ಇನ್ನಾ ಸಾಧನಾ ಪ್ರತಿಷ್ಠಾನ ಆಶ್ರಯದಲ್ಲಿ ಸನ್ಮಾನ

Photo by Bhagyavan Sanil

ಇನ್ನಾ ಮೇ ೦2: ನಮ್ಮ ಉನ್ನತ ಸಾಂಸ್ಕೃತಿಕ ಕಲೆಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಉಳಿಸಿ ಬೆಳೆಸಲು ಗ್ರಾಮೀಣ ಸೇವಾ ಸಂಸ್ಥೆಗಳು ಪರಿಣಾಮಕಾರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಕಳತ್ತೂರು ಜನಜಾಗೃತಿ ಸಮಿತಿ ಗೌರವಾಧ್ಯಕ್ಷ ಬಳ್ಳಾರಿ ಸುರೇಶ್ ಶೆಟ್ಟಿ ಹೇಳಿದರು.

ಇನ್ನಾ ಪೇಟೆ ವಠಾರದ ಕಾಂಜರಕಟ್ಟೆ ಮೋಹನ್‌ದಾಸ್ ಕಾಮತ್ ವೇದಿಕೆಯಲ್ಲಿ ಮಂಗಳವಾರ ರಾತ್ರಿ ಇನ್ನಾ ಸಾಧನಾ ಪ್ರತಿಷ್ಠಾನ ಆಶ್ರಯದಲ್ಲಿ ನಡೆದ ಯಕ್ಷಗಾನ ತಾಳಮದ್ದಲೆ-ಸನ್ಮಾನ ಕಾರ್ಯಕ್ರಮದ ಮುಖ್ಯಅತಿಥಿಯಾಗಿ ಮಾತನಾಡಿದರು.
ದಾನ ಮಾಡದ ಸಂಪತ್ತು ವ್ಯರ್ಥ ಎಂದು ವ್ಯಾಖ್ಯಾನಿಸಿದ ಅವರು ಗಳಿಕೆಯ ಒಂದಂಶವನ್ನಾದರೂ ಸಮಾಜದ ಕಟ್ಟಕಡೆಯ ಮನುಷ್ಯನ ಏಳಿಗೆಗಾಗಿ ವ್ಯಯಿಸಿ ಎಂದು ಸುರೇಶ್ ಅಭಿಪ್ರಾಯಿಸಿದರು.
ರಾಜ್ಯ ಪ್ರಶಸ್ತಿ ವಿಜೇತ ಕಂಚಿಲ್ದ ಬಾಲೆ ಚಿತ್ರದ ನಿರ್ಮಾಪಕ-ನಿರ್ದೇಶಕ ಕುಂಬ್ರ ರಘುನಾಥ ರೈ ಮತ್ತು ಮೈಸೂರು ಮುಕ್ತ ವಿವಿಯ ಎಂಬಿಎ ಪದವಿ ಪರೀಕ್ಷೆಯಲ್ಲಿ ಮೂರನೇ ರಾಂಕ್ ಗಳಿಸಿದ ಇನ್ನಾ ತೋಟ ಮನೆ ಸಂದೇಶ್ ಶೆಟ್ಟಿಯವರನ್ನು ಸನ್ಮಾನಿಸಲಾಯಿತು.,
ಮುಂಬೈ ಉದ್ಯಮಿ ಹಾಗೂ ಸಾಹಿತಿ ಕಾಚೂರು ಶೇಖರ ಆರ್.ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಉಡುಪಿ ಜೈ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಜನನಿ ದಿವಾಕರ ಶೆಟ್ಟಿ, ಮುಂಬೈ ಕರ್ನಾಟಕ ಮಲ್ಲ ಪತ್ರಿಕೆ ಅಂಕಣಕಾರ ನವೀನ್ ಕೆ.ಇನ್ನಾ, ಉದ್ಯಮಿ ಕೆ.ಸಿ.ಕಾಮತ್, ಎಸ್.ಕೆ.ಸಾಲ್ಯಾನ್ ಬೆಳ್ಮಣ್, ಪ್ರವೀಣ್ ಶೆಟ್ಟಿ ಪಡ್ಡಣಗುತ್ತು, ರಮಾನಂದ ಶಟ್ಟಿ ಕಾಚೂರು, ಪ್ರದೀಪ್ ಶೆಟ್ಟಿ ಇನ್ನದ ಗುತ್ತು, ಕೋಡು ಬೋಜ ಶೆಟ್ಟಿ, ಸುನೀಲ್ ಶೆಟ್ಟಿ ಮಡ್ಮಣ್‌ಗುತ್ತು, ಲಕ್ಷ್ಮೀಕಾಂತ ಭಟ್ ಮುಖ್ಯಅತಿಥಿಗಳಾಗಿದ್ದರು. ಪ್ರತಿಷ್ಠಾನ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಇನ್ನಾ ಸ್ವಾಗತಿಸಿದರು. ರಾಜೇಂದ್ರ ಭಟ್ ಕಾರ್ಯಕ್ರಮ ನಿರ್ವಹಿಸಿದರು. ವಿವೇಕ್ ಬಿ.ಎಸ್.ವಂದಿಸಿದರು.
ಬಳಿಕ ಕಾಚೂರು ಗೆಳೆಯರ ಬಳಗದ ಸಹಕಾರದೊಂದಿಗೆ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ವಾಲಿಸುಗ್ರೀವ, ಸುದನ್ವಾರ್ಜುನ ಯಕ್ಷಗಾನ ತಾಳಮದ್ದಲೆ ಜರಗಿತು.

Comments

comments

Leave a Reply

Read previous post:
ಪೇಜಾವರ ಮಠಾಧೀಶ ಶ್ರೀವಿಶ್ವೇಶತೀರ್ಥ ಶ್ರೀಪಾದರಿಗೆ ತುಲಾಭಾರ

Photos by Bhagyavan Sanil ಫಲಿಮಾರು ಮೇ ೦2 : ಫಲಿಮಾರು ಗ್ರಾಮದಲ್ಲಿರುವ ಫಲಿಮಾರು ಹೃಷಿಕೇಶ ಮುಲಮಠದಲ್ಲಿ ಶ್ರೀವಿದ್ಯಾಮಾನ್ಯರ ತೀರ್ಥರ ಪೂರ್ವಾರಾಧನೆ-ಗುರು ಅಭಿವಂದನಾ ಸಮಾರಂಭದ ಅಂಗವಾಗಿ ಪೇಜಾವರ...

Close