ಫಲಿಮಾರು ಮಠದಲ್ಲಿ ಪೇಜಾವರ ಶ್ರೀಗಳ 82ನೇ ಜನ್ಮದಿನಾಚರಣೆ

Photos by Bhagyavan Sanil

ಪಡುಬಿದ್ರಿ, ಮೇ ೦೨: ಪ್ರತಿಯೊಂದು ವಿಷಯದ ಸತ್ಯಾಸತ್ಯತೆಯ ವಿಮರ್ಶಕ ದೃಷ್ಟಿಯಿಂದ ನೋಡುವ ಕ್ರಿಯೆ ನಮ್ಮಲ್ಲಿ ಬೆಳೆಯಬೇಕು. ಆಧುನೀಕತೆಗೆ ಇದು ಅತ್ಯಂತ ಪ್ರಸ್ತುತ ಎಂದು ಪೇಜಾವರ ಅಧೋಕ್ಷಜ ಮಠಾಧೀಶ ಶ್ರೀವಿಶ್ವೇಶತೀರ್ಥ ಶ್ರೀಪಾದರು ಹೇಳಿದರು.

ಫಲಿಮಾರು ಗ್ರಾಮದಲ್ಲಿರುವ ಫಲಿಮಾರು ಹೃಷಿಕೇಶ ಮೂಲಮಠದಲ್ಲಿ ಮಂಗಳವಾರ ಆರಂಭಗೊಂಡ ಪೇಜಾವರ ಶ್ರೀಗಳ 82ನೇ ಜನ್ಮದಿನಾಚರಣೆ ಅಂಗವಾಗಿ ನಡೆದ ಗುರುಅಭಿನಂದನಾ ಶ್ರೀವಿದ್ಯಾಮಾನ್ಯ ತೀರ್ಥರ ಪೂರ್ವಾರಾಧನೆ, ಶ್ರೀನಿವಾಸ ಕಲ್ಯಾಣ ಪರ್ವೋತ್ಸವ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವದಿಸಿದರು.
ಜ್ಞಾನ ಜಾಋತಿ ಅಂಗವಾಗಿ ಮಠದಲ್ಲಿ ನಡೆದ ಅನುವ್ಯಾಖ್ಯಾನ ಮತ್ತು ಬ್ರಹ್ಮಸೂತ್‌ಗಳ ನ್ಯಾಯಸುಧಾನುವಾದವು ತನ್ನ ಜನ್ಮದಿನಕ್ಕೆ ನೀಡಿದ ಸಿಹಿ ಕೊಡುಗೆ ಎಂದು ಹರ್ಷ ವ್ಯಕ್ತಪಡಿಸಿದ ಶ್ರೀಗಳು ಪ್ರಾಚೀನ ದಾರ್ಶನಿಕರು ಮತ್ತು ಆಧುನಿಕರಿಗೆ ಈ ನ್ಯಾಯಸುಧಾದ ಉತ್ತರವು ಎಂದೆಂದಿಗೂ ಜೀವಂತವಾಗಿರಿಸಿದೆ ಎಂದರು, ಫಲಿಮಾರು ಮಠಾಧೀಶ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು ಶ್ರೀಬ್ರಹ್ಮಸೂತ್ರ-ಅನುವ್ಯಾಖ್ಯಾನದ ನ್ಯಾಯಸುಧಾನುವಾದಗೈದ ಭಕ್ತರನ್ನು ಆಶೀರ್ವದಿಸಿದರು.

ಪ್ರಶಸ್ತಿ ಪ್ರಧಾನ:

