ಮೂಡುಕೊಟ್ರಪಾಡಿ ನಾಗಮಂಡಲೋತ್ಸವ ಧಾರ್ಮಿಕ ಸಭೆ

Photos by Sharath Shetty

ಕಿನ್ನಿಗೋಳಿ: ಮೂಡುಕೊಟ್ರಪಾಡಿ ಕುಟುಂಬಿಕರ ನಾಗಬ್ರಹ್ಮಸ್ಥಾನದಲ್ಲಿ ಚತುಃಷ್ಟವಿತ್ರ ನಾಗಮಂಡಲೋತ್ಸವ ಗುರುವಾರ ನಡೆಯಿತು. ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಸಾಂಸದ ನಳಿನ್ ಕುಮಾರ್ ಕಟೀಲರ ಅಧ್ಯಕ್ಷತೆಯಲ್ಲಿ, ಸುಬ್ರಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಗಳು ,ಹಾಗೂ ಒಡಿಯೂರು ಶ್ರೀ ದತ್ತಗುರು ದೇವಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ಧಾರ್ಮಿಕ ಪರಿಷತಿನ ಸದಸ್ಯ ವೇದ ಮೂರ್ತಿ ಪಂಜ ಭಾಸಕರ ಭಟ್ ಧಾರ್ಮಿಕ ಉಪನ್ಯಾಸ ನೀಡಿದರು. ಶಾಸಕ ಕೆ. ಅಭಯ ಚಂದ್ರ ಜೈನ್, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ, ಮಂಗಳೂರು ತಾ. ಪಂ. ಅದ್ಯಕ್ಷೆ ಭವ್ಯ ಗಂಗಾಧರ್, ಜಿಲ್ಲಾ ಬಿ.ಜೆ.ಪಿ ಉಪಾಧ್ಯಕ್ಷರಾದ ಕೆ. ಪಿ. ಜಗದೀಶ ಅಧಿಕಾರಿ, ಭುವನಾಭಿರಾಮ ಉಡುಪ, ಜಿ. ಪಂ ಈಶ್ವರ ಕಟೀಲು, ಸುನಿತ ಸುಚರಿತ ಶೆಟ್ಟಿ, ಅರ್ಚಕ ಪುರುಷೋತ್ತಮ ಭಟ್, ಕುಟುಂಬದ ಹಿರಿಯರಾದ ದೇಜು ಎನ್. ಶೆಟ್ಟಿ, ಜಯ ಶೆಟ್ಟಿ, ಬೊಳ್ನಾಡು ಗುತ್ತು ಚಂದ್ರಹಾಸ ರೈ, ಶೇಖರ ಶೆಟ್ಟಿ, ಪೇಟೆ ಮನೆ ಪ್ರಕಾಶ ಶೆಟ್ಟಿ, ಉಪಸ್ಥಿತರಿದ್ದರು. ಶರತ್ ಶೆಟ್ಟಿ ವಂದಿಸಿ, ಕದ್ರಿ ನವನೀತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

 

Comments

comments

Leave a Reply

Read previous post:
ಕಟೀಲು ಪ್ರೌಢಶಾಲೆಯ ಹಳೆ ವಿದ್ಯಾರ್ಥಿ ಸಂಘದ ಉದ್ಘಾಟನೆ

Mithuna Kodethoor ಕಟೀಲು: ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇಗುಲ ಪ್ರೌಢಶಾಲೆಯ ಹಳೆ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಗುರುವಂದನೆ ಕಾರ್ಯಕ್ರಮ ತಾ.22ರ ಭಾನುವಾರ ಬೆಳಿಗ್ಗೆ ಗಂಟೆ 10ಕ್ಕೆ ಶಾಲಾ...

Close