ಈಶ್ವರ ಕಟೀಲು – ಮುಲ್ಕಿ ಆರೋಗ್ಯ ಕೇಂದ್ರಕ್ಕೆ ಹಠಾತ್ ಭೇಟಿ

Photo by Bhagyavan Sanil

ಮುಲ್ಕಿ: ಮುಲ್ಕಿನಗರ ಪಂಚಾಯತ್ ವ್ಯಾಪ್ತಿಯಲ್ಲಿ ಮಲೇರಿಯಾ ಉಲ್ಭಣ, ಕುಡಿಯುವ ನೀರಿಗೆ ಹಾಹಾಕಾರ, ಶುಚಿತ್ವದ ಸಮಸ್ಯೆ ಮುಂತಾದ ದೂರು ದುಮ್ಮಾನಗಳಿಗೆ ತಕ್ಷಣಸ್ಪಂದಿಸಿ ಜಿ.ಪಂ.ಆರೋಗ್ಯ ಮತ್ತು ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷ ಈಶ್ವರ ಕಟೀಲು ಮಂಗಳವಾರ ಮುಂಜಾನೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹಠಾತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರಾತ್ರಿ ಪಾಳಿಯ ವೈದ್ಯರಿಲ್ಲದೆ ಸಮಸ್ಯೆಗಳಾಗುತ್ತಿದೆ. ಒಂದು ವಾರವಾದರೂ ಬೆಡ್ ಶೀಟ್ ಬದಲಾಯಿಸಿಲ್ಲ ಶೌಚಾಲಯ ದುರ್ನಾತ ಬೀರುತ್ತಿದೆ. ನೀರಿನ ಸಮಸ್ಯೆಯಾಗಿದೆ ಕುಡಿಯಲು ಹೊರಗಿನಿಂದ ಬಾಟ್ಲಿ ನೀರು ತರುತ್ತಿದ್ದೇವೆ ಎಂದು ರೋಗಿಗಳು ಈಶ್ವರ್‌ರವರಲ್ಲಿ ದೂರಿದರು.
ಮುಲ್ಕಿಯಲ್ಲಿ ಮಲೇರಿಯಾ ಹಾವಳಿಯಿದ್ದು ಕಳೆದ ತಿಂಗಳು 7 ಜನ ಈ ತಿಂಗಳಲ್ಲಿ ಈವರೆಗೆ 20 ಜನ ಅಡ್ಮಿಟ್ ಆಗಿದ್ದಾರೆ ಹೆಚ್ಚಿನವರು ಮುಲ್ಕಿ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ವಸತಿ ಸಂಕೀರ್ಣದ ಕಾರ್ಮಿಕರು .  ನೀರಿನ ಸಮಸ್ಯೆ ಕಳೆದ 2 ದಿನದಿಂದ ವಿಪರೀತವಾಗಿದ್ದು ಬೋರ‍್ನಲ್ಲಿ ನೀರಿಲ್ಲ ಬಾವಿಯ ನೀರು ಕಾಲುಗಂಟೆ ಮಾತ್ರ ಲಭ್ಯ ಈ ಬಗ್ಗೆ ವೈದ್ಯಾಧಿಕಾರಿಗಳಲ್ಲಿ ತಿಳಿಸಿದ್ದು ಅವರು ಮುಲ್ಕಿ ನಗರ ಪಂಚಾಯತ್‌ನ್ನು ಸಂಪರ್ಕಿಸಿದ್ದಾರೆ
ಸ್ಥಳೀಯ ಆರೋಗ್ಯ ಸಮಿತಿ ನಿಷ್ಕ್ರೀಯವಾಗಿದ್ದು ನೂತನ ಸಮಿತಿ ನಿರ್ಮಾಣಕ್ಕೆ ಈಶ್ವರ್ ರವರಲ್ಲಿ ಸ್ಥಳಿಯರು ಒತ್ತಾಯಿಸಿದರು. ಈ ಬಗ್ಗೆ ಪರಿಶೀಲಿಸುವುದಾಗಿ ಈಶ್ವರ್ ತಿಳಿಸಿದರು.
ಈಗಾಗಲೇ ಹೆರಿಗೆ ವಿಭಾಗದ ಛಾವಣಿ ದುರಸ್ತಿಗೆ ಅನುಮೋದನೆ ನೀಡಲಾಗಿದ್ದು ಶೀಘ್ರ ದುರಸ್ತಿಯಾಗುವುದು ಕುಡಿಯುವ ನೀರಿಗೂ ಶಾಶ್ವತ ಪರಿಹಾರ ಹುಡುಕುವ ಪ್ರಯತ್ನ ಮಾಡಲಾಗುವುದು ಎಂದರು. ಈ ಸಂದರ್ಭ ಮುಲ್ಕಿ ನಗರ ಪಂಚಾಯತ್ ಸದಸ್ಯ ಸುನಿಲ್ ಆಳ್ವಾ ಉಪಸ್ಥಿತರಿದ್ದರು.

Comments

comments

Leave a Reply

Read previous post:
ಶ್ರೀ ಮಾರಿಯಮ್ಮ ದೇವಸ್ಥಾನ ಮಾರಡ್ಕ -ದೇವರ ಬಿಂಬ ಪ್ರತಿಷ್ಠೆ

ಶ್ರೀ ಮಾರಿಯಮ್ಮ ದೇವಸ್ಥಾನ ಮಾರಡ್ಕ ಇದರ ಮಾರಿಪೂಜಾ ಮಹೋತ್ಸವದ ಅಂಗವಾಗಿ ಕಿನ್ನಿಗೋಳಿ ಅಶ್ವತ್ಥಕಟ್ಟೆಯಲ್ಲಿ ಪ್ರತಿಷ್ಠಾಪಿಸಿದ ದೇವರ ಬಿಂಬ ಪ್ರತಿಷ್ಠೆ

Close