ಪೇಜಾವರ ಮಠಾಧೀಶ ಶ್ರೀವಿಶ್ವೇಶತೀರ್ಥ ಶ್ರೀಪಾದರಿಗೆ ತುಲಾಭಾರ

Photos by Bhagyavan Sanil

ಫಲಿಮಾರು ಮೇ ೦2 : ಫಲಿಮಾರು ಗ್ರಾಮದಲ್ಲಿರುವ ಫಲಿಮಾರು ಹೃಷಿಕೇಶ ಮುಲಮಠದಲ್ಲಿ ಶ್ರೀವಿದ್ಯಾಮಾನ್ಯರ ತೀರ್ಥರ ಪೂರ್ವಾರಾಧನೆ-ಗುರು ಅಭಿವಂದನಾ ಸಮಾರಂಭದ ಅಂಗವಾಗಿ ಪೇಜಾವರ ಅಧೋಕ್ಷಜ ಮಠಾಧೀಶ ಶ್ರೀವಿಶ್ವೇಶತೀರ್ಥ ಶ್ರೀಪಾದರಿಗೆ ಗೌರವ ಸಮರ್ಪಣೆ ಅಂಗವಾಗಿ ತುಲಾಭಾರ ನಡೆಸಲಾಯಿತು.
ವಿಶ್ವೇಷತೀರ್ಥರ 82ನೇ ಜನ್ಮದಿನಾಚರಣೆ ಅಂಗವಾಗಿ ಅವರ ಪ್ರೀತಿಯ ಶಿಷ್ಯರು ಮತ್ತು ಅಭಿಮಾನಿ ಬಳಗದವರು ಕಾರ್ಯಕ್ರಮ ಏರ್ಪಡಿಸಿದರು. ಕಾರ್ಯಕ್ರಮದಲ್ಲಿ 11ಸಾವಿರ ರೂ. ನಾಣ್ಯದಲ್ಲಿ ತುಲಾಭಾರ ನಡೆಸಲಾಯಿತು. ಶ್ರೀಗಳಿಗೆ ಮಠದ ವತಿಯಿಂದ ಹುಟ್ಟು ಹಬ್ಬದ ಪ್ರಯುಕ್ತ ಫಲಿಮಾರು ಮಠಾಧೀಶ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು, ಪೇಜಾವರ ಶ್ರೀಗಳಿಗೆ 82ಸಾವಿರ ರೂ. ಕಾಣಿಕೆಯಾಗಿ ನೀಡಿ ಗೌರವಿಸಿದರು.
ಈ ವೇಳೇ ಮಾತನಾಡಿದ ಪೇಜಾವರ ಶ್ರೀಗಳು, ತುಲಾಭಾರ ನಡೆಸಿದ ಹಣವನ್ನು ಬರಪೀಡಿತ ಪ್ರದೇಶಗಳಿಗೆ ವಿನಿಯೋಗಿಸಲಾಗುವುದು ಅಲ್ಲದೆ ಕಾಣಿಕೆಯಾಗಿ ನೀಡಿದ ಹಣವನ್ನು ಜ್ಞಾನಾರ್ಜನೆಗೆ ಉಪಯೋಗಿಸಲಾಗುವುದು ಎಂದರು.
ಶ್ರೀವಿದ್ಯಾಮಾನ್ಯ ತೀರ್ಥರ ಜನ್ಮಶತಮಾನೋತ್ಸವ ಅಂಗವಾಗಿ ಸಂಶೋಧಿಸಿ ರಚಿಸಲಾದ ಮಹಾಭಾರತ ಕೋಶ (2ಸಂಪುಟ) ಗ್ರಂಥವನ್ನು ಪೇಜಾವರ ಶ್ರೀಗಳು ಬಿಡುಗಡೆಗೊಳಿಸಿದರು.
ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಪ್ರಯಾಗ ಮಠಾಧೀಶ ಶ್ರೀವಿದ್ಯಾತ್ಮತೀರ್ಥ ಶ್ರೀಪಾದರು, ಎಮ್.ಬಿ.ಪುರಾಣಿಕ್, ಕಸಾಪ ದಕ ಜಿಲ್ಲಾಧ್ಯಕ್ಷ ಪ್ರದೀಪ್‌ಕುಮಾರ್ ಕಲ್ಕೂರ, ನಾಗರಾಜ್ ಬಲ್ಲಾಳ್ ಉಪಸ್ಥಿತರಿದ್ದರು.
ವೇದವ್ಯಾಸ ತಂತ್ರಿ ಸ್ವಾಗತಿಸಿದರು. ಸಗ್ರಿ ರಾಘವೇಂದ್ರ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.

Comments

comments

Leave a Reply

Read previous post:
ಫಲಿಮಾರು ಮಠದಲ್ಲಿ ಪೇಜಾವರ ಶ್ರೀಗಳ 82ನೇ ಜನ್ಮದಿನಾಚರಣೆ

Photos by Bhagyavan Sanil ಪಡುಬಿದ್ರಿ, ಮೇ ೦೨: ಪ್ರತಿಯೊಂದು ವಿಷಯದ ಸತ್ಯಾಸತ್ಯತೆಯ ವಿಮರ್ಶಕ ದೃಷ್ಟಿಯಿಂದ ನೋಡುವ ಕ್ರಿಯೆ ನಮ್ಮಲ್ಲಿ ಬೆಳೆಯಬೇಕು. ಆಧುನೀಕತೆಗೆ ಇದು ಅತ್ಯಂತ ಪ್ರಸ್ತುತ ಎಂದು...

Close