ಸಾವಯವ ಗ್ರಾಮ -ಡೈರಿ ದಾಖಲೀಕರಣ ತರಬೇತಿ

Photo by Yathish

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಮೆನ್ನಬೆಟ್ಟು ಮತ್ತು ಕರ್ನಾಟಕ ಸರಕಾರ ಕೃಷಿ ಇಲಾಖೆ ಇವರ ಜಂಟೀ ಸಹಭಾಗಿತ್ವದೊಂದಿಗೆ ಅನುಷ್ಥಾನಗೊಳಿಸುತ್ತಿರುವ ಸಾವಯವ ಗ್ರಾಮ – ಮೆನ್ನಬೆಟ್ಟು ಇಲ್ಲಿನ ಫಲಾನುಭಾವಿಗಳಿಗೆ ಡೈರಿ ದಾಖಲೀಕರಣದ ಬಗ್ಗೆ ತರಬೇತಿ ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸದಾನಂದ ಶೆಟ್ಟಿ ವಹಿಸಿದ್ದರು. ಕೃಷಿ ಅಧಿಕಾರಿ ನಾಗೇಶ ಎಸ್. ಮಾಹಿತಿ ನೀಡಿದರು. ಮೇಲ್ವಿಚಾರಕಿ ಲತಾ ಕೆ. ಅಮೀನ್ , ಸಾವಯವ ಗ್ರಾಮದ ಅಧ್ಯಕ್ಷರಾದ ರಘುನಾಥ ಶೆಟ್ಟಿ, ಒಕ್ಕೂಟದ ಅಧ್ಯಕ್ಷರಾದ ನಯನ ಶೆಟ್ಟಿ, ಪುರುಷೋತ್ತಮ ಕೋಟ್ಯಾನ್, ಸೇವಾ ನಿರತ ರಾಮ್ ಕುಮಾರ್, ದಿವಾಕರ ಮತ್ತಿತರು ಉಪಸ್ಥಿತರಿದ್ದರು. ಫಲಾನುಭಾವಿಗಳಿಗೆ ಸಾವಯವ ಗೊಬ್ಬರ ಉತ್ಪಾದನೆಗೆ ಬೇಕಾದ ಘಟಕಗಳ ರಚನೆಗಾಗಿ 85000/- ಅನುದಾನ ವಿತರಣೆ ಮಾಡಲಾಯಿತು.

 

Comments

comments

Leave a Reply

Read previous post:
ಮುಲ್ಕಿ ಬಂಟರ ಸಂಘು: ರಕ್ತದಾನ ಶಿಬಿರ

ಮುಲ್ಕಿ : ಮುಲ್ಕಿ ಬಂಟರ ಸಂಘದ ಮಹಿಳಾವೇದಿಕೆಯ ನೇತೃತ್ವದಲ್ಲಿ ರಕ್ತದಾನ ಶಿಬಿರ ಕೆಂಚನಕೆರೆ ಶಾಲೆಯಲ್ಲಿ ನಡೆಯಿತು. ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆ ಮತ್ತು ವೆನ್ಲಾಕ್ ಆಸ್ಪತ್ರೆಯ ಸಹಯೋಗದೊಂದಿಗೆ ನಡೆಯಿತು. ಮಂಗಳೂರು...

Close