ಶ್ರೀವಿದ್ಯಾಮಾನ್ಯ ತೀರ್ಥ ಶ್ರೀಪಾದರು ಸಂಸ್ಮರಣಾರ್ಥವಾಗಿ ನೀಡುವ ’ಪರವಿದ್ಯಾಮಾನ್ಯ ಪ್ರಶಸ್ತಿಯನ್ನು ಬೆಂಗಳೂರು ವಿದ್ವಾನ್ ಡಿ.ಪ್ರಹ್ಲಾದಾಚಾರ್ಯರಿಗೆ ನೀಡಿ ಗೌರವಿಸಲಾಯಿತು. ಪ್ರಶಸ್ತಿಯು 1,11,111 ನಗದು, ಬೆಳ್ಳಿ ಫಲಕವನ್ನು ಒಳಗೊಂಡಿತ್ತು.
ಅನ್ನದಾನ ಮತ್ತು ದ್ರವ್ಯದಾನದ ಲಕ ಶ್ರೀಮಧ್ವರಾಜ ಸೂರ್ಯ ಯಾಗದ ಯಜಮಾನತ್ವ ವಹಿಸಿ ಯಶಸ್ವಿಗೊಳಿದ ಚಿಂತರವೇಲಿಯ ಪ್ರಾಣದೇವರ ಅರ್ಚಕ ಆದ್ಯಕೇಶವಾಚಾರ್ಯರಿಗೆ ಚಕ್ರವರ್ತಿ ಪ್ರಶಸ್ತಿ ಜತೆಗೆ ನಗದು ರೂ. 5 ಸಾವಿರ, ಬೆಳ್ಳಿ ಫಲಕ ನೀಡಿ ಗೌರವಿಸಲಾಯಿತು.
ಫಲಿಮಾರು ಮಠದ ಶ್ರೀಯೋಗದೀಪಿಕಾ ಗುರುಕುಲದಲ್ಲಿ 12ವರ್ಷಗಳ ಕಾಲ ಶಾಸ್ತ್ರಾಧ್ಯಾಯನ ನಡೆಸಿ, ಶ್ರೀಪಾದರಿಂದ ಸುಧಾಂತ-ವೇದಾಂತ ಅಧ್ಯಯನ ನಡೆಸಿದ ವಿದ್ಯಾರ್ಥಿಗಳಾದ ಸುರೇಶ್ ಭಟ್ ಬೈಲೂರು, ವಾಸುದೇವ ಉಪಾದ್ಯಾಯ ಬನ್ನಂಜೆ, ನಂದನ ಕುಂಜಿತ್ತಾಯ ಉಡುಪಿ, ವ್ಯಾಸರಾಯ ಆಚಾರ್ಯ, ಎಳ್ಳಾರೆ ಪ್ರಕಾಶ್ ಭಟ್ ಹೆರ್ಮುಂಡೆ ರಾಘವೇಂದ್ರ ರಾವ್ ಉದ್ಯಾವರ, ಶ್ರೀಹರಿ ಕಲ್ಲೂರಾಯ ಪೆರ್ಣಂಕಿಲ, ಗುರುಪ್ರಸಾದ್ ಭಟ್ ದರೆಗುಡ್ಡೆ, ಮಂಜುನಾಐ ಉಪಾದ್ಯಾಯ ಸಾಂತ್ಯಾರು, ನವನೀತ ಕೃಷ್ಣ ಭಟ್ ಸಗ್ರಿ ಮತ್ತು ಹೃಷಿಕೇಶ ಐತಾಳ್ ಸಗ್ರಿಯವರಿಗೆ ನಗದು ರೂ. 1ಲಕ್ಷ, ಚಿನ್ನದ ತುಳಸಿ ಸರ ನೀಡಿ ಗೌರವಿಸಲಾಯತಿತು.
ಪೇಜಾವರ ಕಿರಿಯ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಬನ್ನಂಜೆ ಶ್ರೀರಾಘವೇಂದ್ರ ತೀರ್ಥರು, ಮಂತ್ರಾಲಯ ಶ್ರೀರಾಘವೇಂದ್ರ ಮಠದ ಕಾರ್ಯದರ್ಶಿ ರಾಜಾಸುಮಮೀಂದ್ರ ಆಚಾರ್ಯ ಇದ್ದರು. ಸಗ್ರ ರಾಘವೇಂದ್ರ ಆಚಾರ್ಯ ಸ್ವಾಗತಿಸಿದರು. ಶ್ರೀಮಠದ ವ್ಯವಸ್ತಾಪಕ ಪಿ.ಬಲರಾಮ ಭಟ್ ವಂದಿಸಿದರು.

ಸಮಾರಂಭಕ್ಕೆ ಮುನ್ನ ಶ್ರೀಹೃಷಿಕೇಶ ತೀರ್ಥ ಹಸ್ತಲಿಖಿತ ಸರ್ವಮೂಲ ಗ್ರಂಥ ಹಾಗೂ ಶ್ರೀಮನ್ಯಾಯ ಸುಧಾ ಗ್ರಂಥಗಳ ಮೆರವಣಿಗೆ ನಡೆಯಿತು.

Comments

comments

Leave a Reply

Read previous post:
ಕಾರ್ಮಿಕರ ದಿನಾಚರಣೆಯಂದು ದುರ್ಘಟನೆ

Photos by Narendra Kerekadu  & Sunil Haleyangadi ಹಳೆಯಂಗಡಿ: ಮೇ 01 : ಮನೆ ನಿವೇಶನದ ಜಮೀನಿನಲ್ಲಿ ಕುಡಿಯುವ ನೀರಿನ ಬಾವಿಯನ್ನು ತೋಡುತ್ತಿದ್ದಾಗ ಮಣ್ಣಿನ ಅಡಿಯಲ್ಲಿ ಸಿಲುಕಿ...

Close