ಮುಲ್ಕಿ ಯುವ ಜಾಗೃತಿ ಸಮಾವೇಶ ಪ್ರಮುಖರ ಸಿದ್ದತಾ ಸಭೆ

Photos by Bhagyavan Sanil

ಮುಲ್ಕಿ :  ಸದೃಢ ಭಾರತ ನಿರ್ಮಾಣಕ್ಕೆ ಯುವಕರನ್ನು ಪ್ರೇರಿಸುವ ಸಲುವಾಗಿ ಬೃಹತ್ ಯುವ ಜಾಗೃತಿ ಸಮಾವೇಶವು ಮಂಗಳೂರಿನಲ್ಲಿ ನಡೆಯಲಿದೆ ಎಂದು ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಹೇಳಿದರು.

ಸೋಮವಾರ ಮುಲ್ಕಿ ಬಪ್ಪನಾಡು ಜ್ಞಾನ ಮಂದಿರದಲ್ಲಿ ಯುವ ಜಾಗೃತಿ ಸಮಾವೇಶ ಪ್ರಮುಖರ ಸಿದ್ದತಾ ಸಭೆಯಲ್ಲಿ ಅವರು ಮಾತನಾಡಿದರು.
ಮಂಗಳೂರಿನಲ್ಲಿ ನಡೆಯುವ ಸಮಾವೇಶದಿಂದ ಅವರು ರಾಷ್ಟ್ರ ರಕ್ಷಣೆಯೊಂದಿಗೆ ಸದೃಢ ಭಾರತದ ನಿರ್ಮಾಣಕ್ಕಾಗಿ ರಾಜಕಾರಣಕ್ಕೆ ಬರುವಂತೆ ಸ್ಪೂರ್ತಿ ನೀಡಲಾಗುವುದು ಎಂದರು. ಕಾಂಗ್ರೆಸ್ ಮತ್ತು ಜೆಡಿಯಸ್ ಸರ್ಕಾರ ಕಳೆದ60 ವರ್ಷಗಳಲ್ಲಿ ಮಾಡಿದ ಅಭಿವೃದ್ಧಿಕ್ಕಿಂತ ಹಲವು ಪಟ್ಟು ಅಭಿವೃದ್ಧಿಯನ್ನು ಬಿಜೆಪಿ ಸರ್ಕಾರ ೪ವರ್ಷದಲ್ಲಿ ಸಾಧಿಸಿದೆ. ರಾಜ್ಯದಲ್ಲಿ ಬರ ಪರಿಸ್ಥಿತಿ ಬಂದಾಗ ವಿಪಕ್ಷಗಳು ರಾಜ್ಯದ ಜೊತೆ ಕ್ಯಜೋಡಿಸದೆ ಬರ ಪರಿಸ್ಥಿತಿಯನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಂಡಿದೆ ಆದರೆ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಿದ್ದ 4.5 ಸಾವಿರ ಕೋಟಿ ರೂ ಅನುದಾನ ತರಿಸುವಲ್ಲಿ ರಾಜ್ಯ ಕಾಂಗ್ರೆಸ್ ಸಹಾಯ ನೀಡಿಲ್ಲ ಎಂದರು.ಈ ಬಗ್ಗೆ ರಾಜ್ಯದಿಂದ ನಿಯೋಗ ನಾಳೆ ಪ್ರಧಾನ ಮಂತ್ರಿಯವರನ್ನು ಭೇಟಿ ಮಾಡಲಿದೆ ಮುಂದಿನ ಚುಣಾವಣೆಯಲ್ಲಿ ಬಿಜೆಪಿ ಪ್ರಚಂಡ ಬಹುಮತ ಗಳಿಸಲು ಬೂತ್ ಮಟ್ಟದಲ್ಲಿ ಸರ್ಕಾರ ರಾಜ್ಯದಲ್ಲಿ ನಡೆಸಿದ ಅಭಿವೃದ್ಧಿ ಯೋಜನೆಗಳನ್ನು ಜನರಿಗೆ ತಿಳಿಸುವ ಕೆಲಸವಾಗಬೇಕು. ಎಂದರು.
