ಕಟೀಲಿನಲ್ಲಿ ಗುರುವಂದನೆ, ಕಂಪ್ಯೂಟರ್ ಕೊಡುಗೆ

Photo by Mithuna Kodethoor

ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರೌಢಶಾಲೆಯ ಹಳೆವಿದ್ಯಾರ್ಥಿಗಳ ಸಂಘವನ್ನು ಭಾನುವಾರ ಐವರು ನಿವೃತ್ತ ಶಿಕ್ಷಕರನ್ನು ಸಂಮಾನಿಸಿ ಗುರುವಂದನೆ ಸಲ್ಲಿಸುವ ಮೂಲಕ ಉದ್ಘಾಟಿಸಲಾಯಿತು.
ಸಾಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ ಹಳೆವಿದ್ಯಾರ್ಥಿಗಳು ತಮ್ಮ ಶಾಲೆಯನ್ನು ಮರೆಯದೆ, ಏನಾದರೂ ಕೊಡುಗೆ ನೀಡಿದಾಗ ಕನ್ನಡ ಶಾಲೆಗಳು ಇನ್ನಷ್ಟು ಬಲಿಷ್ಟವಾಗಲು ಸಾಧ್ಯ ಎಂದರು.
ಶಾಸಕ ಅಭಯಚಂದ್ರ, ಕಟೀಲು ದೇವಳದ ಅರ್ಚಕ ವಾಸುದೇವ ಆಸ್ರಣ್ಣ, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ಬಾಬು ಶೆಟ್ಟಿ, ಜಿ.ಪಂ.ಸದಸ್ಯ ಈಶ್ವರ್ ಕಟೀಲ್ ಉಪಸ್ಥಿತಿಯಲ್ಲಿ ನಿವೃತ್ತ ಶಿಕ್ಷಕರಾದ ಕೃಷ್ಣ ರಾವ್, ಉಮೇಶ ರಾವ್ ಎಕ್ಕಾರು, ಕೇಶವ ಹೊಳ್ಳ, ಸುಂದರ ಪೂಜಾರಿ, ಕೇಶವ ಹೊಳ್ಳರನ್ನು ಗೌರವಿಸಲಾಯಿತು.
ಹಳೆ ವಿದ್ಯಾರ್ಥಿಗಳು ಕಾಲೇಜಿಗೆ ಕೊಡುಗೆಯಾಗಿ ನೀಡಿದ ಕಂಪ್ಯೂಟರ್‌ಗಳನ್ನು ಉದ್ಘಾಟಿಸಲಾಯಿತು. ಕಟೀಲಿನ ಶಿಕ್ಷಣ ಸಂಸ್ಥೆಗಳ ವೆಬ್‌ಸೈಟನ್ನು ಬಿಡುಗಡೆಗೊಳಿಸಲಾಯಿತು. ಹರಿನಾರಾಯಣದಾಸ ಆಸ್ರಣ್ಣ ಸ್ವಾಗತಿಸಿದರು. ಉಪಪ್ರಾಚಾರ್ಯ ಸುರೇಶ್ ಭಟ್ ಪ್ರಸ್ತಾವನೆಗೈದರು. ಮಧುಕರ ಅಮೀನ್ ವಂದಿಸಿದರು. ಸುಜಾತ ದಿವಾಕರ್ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ನವಸಾಕ್ಷರರ ವೃತ್ತಿ ಕೌಶಲ್ಯ ತರಬೇತಿ

Photo by Mithuna Kodethoor ಕಿನ್ನಿಗೋಳಿ : ದ.ಕ.ಜಿಪಂ., ಸಾಕ್ಷರತಾ ಸಮಿತಿ, ಜನಶಿಕ್ಷಣ ಟ್ರಸ್ಟ್ ಆಶ್ರಯದಲ್ಲಿ ಮೆನ್ನಬೆಟ್ಟು ಪಂಚಾಯತ್ ವ್ಯಾಪ್ತಿಯ ಸ್ತ್ರೀ ಶಕ್ತಿ ಸದಸ್ಯರಿಗೆ ನವಸಾಕ್ಷರರ ವೃತ್ತಿ...

Close