ಬಳ್ಕುಂಜೆ-ಗುತ್ತು ಫ್ರೆಂಡ್ಸ್ ಕ್ರಿಕೆಟರ‍್ಸ್ ದಶಮಾನೋತ್ಸವ

ಬಳ್ಕುಂಜೆ: ಸಂಘ ಸಂಸ್ಥೆಗಳು ನಮ್ಮ ಸಂಸ್ಕಾರ, ಸಂಸ್ಕೃತಿಗಳನ್ನು ಉಳಿಸುವುದರ ಜೊತೆಗೆ ಮಾನವೀಯ ನೆಲೆಯಲ್ಲಿ ಸ್ಪಂದಿಸ ಬೇಕಾದ ಅಗತ್ಯವಿದೆ ಎಂದು ಕೇಮಾರುವಿನ ಸಾಂದೀಪನೀ ಸಾಧನಾಶ್ರಮದ ಶ್ರೀ ಶ್ರೀ ಈಶ ವಿಠಲ ದಾಸ ಸ್ವಾಮೀಜಿ ಹೇಳಿದರು. ಅವರು ಸೋಮವಾರ ಬಳ್ಕುಂಜೆಯ ಗುತ್ತು ಫ್ರೆಂಡ್ಸ್ ಕ್ರಿಕೆಟರ‍್ಸ್ ನ ದಶಮಾನೋತ್ಸವದಲ್ಲಿ ಆಶೀರ್ವಚನ ನೀಡಿದರು. ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಸಾಧಕರಾದ ನಿವೃತ್ತ ಶಿಕ್ಷಕಿ ಕೆ. ಸಾವಿತ್ರಿ, ಗುತ್ತಿಗೆದಾರ ಬಿ.ಎಚ್. ಖಾಸಿಂ, ನಿವೃತ್ತ ಮೆಸ್ಕಂ ಮೇಲ್ವಿಚಾರಕ ಡಿ. ಕೃಷ್ಣ ಕೋಟ್ಯಾನ್ ರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭ ಕ್ರಿಕೆಟ್ ಪಂದ್ಯಾಟದ ವಿಜೇತರಿಗೆ ಬಹುಮಾನ ವಿತರಣೆ, ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ನಡೆಯಿತು. ಬಳ್ಕುಂಜೆ ಸಂತ. ಪೌಲರ ದೇವಾಲಯದ ಧರ್ಮ ಗುರು ರೆ| ಫಾ| ಹಿಲೆರಿ ಲೋಬೋ, ಕರ್ನಿರೆ ಮಸೀದಿಯ ಧರ್ಮ ಗುರು ಪಿ. ಪಿ. ಅಹಮದ್ ಸಖಾಫಿ, ಶುಭ ಹಾರೈಸಿದರು. ಶಾಸಕ ಕೆ.ಅಭಯ ಚಂದ್ರ ಜೈನ್, ಮುಂಬೈನ ಉದ್ಯಮಿಗಳಾದ ವಿರಾರ್ ಶಂಕರ ಶೆಟ್ಟಿ, ದಯಾ ಶಂಕರ ಶೆಟ್ಟಿ, ಗಂಗಾಧರ ಅಮೀನ್, ಜೈದೀಪ್ ಅಮೀನ್, ಕರುಣಾಕರ ಎಸ್. ಶೆಟ್ಟಿ, ಗುಜರಾತಿನ ಉದ್ಯಮಿ ಅಶೋಕ್ ಎಸ್. ಶೆಟ್ಟಿ, ಎ. ಪಿ. ಎಂ ಅಧ್ಯಕ್ಷ ಕೃಷ್ಣ ರಾಜ ಹೆಗ್ಡೆ, ಹಾಜಿ. ಕೆ. ಎಸ್. ಸೈಯದ್ ಕರ್ನಿರೆ, ಪಡುಮನೆ ಶೇಖರ ಶೆಟ್ಟಿ, ತಾ. ಪಂ. ಸದಸ್ಯ ನೆಲ್ಸನ್ ಲೋಬೋ ಮತ್ತಿತರರಿದ್ದರು. ದಿನಕರ ಶೆಟ್ಟಿ ಸ್ವಾಗತಿಸಿ, ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ-ರಜತಮಹೋತ್ಸವ ಸಮಾರೋಪ

ಕಿನ್ನಿಗೋಳಿ: ಕಿನ್ನಿಗೋಳಿ ರಾಜರತ್ನ ಪುರದ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ರಜತಮಹೋತ್ಸವದ ಸಮಾರೋಪ ರವಿವಾರ ಸಂಘದ ಸರಾಫ್ ಅಣ್ಣಯ್ಯ ಆಚಾರ್ಯ ಸಭಾಭವನದಲ್ಲಿ ನಡೆಯಿತು. ಶಾಸಕ ಕೆ. ಅಭಯಚಂದ್ರ...

Close