಳಾ ವೃಂದದ ಜಂಟಿ ಆಶ್ರಯದಲ್ಲಿ ಉಚಿತ ಸಾಮೂಹಿಕ ಉಪನಯನ ಸರಾಫ್ ಅಣ್ಣಯ್ಯಾಚಾರ್ಯ ಸಭಾಭವನದಲ್ಲಿ...

Close