ಬೆಳಪು – ಪ್ರಾಯೋಗಿಕ ಘನತ್ಯಾಜ್ಯ ವಿಲೇವಾರಿ ಘಟಕ

Bhagyavan Sanil

ಪಡುಬಿದ್ರಿ, ಮೇ03: ಪ್ರತಿಯೊಂದು ಸ್ಥಳಿಯಾಡಳಿತವು ತ್ಯಾಜ್ಯ ವಿಲೇವಾರಿ ಸಮಸ್ಯೆಯಿಂದ ಬಳಲುತ್ತಿದ್ದು ಬೆಳಪು ಗ್ರಾಮದಲ್ಲಿ ಅಳವಡಿಸಲಾದ ಪ್ರಾಯೋಗಿಕ ಘನತ್ಯಾಜ್ಯ ವಿಲೇವಾರಿ ಘಟಕವು ಇತರ ಗ್ರಾಪಂ ಗಳಿಗೆ ಮಾದರಿಯಾಗಿದೆ ಎಂದು ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಹೇಳಿದರು.
ಬುಧವಾರ ಬೆಳಪು ಗ್ರಾಪಂ ಹಾಗೂ ಬೆಂಗಳೂರಿನ ಗ್ರೀನ್ ನರ್ಡ್ಸ್ ಸೆಲ್ಯೂಷನ್ ಸಹಯೋಗದೊಂದಿಗೆ ಸುಮರು 7 ಲಕ್ಷ ರೂ ವೆಚ್ಚದಲ್ಲಿ ಪ್ರಾಯೋಗಿಕವಾಗಿ ಬೆಳಪು ಗ್ರಾಮದಲ್ಲಿ ಸ್ಥಾಪಿಸಲಾದ ಸ್ವಯಂಚಾಲಿತ ಘನತ್ಯಾಜ್ಯ ವಿಲೇವಾರಿ ಘಟಕ ಚಾಲನೆಗೊಳಿಸಿ ಮೆಂಡನ್ ಮಾತನಾಡಿದರು. ಸರಕಾರದ ನಿರ್ದೇಶನದಂತೆ ಪ್ರತಿಯೊಂದು ಕಡೆ ಘನ- ದ್ರವ ತ್ಯಾಜ್ಯ ವಿಲೇವಾರಿ ಕಡ್ಡಾಯವಾಗಿದೆ. ಸರಕಾರಿ ಜಾಗದ ಕೊರತೆ ಸ್ಥಳೀಯರ ವಿರೋದಗಳಿಂದ ಕಂಗೆಟ್ಟಿರುವ ಗ್ರಾಪಂಗಳಿಗೆ ಈ ಯೋಜನೆ ಆಶಾದಯಕವಾಗಿದ್ದು , ಇಲ್ಲಿನ ಯೋಜನೆಯ ಯಶಸ್ಸನ್ನು ಅನುಸರಿಸಿ ಅಳವಡಿಸಿಕೊಳ್ಳಬೇಕೆಂದು ಉಪಸ್ಥಿತರಿದ್ದ ಹಲವು ಗ್ರಾಪಂ ಅಧ್ಯಕ್ಷರಿಗೆ ಶಾಸಕರು ಮನವಿ ಮಾಡಿದರು.