ಕಾರ್ಯಕ್ರಮದ ಬಗ್ಗೆ ಪ್ರಸ್ತಾವಿಸಿದ ಯುವ ಮೋರ್ಛಾ ರಾಜ್ಯಾಧ್ಯಕ್ಷ ಸುನಿಲ್ ಕುಮಾರ್ ಯುವ ಜನರಿಗೆರಾಷ್ಟ್ರರಕ್ಷಣೆಯ ಪ್ರೇರಣೆಗಾಗಿ ರಾಷ್ಟ್ರ ಸಂರಕ್ಷಣೆಗೆ ಯುವ ಜನಾಂಗದ ನಡಿಗೆ ಎಂಬ ಬೃಹತ್ ಯುವ ಸಮಾವೇಶ ಮೇ22 ರಂದು ಮಂಗಳೂರಿನಲ್ಲಿ ನಡೆಯಲಿದೆ. ಮಂಗಳೂರು, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗಾ ಜಿಲ್ಲೆಗಳ 30 ವರ್ಷದ ಒಳಗಿನ ಯುವ ಕಾರ್ಯಕರ್ತರ ಸಮಾವೇಶ ಮಂಗಳೂರಿನಲ್ಲಿ ನಡೆಯಲಿದ್ದು ಸುಮಾರು 1.5 ಲಕ್ಷ ಕಾರ್ಯಕರ್ತರ ನಿರೀಕ್ಷೆ ಇದೆ. ಗುಜರಾತ್ ಮುಖ್ಯಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಯುವ ಮೋರ್ಛಾ ರಾಷ್ಟ್ರಾಧ್ಯಕ್ಷ ಅನುರಾಗ್ ಠಾಕೂರ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಪೂರ್ವಭಾವಿಯಾಗಿ ರಥ ಯಾತ್ರೆಯು ಹಾಸನದ ಹೇಮಾವತಿ ನದಿ ತೀರದಲ್ಲಿ ಪ್ರಾರಂಭ ಗೊಂಡು ಚಿಕ್ಕಮಗಳೂರು, ಉಡುಪಿಗಾಗಿ ಮಂಗಳೂರು ತಲುಪಲಿದೆ. ಎಂದರು.
ಈ ಸಂದರ್ಭ ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಭಾನು ಪ್ರಕಾಶ್ ಮತ್ತು ನಳಿನ್ ಕುಮಾರ್ ಕಟೀಲು, ಉ.ಕ ಜಿಲ್ಲಾಧ್ಯಕ್ಷ ಪ್ರಸಾದ್ ಕಾರ್‌ವಾರ್‌ಕರ್, ದ.ಕ ಜಿಲ್ಲಾಧ್ಯಕ್ಷ ಪದ್ಮನಾಭ ಕೊಟ್ಟಾರಿ, ಉಡುಪಿ ಜಿಲ್ಲಾಧ್ಯಕ್ಷ ಉದಯ ಕುಮಾರ್  ಶೆಟ್ಟಿ ವೇದಿಕೆಯಲ್ಲಿದ್ದರು. ಉಭಯ ಜಿಲ್ಲೆಯ ಬಿಜೆಪಿ ಶಾಸಕರು, ನಿಗಮ ಅಧ್ಯಕ್ಷರುಗಳು, ಪಕ್ಷ ನಾಯಕರು ಹಾಜರಿದ್ದರು.
ಆಶಾ ಜಗದೀಶ್ ವಂದೇ ಮಾತರಂ ಹಾಡಿದರು. ಪದ್ಮನಾಭ ಕೊಟ್ಟಾರಿ ಸ್ವಾಗತಿಸಿದರು. ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವದಾಸ ಶೆಟ್ಟಿ ನಿರೂಪಿಸಿದರು, ಉದಯ ಕುಮಾರ್ ಶೆಟ್ಟಿ ವಂದಿಸಿದರು.

Comments

comments

Leave a Reply

Read previous post:
ಈಶ್ವರಪ್ಪ ಬಪ್ಪನಾಡು ಭೇಟಿ

Photo by Bhagyavan Sanil ಮುಲ್ಕಿ: ಮುಲ್ಕಿ ಬಪ್ಪನಾಡುಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಮೂಲ್ಕಿ ಸೀಮೆಯ ಅರಸರಾದ ಶ್ರೀ ದುಗ್ಗಣ್ಣ ಸಾವಂತರು ಈಶ್ವರಪ್ಪನವರನ್ನು ಸ್ವಾಗತಿಸಿ ಗೌರವಿಸಿದರು. ಅರ್ಚಕ ಶ್ರೀಪತಿ ಉಪಾದ್ಯಾಯರು...

Close