ವಿವಿಧೋದ್ದೇಶ ಸಹಕಾರಿ ಸಂಘ ನಿಯಮಿತ ಪಂಚವಾರ್ಷಿಕ ಗ್ರಾಹಕರ ಸಮಾವೇಶ

ಕಟೀಲು : ವಿವಿಧೋದ್ದೇಶ ಸಹಕಾರಿ ಸಂಘ ನಿಯಮಿತ ಪಂಚವಾರ್ಷಿಕ ಗ್ರಾಹಕರ ಸಮಾವೇಶ ಮಂಗಳವಾರ ಕಟೀಲಿನ ಸೌಂದರ್ಯ ಪ್ಯಾಲೇಸ್‌ನಲ್ಲಿ ನಡೆಯಿತು. ಕಟೀಲಿನ ಲಕ್ಷ್ಮೀನಾರಾಯಣ ಆಸ್ರಣ್ಣ ಆಶೀರ್ವಚನ ನೀಡಿದರು. ಸಂಘದ ಅಧ್ಯಕ್ಷ ಸಂಜೀವ ಮಡಿವಾಳ ಅಧ್ಯಕ್ಷತೆ ವಹಿಸಿದ್ದರು. ಮೆನ್ನಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಶೈಲಾ ಶೆಟ್ಟಿ, ಕಿನ್ನಿಗೋಳಿ ಗ್ರಾಮ ಪಂಚಾಯತ್ ಸದಸ್ಯ ಟಿ. ಎಚ್. ಮಯ್ಯದ್ದಿ , ಉದ್ಯಮಿ ವೇದವ್ಯಾಸ ಉಡುಪ ದೇವಸ್ಯ ಮಠ, ಉದ್ಯಮಿ ರಾಮದಾಸ್ ಕಾಮತ್ ಕಟೀಲು, ಅನುಗ್ರಹ ಜುವೆಲರ‍್ಸ್ ಮಾಲಕ ಪ್ರಥ್ವಿರಾಜ್ ಆಚಾರ್ಯ ಕಿನ್ನಿಗೋಳಿ, ಕಾರ್ಯಕಾರಿ ಮಂಡಳಿಯ ಉಪಾಧ್ಯಕ್ಷರಾದ ಕೆ.ಎ. ಖಾದರ್, ನಿರ್ದೇಶಕರಾದ ಯಶೋದಾ ಆರ್, ಕೆ. ಎ. ಅಬ್ದುಲ್ಲ, ಕೆ.ಬಿ. ಸುರೇಶ್, ರಘುರಾಮ್ ಮುಗೇರ, ಉಪಸ್ಥಿತರಿದ್ದರು. ಆಶಾ, ಜ್ಯೋತಿ ಪ್ರಾರ್ಥಿಸಿ, ಕೆ.ಎ.ಅಬ್ದುಲ್ಲ ಸ್ವಾಗತಿಸಿದರು.

Comments

comments

Leave a Reply

Read previous post:
ದೈವ ಅರದಾಳ

Close