ಉಡುಪಿ ಜಿಪಂ ಅಧ್ಯಕ್ಷ ಕಟಪಾಡಿ ಶಂಕರ ಪೂಜಾರಿ ಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ ಕಟಪಾಡಿ ಗ್ರಾಮದಲ್ಲಿ ಈ ಯೋಜನೆ ಜಾರಿಗೊಳಿಸಲು ಮುತುವರ್ಜಿವಹಿಸುವುದಾಗಿ ಘೋಷಿಸಿದರು. ಜಿಪಂ ಉಪಕಾರ್ಯದರ್ಶಿ ಡಿ.ಪ್ರಾಣೇಶ್ ರಾವ್ ಮಾತನಾಡಿ ಇಂದು ಮೈಸೂರಿನಲ್ಲಿ ತ್ಯಾಜ್ಯ ವಿಲೇವಾರಿ ಬಗ್ಗೆ ಸುಪ್ರಿಂಕೋರ್ಟ್ ನ್ಯಾಯಾಧೀಶರ ಸಮ್ಮುಖ ಅದಾಲತ್ ನಡೆಯುತ್ತಿದ್ದು ಉಡುಪಿ ಜಿಲ್ಲಾಧಿಕಾರಿ ಹಾಗೂ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಯವರು ಬೆಳಪು ಗ್ರಾಮದ ತ್ಯಾಜ್ಯ ವಿಲೇವಾರಿ ಘಟಕದ ಬಗ್ಗೆ ಸಿ.ಡಿ. ಮೂಲಕ ಮಾಹಿತಿ ನೀಡಲಿದ್ದಾರೆ ಎಂದು ತಿಳಿಸಿದರು.
ಮಾಜಿ ಸಚಿವ ವಸಂತ ವಿ.ಸಾಲ್ಯಾನ್, ಉಡುಪಿ ತಾಪಂ ಅಧ್ಯಕ್ಷ ದೇವದಾಸ ಹೆಬ್ಬಾರ್, ಜಿಪಂ ಸದಸ್ಯ ಅರುಣ್ ಶೆಟ್ಟಿ ಪಾದೂರು, , ತಾಪಂ ಕಾರ್ಯ ನಿರ್ವಹಣಾಧಿಕಾರಿ ಡಿ.ಮಂಜುನಾಥಯ್ಯ , ಸಹಾಯಕ ಅಂಚೆ ಅಧೀಕ್ಷಕ ಧನಂಜಯ ಆಚಾರ್, ಬೆಳಪು ಗ್ರಾಪಂ ಉಪಾಧ್ಯಕ್ಷ ನಿರಂಜನ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.
ಗ್ರಾಪಂ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಪಿಡಿಒ ಅಪ್ಪು ಶೇರಿಗಾರ್ ವಂದಿಸಿದರು. ಗ್ರೀನ್‌ನರ್ಡ್ಸ್ ಸಂಸ್ಥೆಯ ಆಡಳಿತ ನಿದೇಶಕ ನಿಧೀಶ್ ಶೆಟ್ಟಿ, ನಿರ್ದೇಶಕ ಅಬಿಮಾನ್ ಶೆಟ್ಟಿ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು. ವಿಶ್ವನಾಥ್ ಬೆಳಪು ನಿರ್ವಹಿಸಿದರು.

