ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ-ರಜತಮಹೋತ್ಸವ ಸಮಾರೋಪ

ಕಿನ್ನಿಗೋಳಿ: ಕಿನ್ನಿಗೋಳಿ ರಾಜರತ್ನ ಪುರದ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ರಜತಮಹೋತ್ಸವದ ಸಮಾರೋಪ ರವಿವಾರ ಸಂಘದ ಸರಾಫ್ ಅಣ್ಣಯ್ಯ ಆಚಾರ್ಯ ಸಭಾಭವನದಲ್ಲಿ ನಡೆಯಿತು. ಶಾಸಕ ಕೆ. ಅಭಯಚಂದ್ರ ಜೈನ್‌ರ ಅಧ್ಯಕ್ಷತೆಯಲ್ಲಿ ಸಮಾಜದ ಸಾಧಕರಾದ ಕಾಷ್ಠಾ ಶಿಲ್ಪಿ ಕಲ್ಲಮುಂಡ್ಕೂರಿನ ನಾರಾಯಣಚಾರ್ಯ, ಮುಂಡ್ಕೂರಿನ ಅಂಚೆಜವಾನ ಎಂ. ರಾಮ ಆಚಾರ್ಯರಿಗೆ ಸನ್ಮಾನ ನಡೆಯಿತು. ಮಂಗಳೂರಿನ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಡಳಿತ ಮೋಕ್ತಏಸರ ಕೆ. ಕೇಶವ ಆಚಾರ್ಯ ಹಳೆಯಂಗಡಿ ಶ್ರೀ ದುರ್ಗಾ ಜ್ಯುವೆಲರ್ಸ್‌ನ ಬಿ. ಸೂರ‍್ಯ ಕುಮಾರ್, ಜಿ.ಪಂ. ಸದಸ್ಯ ಈಶ್ವರ್ ಕಟೀಲು, ಕೊಲಕಾಡಿ ಶ್ರೀ ಕಾಳಿಕಾಂಬಾ ದೇವಳದ ಆಡಳಿತ ಮೋಕ್ತೇಸರ ಕೆ. ಸುಬ್ರಾಯ ಆಚಾರ್ಯ, ಏಳಿಂಜೆ ಭಾಸ್ಕರ ಆಚಾರ್ಯ, ಕಟ್ಟಡ ಸಮಿತಿ ಅಧ್ಯಕ್ಷ ಪ್ರಥ್ವೀರಾಜ ಆಚಾರ್ಯ, ಮಹಿಳಾ ಮಂಡಲದ ಅಧ್ಯಕ್ಷೆ ಮಮತಾ ಸುರೇಂದ್ರ ಆಚಾರ್ಯ ಉಪಸ್ಥಿತರಿದ್ದರು. ದಿನೇಶ್ ಪ್ರಾರ್ಥಿಸಿ, ಕೆ.ಬಿ. ಸುರೇಶ್ ಸ್ವಾಗತಿಸಿದರು, ಉದಯ ಕುಮಾರ್ ವರದಿ ನೀಡಿ, ಸುರೇಂದ್ರ ಆಚಾರ್ಯ ವಂದಿಸಿ, ಶರತ್ ಶೆಟ್ಟಿ ನಿರೂಪಿಸಿದರು.

Comments

comments

Leave a Reply

Read previous post:
ಕೊಳಚಿ ಕಂಬಳ ಜಾರಂದಾಯ ನೇಮೋತ್ಸವ

Photos by Prakash M Suvarna ಕೊಳಚಿ ಕಂಬಳ ಜಾರಂದಾಯ ದೈವಸ್ಥಾನದಲ್ಲಿ ನೇಮೋತ್ಸವ

Close