ಗುತ್ತಕಾಡು ಗ್ರಾಮಸ್ಥರಿಂದ ಕಿನ್ನಿಗೋಳಿ ಮೆಸ್ಕಂಗೆ ಮುತ್ತಿಗೆ

ಕಿನ್ನಿಗೋಳಿ: ಕಳೆದ ಒಂದು ವಾರಗಳಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿರುವ ಹಿನ್ನೆಲೆಯಲ್ಲಿ ಗುತ್ತಕಾಡುವಿನ ಗ್ರಾಮಸ್ಥರು ಕಿನ್ನಿಗೋಳಿ ಮೆಸ್ಕಂ ಕಛೇರಿ ಎದುರು ಬ್ರಹತ್ ಪ್ರತಿಭಟನೆ ನಡೆಸಿದರು. ಸ್ಥಳೀಯ ಲೈನ್ ಮ್ಯಾನ್ ಮತ್ತು ಮೆಸ್ಕಂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಕೂಡಲೆ ವಿದ್ಯುತ್ ಸಂಪರ್ಕ ಸರಿಪಡಿಸದಿದ್ದರೆ ಪ್ರತಿಭಟನೆಗೆ ಇನ್ನಷ್ಟು ಚುರುಕು ಮುಟ್ಟಿಸುವ ಬೆದರಿಕೆ ಹಾಕಿದರು. ಈ ಬಗ್ಗೆ ಪ್ರತಿಕ್ರಯಿಸಿದ ಇಲಾಖೆಯ ಪ್ರಭಾರ ಅಧಿಕಾರಿ ಇಲಿಯಾಸ್ ಸಾಮಾಗ್ರಿಗಳ ಗುಣಮಟ್ಟದ ಕೊರತೆಯಿಂದಾಗಿ ಪಿನ್ನುಗಳು ಮತ್ತೆ ಮತ್ತೆ ಹಾಳಾಗುವುದರಿಂದ ಈ ತೊಂದರೆ ನಡೆಯುತ್ತಿದ್ದು ಕೂಡಲೆ ಕ್ರಮ ಕೈಗೊಳ್ಳುವಂತೆ ಮೇಲಧಿಕಾರಿಗಳಿಗೆ ತಿಳಿಸುವುದಾಗಿ ಹೇಳಿದರು.
ಕಳೆದ ಒಂದು ವಾರಗಳಿಂದ ಗುತ್ತಕಾಡು ಪ್ರದೇಶದಲ್ಲಿ ವಿದ್ಯುತ್ ಕಡಿತಗೊಂಡಿದ್ದು ಗ್ರಾಮಸ್ಥರು ನೀರು ಮತ್ತಿತರ ವ್ಯವಸ್ಥೆಗಳಿಗೆ ಪರದಾಡುತ್ತಿದ್ದಾರೆ. ಸಹನೆ ಮೀರಿದ ಸುಮಾರು 500 ಮಂದಿ ಶನಿವಾರ ಪ್ರತಿಭಟನೆಗೆ ಮುಂದಾಗಿದ್ದರು. ಎ.ಪಿ.ಎಂ.ಸಿ ಸದಸ್ಯ ಪ್ರಮೋದ್ ಕುಮಾರ್, ಮಾಜಿ. ತಾ.ಪಂ ಸದಸ್ಯೆ ಸುಜಾತ ಸದಾನಂದ, ಖಾದರ್, ಮತ್ತಿತರರು ಸಮಸ್ಯೆಯ ಕುರಿತು ಇಲಾಖೆಗೆ ಮನವರಿಕೆ ಮಾಡಿದರು.

 

Comments

comments

Leave a Reply

Read previous post:
ರಥ ನಿರ್ಮಾಣ

Close