ವಿದೇಶಗಳಲ್ಲಿ ಉನ್ನತ ಉದ್ಯೋಗದಲ್ಲಿದ್ದು ಗ್ರಾಮಿಣ ಮೂಲಭೂತ ಸಮಸ್ಯೆಗಳ ಬಗ್ಗೆ ಅರಿವಿದ್ದ ನಿಧೀಶ್ ಶೆಟ್ಟಿ ಮತ್ತು ಅಭಿಮಾನ್ ಶೆಟ್ಟಿ, ಗ್ರೀನ್ ನರ್ಡ್ಸ್ ಸೆಲ್ಯೂಷನ್ ಪ್ರೈ.ಲಿ.ಸಂಸ್ಥೆ ಸ್ಥಾಪಿಸಿ ಸಂಶೋಧಿಸಿ ತಯಾರಿಸಿದ ಯಂತ್ರವೇ ಈ ಘನತ್ಯಾಜ್ಯ ಘಟಕ. ಸ್ವಯಂ 7 ಲಕ್ಷ ರೂ. ವ್ಯಹಿಸಿ ಹುಟ್ಟೂರು ಬೆಳಪು ಗ್ರಾಮದಲ್ಲಿ ಪ್ರಾಯೋಗಿಕ ಯಂತ್ರ ಸ್ಥಾಪಿಸಿ ಈಗಾಗಲೇ ತ್ಯಾಜ್ಯ ವಿಲೇವಾರಿ ಆರಂಭಿಸಲಾಗಿದೆ.
2 ಪ್ರತ್ಯೇಕ ಯಂತ್ರಗಳ ಮೂಲಕ ಈ ಯೋಜನೆ ಅಸ್ತಿತ್ವದಲ್ಲಿದೆ. ಪ್ಲಾಸ್ಟಿಕ್, ಕಬ್ಬಿಣ, ಗ್ಲಾಸು ಮತ್ತಿತರ ಒಣ ತ್ಯಾಜ್ಯಗಳನ್ನು ಪ್ರತ್ಯೇಕಿಸಿ ಸಂಕುಚಿತಗೊಳಿಸುವುದು ಒಂದು ಯಂತ್ರದ ಕಾರ್ಯ. ಇನ್ನೊಂದು ದುರ್ವಾಸನೆಯುಕ್ತ ಘನ ತ್ಯಾಜ್ಯಗಳನ್ನು ಪ್ರತ್ಯೇಕಿಸಿ (ತರಕಾರಿ, ಆಹಾರ ಇತ್ಯಾದಿ) ಹುಡಿಮಾಡಿ ಪೌಡರ್ ರೀತಿಯಲ್ಲಿ ನೈಸರ್ಗಿಕ ಪೌಷ್ಟಿಕ ಗೊಬ್ಬರವಾಗಿ ಪರಿವರ್ತಿಸುವುದು ಇನ್ನೊಂದು ಯಂತ್ರದ ಕೆಲಸ, ಈ ಗೊಬ್ಬರಕ್ಕೆ ಈಗಾಗಲೇ ಸ್ಥಳೀಯ ರೈತರಿಂದ ಬೇಡಿಕೆ ಬರಲಾರಂಭಿಸಿದ್ದು, ಯೋಜನೆ ಯಶಸ್ವಿಯ ಮುನ್ಸೂಚನೆಯಾಗಿದೆ. ಕಡಿಮೆ ವೆಚ್ಚ , ಕಡಿಮೆ ಪ್ರದೇಶ (30/ 60 ಅಡಿ) ದಲ್ಲಿ ಸಂಪೂರ್ಣ ಕಸವಿಲೇವಾರಿಗೆ ಯೋಜನೆ ರೂಪಿಸಲಾಗಿದೆ.
ವಿವಿಧ ಗ್ರಾಪಂ ಅಧ್ಯಕ್ಷರುಗಳಾದ ಅಲೆವೂರು ಹರೀಶ್ ಕಿಣಿ, ಎಲ್ಲೂರು ಸುಮನ, ಕಾಪು ಯೋಗೀಶ್ ರೈ, ಉಳಿಯಾರ ಗೋಳಿ ಅರುಣ್ ಶೆಟ್ಟಿ , ಶಿರ್ವ
ವನಿತಾ ಶೆಣೈ, ಮುದರಂಗಡಿ ಸುನಿಲ್‌ರಾಜ್ ಶೆಟ್ಟಿ, ವಾರಂಬಳ್ಳಿ ಎಸ್. ನಾರಯಣ್, ಕೋಡಿಬೆಟ್ಟು ಸುಂದರ ಶೇರಿಗಾರ್, ಮಜೂರು ಗಣೇಶ್ ಶೆಟ್ಟಿ, ಇನ್ನಂಜೆ ವಸಂತಿ, ೮೦ ಬಡಗಬೆಟ್ಟು ವಾಸುದೇವ ನಾಯಕ್, ಕುತ್ಯಾರು ನಿತ್ಯಾನಂದ ಶೆಟ್ಟಿ ಹಾಗೂ ಹಲವಾರು ಗ್ರಾಪಂಗಳ ಅಧಿಕಾರಿಗಳು ಬುಧವಾರ ಭೇಟಿ ನೀಡಿ ಈ ಯಂತ್ರದ ಬಗ್ಗೆ ಆಸಕ್ತಿ ವಹಿಸಿದ್ದಾರೆ.

Comments

comments

Leave a Reply

Read previous post:
ತೀರದ ಬದುಕು

Photo by Prakash Mulki

Close