ಕಟೀಲಿನಲ್ಲಿ ಸಾಮೂಹಿಕ ವಿವಾಹ

ಕಟೀಲು ಮೇ 01: ಕಟೀಲಿನ ಗೋಪಾಲಕೃಷ್ಣ ಆಸ್ರಣ್ಣ ಟ್ರಸ್ಟ್ ಮತ್ತು ಕೆ.ಲಕ್ಷ್ಮೀನಾರಾಯಣ ಆಸ್ರಣ್ಣ ಅಭಿನಂದನಾ ಸಮಿತಿಯ ಆಶ್ರಯದಲ್ಲಿ ಉಚಿತ ಸಾಮೂಹಿಕ ವಿವಾಹ ಸೋಮವಾರ ಗೋಪಾಲಕೃಷ್ಣ ಆಸ್ರಣ್ಣ ಸಭಾಭವನದಲ್ಲಿ ನಡೆಯಿತು. ಗೋಧೂಳಿ ಲಗ್ನ ಸುಮೂಹೂರ್ತದಲ್ಲಿ 13 ಜೋಡಿಗಳಿಗೆ ಕಂಕಣ ಭಾಗ್ಯ ಒದಗಿಸಲಾಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಂಡ್ಕೂರು ಮುಲ್ಲಡ್ಕ ಗುರುಪ್ರಸಾದ್ ಚಾರಿಟೇಬಲ್ ಟ್ರಸ್ಟ್‌ನ ವಿಶ್ವಸ್ಥ ರಾಘು. ಟಿ. ಶೆಟ್ಟಿ, ನಳಿನಿ ರಾಘು ಶೆಟ್ಟಿ, ಎಡಪದವು ಶ್ರೀ ಭೂತನಾಥೇಶ್ವರ ದೇವಳದ ಆಡಳಿತ ಮೊಕ್ತೇಸರ ವಿಜಯನಾಥ ವಿಠಲ ಶೆಟ್ಟಿ, ಎಡಪದವು ಕುದ್ರೆಬೆಟ್ಟು ಪದ್ಮನಾಭ ಗೌಡ ದಂಪತಿಯರನ್ನು ಸನ್ಮಾನಿಸಲಾಯಿತು. ಮೂಡಬಿದ್ರಿ ಆಳ್ವಾಸ್ ನ ಉಪನ್ಯಾಸಕಿ ಸುಧಾರಾಣಿ ಶೆಟ್ಟಿ ಉಪನ್ಯಾಸ ನೀಡಿದರು. ಮುಂಬೈನ ಕೇಶವ ಅಂಚನ್, ವಿಜಯಲಕ್ಷ್ಮಿ ಕೇಶವ ಅಂಚನ್, ಮರವೂರು ಜಗದೀಶ್ ಶೆಟ್ಟಿ, ಕಟೀಲು ಕಾಲೇಜು ಪ್ರಾಚಾರ್ಯ ಬಾಲಕೃಷ್ಣ ಶೆಟ್ಟಿ, ಸಸಿಹಿತ್ಲು ಭಗವತಿ ದೇವಳದ ಧರ್ಮಧರ್ಶಿ ಶ್ರೀನಿವಾಸ ಪೂಜಾರಿ, ಜಗನ್ನಾಥ ರಾವ್, ಸತೀಶ್ ಎನ್. ಬಂಗೇರ, ಧರ್ಮದರ್ಶಿ ಹರಿಕೃಷ್ಣ ಪುನರೂರು, ಭುವನಾಭಿರಾಮ ಉಡುಪ, ನಾರಾಯಣ ಎ. ಕೋಟ್ಯಾನ್, ಹೇಮ ಎನ್. ಕೋಟ್ಯಾನ್, ಜಯಂತಿ ಆಸ್ರಣ್ಣ, ಗೋಪಾಲಕೃಷ್ಣ ಆಸ್ರಣ್ಣ, ಮತ್ತಿತರರಿದ್ದರು. ಯುಗಪುರುಷದ ಭುವನಾಭಿರಾಮ ಉಡುಪ ಸ್ವಾಗತಿಸಿ, ಸತೀಶ್ ರಾವ್ ವಂದಿಸಿದರು, ರಘುನಾಥ ಕಾಮತ್, ಗುರುರಾಜ್ ಭಟ್ ಸನ್ಮಾನ ಪತ್ರ ವಾಚಿಸಿ ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಮುಲ್ಕಿ ಯುವ ಜಾಗೃತಿ ಸಮಾವೇಶ ಪ್ರಮುಖರ ಸಿದ್ದತಾ ಸಭೆ

Photos by Bhagyavan Sanil ಮುಲ್ಕಿ :  ಸದೃಢ ಭಾರತ ನಿರ್ಮಾಣಕ್ಕೆ ಯುವಕರನ್ನು ಪ್ರೇರಿಸುವ ಸಲುವಾಗಿ ಬೃಹತ್ ಯುವ ಜಾಗೃತಿ ಸಮಾವೇಶವು ಮಂಗಳೂರಿನಲ್ಲಿ ನಡೆಯಲಿದೆ ಎಂದು ಭಾರತೀಯ...

Close