ಸದಾನಂದ ಗೌಡರಿಗೆ ಸರ್ಕಾರ ನಡೆಸಲು ತಾಕತ್ತಿಲ್ಲ; ಜಿ.ಪರಮೇಶ್ವರ್

Photo by Narendra Kerekadu

 ಮುಲ್ಕಿ: ರಾಜ್ಯದಲ್ಲಿ ಗಂಭೀರವಾದ ಬರ ಪರಿಸ್ಥಿತಿ ಇದ್ದರು ಸರ್ಕಾರದ ಕಾಳಜಿ ಮಾತ್ರ ತಮ್ಮ ಪಕ್ಷದ ಆಂತರಿಕ ಸಮಸ್ಯೆಯತ್ತಲೇ ಇದೆ, ಸರ್ಕಾರವು ಎಲ್ಲಾ ರಂಗದಲ್ಲಿ ವಿಫಲತೆಯನ್ನು ಕಂಡಿದ್ದರಿಂದ ಮುಖ್ಯಮಂತ್ರಿ ಸದಾನಂದ ಗೌಡರ ಮೇಲಿನ ಭರವಸೆ ಹುಸಿಯಾಗಿದೆ ಸರ್ಕಾರ ನಡೆಸಲು ತಾಕತ್ತಿಲ್ಲದಿದ್ದರೆ ರಾಜಿನಾಮೆ ಕೊಟ್ಟು ಜನರ ಬಳಿಯ ತೀರ್ಮಾನಕ್ಕೆ ತಯಾರಾಗಿ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಪಿ.ಪರಮೇಶ್ವರ್ ಎಚ್ಚರಿಸಿದರು.
ಮುಲ್ಕಿಯ ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದಲ್ಲಿ ಸೋಮವಾರ ನಡೆದ ಮಹಾವಿಷ್ಣುಯಾಗದಲ್ಲಿ ಭಾಗವಹಿಸಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ಶಿಕ್ಷಕರ ಪಟ್ಟು ಮತ್ತು ಸರ್ಕಾರದ ಹಠದಿಂದ ಶೈಕ್ಷಣಿಕವಾಗಿ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಇದನ್ನು ಮನಗಂಡು ಸರ್ಕಾರ ಉಪನ್ಯಾಸಕರ ಸಮಸ್ಯೆಯನ್ನು ಪರಿಶೀಲಿಸಬೇಕು ಎಂದು ಸಲಹೆ ನೀಡಿದರು.
ಸಿದ್ದಾಂತದ ಪಕ್ಷ ಎಂದು ಹೇಳಿಕೊಂಡು ಬಿಜೆಪಿಯು ಅಧಿಕಾರಕ್ಕೆ ಬಂದು ನಡೆಸಿದ ಆಡಳಿತದಿಂದ ಜನರು ನಾಲ್ಕು ವರ್ಷದಲ್ಲಿ ಎಷ್ಟು ಸಮಸ್ಯೆಯನ್ನು ಎದುರಿಸಿದ್ದಾರೆ ಎನ್ನುವುದಕ್ಕೆ ಉಡುಪಿ ಲೋಕಸಭೆಯ ಉತ್ತರವೇ ಸಾಕ್ಷಿ ಆಗಿದ್ದು ಮುಂದಿನ ವಿಧಾನ ಸಭಾ ಚುನಾವಣೆಯಲ್ಲೂ ಸಹ ಬಿಜೆಪಿಗೆ ತಕ್ಕ ಉತ್ತರವನ್ನು ಜನತೆ ನೀಡುತ್ತಾರೆ ಎಂದರು.
ಬರಪರಿಹಾರಕ್ಕಾಗಿ ಸರ್ಕಾರವು ಏನೊಂದು ಕ್ರಮ ಕೈಗೊಳ್ಳದೇ ಇರುವುದು ನಾಚಿಕೆ ಆಗುತ್ತದೆ ಕಾಂಗ್ರೇಸ್ಸಿನ ಮೂರು ತಂಡಗಳು ನಡೆಸಿದ ಸಮೀಕ್ಷೆ 21ಕ್ಕೆ ಮುಕ್ತಾಯವಾಗಲಿದ್ದು 24ರಂದು ತುಮಕೂರಿಗೆ ಬರುವ ಸೋನಿಯಾ ಗಾಂಧಿಯವರಲ್ಲಿ ವರದಿಯನ್ನು ನೀಡುತ್ತೇವೆ ಸರ್ಕಾರಕ್ಕೂ ಪ್ರತಿಯನ್ನು ನೀಡುತ್ತೇವೆ ಎಂದರು.

Comments

comments

Leave a Reply

Read previous post:
ಆಧ್ಯಾತ್ಮಕತೆಯಲ್ಲಿ ಸೈದ್ದಾಂತಿಕ ನಿಲುವು ಅಗತ್ಯ

Photos by Narendra Kerekadu & Prakash M Suvarna ಮುಲ್ಕಿ: ಧಾರ್ಮಿಕ ಭಾವನೆಯನ್ನು ಪ್ರಪಂಚದಲ್ಲಿ ವಿಭಿನ್ನವಾಗಿ ಶ್ರದ್ಧೆ ಭಕ್ತಿಯಲ್ಲಿ ಆಚರಿಸುವ ಪದ್ಧತಿಯನ್ನು ನಾವು ಕಂಡಿದ್ದು ಭಾರತೀಯತೆಯಲ್ಲಿ ಇರುವ...

Close